ಜನೌಷಧ ಕೇಂದ್ರ ಇನ್ನಷ್ಟು ವಿಸ್ತರಣೆ; ಕೇಂದ್ರ ಸಚಿವ ಭಗವಂತ ಖೂಬಾ
ಜನೌಷಧ ಮಿತ್ರ ಸಮ್ಮೇಳನ
Team Udayavani, Oct 30, 2021, 7:00 AM IST
ಮಂಗಳೂರು: ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧ ಒದಗಿಸುವ ಉದ್ದೇಶದಿಂದ ಆರಂಭಿಸಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರ ಗಳನ್ನು ಇನ್ನಷ್ಟು ವಿಸ್ತರಿಸಲು ಉದ್ದೇಶಿಸಿದ್ದು ವೈದ್ಯರು, ಆಶಾ ಕಾರ್ಯ ಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತರು ಸಹಕರಿಸಬೇಕು ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ಹಾಗೂ ನವೀನ ಮತ್ತು ನವೀಕರಿಸ ಬಹುದಾದ ಇಂಧನ ಖಾತೆಯ ಸಚಿವ ಭಗವಂತ ಖೂಬಾ ಹೇಳಿದರು.
ಅವರು ಶುಕ್ರವಾರ ಕೊಡಿಯಾಲ ಬೈಲ್‌ನ ರಮಣ್ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರದ ವತಿಯಿಂದ ರಾಷ್ಟ್ರೀಯ ಏಕತಾ ಸಪ್ತಾಹದ ಪ್ರಯುಕ್ತ ನಡೆದ ಜನೌಷಧ ಮಿತ್ರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಚಿವ ಎಸ್. ಅಂಗಾರ ಅವರು, ಕೇಂದ್ರ ಸರಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡ ಬೇಕು ಎಂದರು.
ಕ್ರಾಂತಿಕಾರಿ ಯೋಜನೆ
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜನೌಷಧ ಕೇಂದ್ರ ಪರಿಕಲ್ಪನೆಯು ಕೇಂದ್ರ ಸರಕಾರದ ಕ್ರಾಂತಿಕಾರಿ ಯೋಜನೆ ಎಂದರು. ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಜನೌಷಧ ಕೇಂದ್ರಗಳು ಲಾಭದಾಯಕವಲ್ಲದಿದ್ದರೂ ಸೇವಾ ಮನೋಭಾವದಿಂದ ನಡೆಸಲಾಗುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ವೇದವ್ಯಾಸ ಕಾಮತ್, ದ.ಕ. ಜಿಲ್ಲೆಯಲ್ಲಿ ಇನ್ನಷ್ಟು ಜನೌಷಧ ಮಳಿಗೆಗಳನ್ನು ಆರಂಭಿಸಲು ಸಂಬಂಧ ಪಟ್ಟ ಎಲ್ಲರು ಸಹಕರಿಸ ಬೇಕು ಎಂದರು.
ಇದನ್ನೂ ಓದಿ:ಟಿ20 ವಿಶ್ವಕಪ್: ಪಾಕಿಸ್ಥಾನ ಗೆಲುವಿನ ಹ್ಯಾಟ್ರಿಕ್
ಮೇಯರ್ ಪ್ರೇಮಾನಂದ ಶೆಟ್ಟಿ, ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ವಿವಿಧ ನಿಗಮಗಳ ಅಧ್ಯಕ್ಷ ರಾದ ನಿತಿನ್ ಕುಮಾರ್, ಸಂತೋಷ್ ಕುಮಾರ್ ಶೆಟ್ಟಿ ಬೋಳಿಯಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಡಿಎಚ್‌ಒ ಡಾ| ಕಿಶೋರ್ ಕುಮಾರ್, ಉಡುಪಿ ಎಡಿಸಿ ಡಾ| ಸದಾಶಿವ ಪ್ರಭು, ಉಡುಪಿ ಡಿಎಚ್‌ಒ ಡಾ| ನಾಗಭೂಷಣ್ ಉಡುಪ, ಗಣ್ಯರಾದ ಪ್ರೊ| ಸಿ.ಎಸ್. ಶಾಸ್ತ್ರಿ, ಡಾ| ನವೀನ್ ಕುಮಾರ್ ಬಿ.ಸಿ., ಡಾ| ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಜಿಎಂ ರವಿಕಾಂತ್ ತಿವಾರಿ, ಡಿಜಿಎಂ ಕುಂದನ್ ಸಿಂಗ್, ಡಾ| ಅನಿಲ ವೇದಿಕೆಯಲ್ಲಿದ್ದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
ಪ್ಲಾಸ್ಟಿಕ್ ಪಾರ್ಕ್ ಶೀಘ್ರ ಬರಲಿದೆ
ಮಂಗಳೂರು ಸಮೀಪದ ಗಂಜೀಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಬಗ್ಗೆ ಅನುಮಾನ ಬೇಡ. ಸ್ಥಳ ಪರಿಶೀಲನೆ ನಡೆಸಿದ್ದು, ಈ ಯೋಜನೆ ಶೀಘ್ರ ಕಾರ್ಯಗತ ಮಾಡಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಖೂಬಾ ತಿಳಿಸಿದರು.
ಆ್ಯಪ್ ಮೂಲಕ ಮಾಹಿತಿ
ಜನೌಷಧ ಕೇಂದ್ರಗಳು ಎಲ್ಲೆಲ್ಲಿ ಇವೆ ಮತ್ತು ಅಲ್ಲಿರುವ ಔಷಧಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಪ್ರತ್ಯೇಕ ಆ್ಯಪ್ ತಯಾರಿಸುವ ಚಿಂತನೆ ನಡೆದಿದೆ. ಔಷಧಗಳು ಮುಗಿದಾಗ ಆನ್‌ಲೈನ್ ಮೂಲಕ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಭಗವಂತ ಖೂಬಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.