ನಾನು ಅವನಲ್ಲ ನೀತು ಆರ್‌ ಎಸ್‌


Team Udayavani, Jul 25, 2020, 10:39 PM IST

ನಾನು ಅವನಲ್ಲ ನೀತು ಆರ್‌ ಎಸ್‌

ಗಲ್‌ ಎನ್ನೊ ಕೈ ಬಳೆ, ಹಣೆಗೊಂದು ಬಿಂದಿ, ಜಲ್‌ ಎನ್ನೊ ಕಾಲ್ಗೆಜ್ಜೆ ತೊಟ್ಟು ಮಿನುಗಬೇಕು. ಜಾತ್ರೆ ಬಂದರೆ ರಿಬ್ಬನ್‌, ನೈಲ್‌ ಪಾಲಿಶ್‌ ತೆಗೆದುಕೊಳ್ಳಬೇಕು ಆದರೆ ಆಗುತ್ತಿಲ್ಲ. ನನಗೆಕೆ ಹೀಗೆ ಅನಿಸುತ್ತೇ ಅಪ್ಪ ಆಟದ ಸಾಮಾನಿನಲ್ಲಿ ಕಾರು, ಬುಲ್ಡೋಸರ್‌, ಬ್ಯಾಟ್‌ ಎಂದು ಕೊಡಿಸಲು ಮುಂದಾದರೂ ಅಲ್ಲೆ ಪಕ್ಕದಲ್ಲಿರುವ ಅಡುಗೆ ಪಾತ್ರೆ, ಮುದ್ದಾದ ಬೊಂಬೆ ಕಡೆಯೇ ನನ್ನ ಕಣ್ಣುಗಳು ಹೊರಳುತ್ತವೆ. ಬಾಯಿಬಿಟ್ಟು ಕೇಳಿದರೆ ನೀನೆನು ಹುಡುಗಿನಾ ಅನ್ನೊ ಗದರುವಿಕೆ ನನ್ನೆಲ್ಲಾ ಆಸೆಯನ್ನು ಅದುಮಿಡುವಂತೆ ಮಾಡಿಬಿಟ್ಟಿದೆ. ಇದು ಬಹುತೇಕ ಮಂಗಳಮುಖೀಯರ ಮನದಾಳದ ಇಂಗಿತ. ಅದಕ್ಕೆ ಉತ್ತರ ಕಂಡುಕೊಂಡಾಗಲೇ ನಿಜವಾದ ಸ್ಥಿತಿ ಅವರ ಅರಿವಿಗೆ ಬರುತ್ತದೆ.

ಮಂಗಳಮುಖೀಯರಲ್ಲಿ ಪೊಲೀಸ್‌ ಅಧಿಕಾರಿ, ಟ್ಯಾಟೊ ಡಿಸೈನರ್‌, ಬ್ಯೂಟಿಶಿಯನ್‌, ವಕೀಲರು ಹೀಗೆ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಕಾಣಬಹುದು. ಅಂತವರಲ್ಲಿ ನಿತು ಆರ್‌.ಎಸ್‌. ಕೂಡ ಒಬ್ಬರು. ಗದಗ್‌ ಮೂಲದವರಾದ ಇವರ ಪೂರ್ವ ಹೆಸರು ಮಂಜುನಾಥ್‌. ತಾನೇಕೆ ಸಾಮಾನ್ಯರಂತೆ ಇಲ್ಲ ಎಂಬ ಪ್ರಶ್ನೆ ಅವರನ್ನು ಕಾಡಿದಾಗ ಗೂಗಲ್‌ ಸಹಾಯದಿಂದ 11ನೇ ವಯಸ್ಸಿನಲ್ಲಿ ತಾನು ಮಂಗಳಮುಖೀ ಎನ್ನುವ ನಿಜ ಸ್ಥಿತಿ ಅರಿವಿಗೆ ಬಂದಿತ್ತು. ಆದರೆ ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿದ ಕಾರಣ, ಮನೆಯಿಂದ ಹೊರಹಾಕಬಹುದೆಂಬ ಭಯ ತನ್ನೆಲ್ಲಾ ಭಾವನೆಯನ್ನು ಅದುಮಿಟ್ಟು ಸಾಮಾನ್ಯರಂತೆ ನಟಿಸುತ್ತ ಬದುಕಬೇಕಾಗಿ ಬಂತು. ಮನೆಯಲ್ಲಿ ಆದಾಯದ ಸಮಸ್ಯೆ ಇರುವ ಕಾರಣ ತನ್ನ ತಾಯಿ ಮತ್ತು ಸಹೋದರಿಯ ಜತೆ ಹೂ ಕಟ್ಟುವ ಮತ್ತು ಮಾರುವ ಕೆಲಸಮಾಡುತ್ತಿದ್ದರು. ಬಳಿಕ ಶಾಲಾ ಶಿಕ್ಷಣದ ಅವಧಿಯಲ್ಲಿಯೇ ಚಿತ್ರ ಕಲೆಯ ಕುರಿತು ಅಪಾರ ಆಸಕ್ತಿವಹಿಸಿದ ಇವರಿಗೆ ಅದೇ ಕಲೆ ಮುಂದೊಂದು ದಿನ ತನ್ನ ಬದುಕು ರೂಪಿಸಬಹುದೆಂಬ ಅರಿವಿದ್ದಿರಬಹುದು.

ಬೆಂಗಳೂರಿನಲ್ಲಿ ಬದುಕಿನ ತಿರುವು
ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣಕ್ಕಾಗಿ ತೆರಳಿದಂತಹ ಸಂದರ್ಭದಲ್ಲಿಯೂ ಸಮಾಜದ ದೃಷ್ಟಿಗೆ ಮಂಜುನಾಥ್‌ ಆಗಿಯೇ ಉಳಿದರು. ಅಲ್ಲಿ ಇತರ ಮಂಗಳಮುಖೀಯರೊಂದಿಗೆ ಸ್ನೇಹ ಬೆಳೆಸಿದರು. ಬಳಿಕ ಚಿತ್ರಕಲೆಯ ಆಸಕ್ತಿಯನ್ನು ಆಧುನೀಕ ಕಾಲಘಟ್ಟದ ಹೆಚ್ಚು ಫ್ಯಾಷನೇಬಲ್‌ ಆಗಿರುವ ಟ್ಯಾಟೋ ಬಿಡಿಸುವುದನ್ನು ಕಲಿಯುತ್ತಾರೆ. ಇದೇ ಸಂದರ್ಭದಲ್ಲಿ ಲಿಂಗ ಪರಿವರ್ತನೆಯ ಶಸ್ತ್ರ ಚಿಕಿತ್ಸೆಯನ್ನೂ ಪಡೆಯುತ್ತಾರೆ. 2014ರಲ್ಲಿ ಎಲ್‌ಜಿಬಿಟಿಕ್ಯೂನಲ್ಲಿ (LGBTQ) (ಟ್ರಾನ್ಸ್‌ ಜಂಡರ್‌ ಕುರಿತಾದ ಒಂದು ಸಂಘಟನೆ) ಸಕ್ರಿಯರಾಗಿದ್ದರು. ಬಳಿಕ ಇದೇ ಸಂಘಟನೆಯಿಂದ ನಡೆಸಲ್ಪಟ್ಟ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದವರಾಗಿರುತ್ತಾರೆ. ಬಳಿಕ ತನ್ನ ತಾಯಿ ಮತ್ತು ತಂಗಿಗೆ ಸತ್ಯ ತಿಳಿಸಿ ನಿತು ಆರ್‌.ಎಸ್‌. ನಾಮಾಂಕಿತದೊಂದಿಗೆ ಹೊಸ ಜೀವನವನ್ನು ಕಂಡುಕೊಂಡಿದ್ದಾರೆ.

ಬಹುಮುಖ ಪ್ರತಿಭೆ
ಈಕೆ ಟ್ಯಾಟೋ ಡಿಸೈನರ್‌ ಮಾತ್ರವಲ್ಲದೆ ಕ್ಲಾಸಿಕ್‌, ಕಥಕ್‌ ಹಾಗೂ ಪಾಶ್ಚಿಮಾತ್ಯ ಮನ್ನಣೆ ಪಡೆದ ಬೆಲ್ಲಿ ನರ್ತ ಡ್ಯಾನ್ಸ್‌ಗೂ ಸೈ ಎನಿಸಿಕೊಂಡಿದ್ದಾರೆ. ಯೋಗಾಭ್ಯಾಸದಲ್ಲಿ ಆಸಕ್ತಿ ವಹಿಸಿ ಯೋಗ ತರಬೇತುದಾರರಾಗಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅಪ್ರತಿಮ ರೂಪಸಿಯಾಗಿರುವ ಇವರು ಮಾಡಲಿಂಗ್‌ ಕ್ಷೇತ್ರದಲ್ಲಿಯೂ ಆಸಕ್ತಿ ಹೊಂದಿದ್ದು 2017ರಲ್ಲಿ ಬೆಂಗಳೂರಿನಲ್ಲಿ ನಡೆದ ಮಿಸ್‌ ಟ್ರಾನ್ಸ್‌ ಜಂಡರ್‌ ಡೈಮಂಡ್‌, 2019ರಲ್ಲಿ ಮಿಸ್‌ ಟ್ರಾನ್ಸ್‌ ಕ್ವಿನ್‌ ಇಂಡಿಯಾ ಕಿರಿಟ ಮುಡಿಗೇರಿಸಿಕೊಂಡಿದ್ದಾರೆೆ. ಬಳಿಕ ಜಗತ್ತಿನ ಅತ್ಯಂತ ಪ್ರತಿಷ್ಟಿತ ಪ್ರದರ್ಶನವಾದ ಥೈಲ್ಯಾಂಡ್‌ನ‌ ಮಿಸ್‌ ಇಂಟರ್‌ನ್ಯಾಷನಲ್‌ ಕ್ವೀನ್‌ ಪ್ರದರ್ಶನದಲ್ಲಿ 2020ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಈ ಮೂಲಕ ಈಡಿ ದೇಶದಲ್ಲಿಯೇ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡ ಮೊದಲ ಟ್ರಾನ್ಸ್‌ ಜಂಡರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ.

– ರಾಧಿಕಾ, ಕುಂದಾಪುರ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.