ಭವಿಷ್ಯಕ್ಕೆ ನೆರವಾಗುವ ಶಿಕ್ಷಣ ನೀತಿ ರಚನೆ
ಶೈಕ್ಷಣಿಕ ಸಮಾವೇಶದಲ್ಲಿ ಮೂವರು ಸಚಿವರಿಂದ ಭರವಸೆ
Team Udayavani, Jul 28, 2023, 11:22 PM IST
ಬೆಂಗಳೂರು: ಮಕ್ಕಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಎನ್‌ಇಪಿ-2020 ಅನ್ನು ತಿರಸ್ಕರಿಸಿ ನೂತನ ಶಿಕ್ಷಣ ನೀತಿ ರೂಪಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಗಾಂಧಿ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಕರ್ನಾಟಕಕ್ಕೆ ಜನಪರ ಶಿಕ್ಷಣ ನೀತಿ ರೂಪಿಸಲು ಶೈಕ್ಷಣಿಕ ಸಮಾವೇಶ”ದಲ್ಲಿ ಮಾತ ನಾಡಿದ ಅವರು, ನಾವು ಮಕ್ಕಳ ಭವಿಷ್ಯದ ಪರವಾಗಿದ್ದೇವೆ.
ಅದಕ್ಕಾಗಿ ಎನ್‌ಇಪಿ-2020 ತಿರಸ್ಕರಿಸಿ ನಮ್ಮದೇ ಆದ ನೀತಿ ಜಾರಿಗೊಳಿಸುತ್ತೇವೆ. ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ವಿಚಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು. ಪಠ್ಯಪುಸ್ತಕ ಪರಿಷ್ಕರಣೆಗೆ ನಿರ್ಧ ರಿಸಿದ್ದೆವು. ಕಾಲಾವಕಾಶವಿಲ್ಲದ ಕಾರಣ ಸಮಗ್ರ ಬದಲಾವಣೆ ಸಾಧ್ಯವಾಗಲಿಲ್ಲ. ಕೆಲವು ಅಗತ್ಯ ಬದಲಾವಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಪಠ್ಯ ಪರಿಷ್ಕರಣೆ ಬಗ್ಗೆ ಮುಖ್ಯಮಂತ್ರಿ ಜತೆಗೆ ಚರ್ಚಿಸಲಾಗುವುದು. ರಾಜ್ಯದ ಮತ್ತು ಎಲ್ಲ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಮುಂದುವರಿಯುತ್ತೇವೆ ಎಂದರು.
ಸಮಸ್ಯೆ ನಿವಾರಣೆಯತ್ತ ಗಮನ ಹರಿಸಬೇಕು: ಸುಧಾಕರ್
ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ.ಸುಧಾಕರ್ ಮಾತನಾಡಿ, ಸಾಕಷ್ಟು ತಯಾರಿ ಮಾಡಿಕೊಂಡು ಹೊಸ ಶಿಕ್ಷಣ ನೀತಿ ಮಾಡುತ್ತೇವೆ. ಸಾಕಷ್ಟು ಬದಲಾವಣೆಯನ್ನು ನಾವು ಶಿಕ್ಷಣ ರಂಗದಲ್ಲಿ ತರಬೇಕಿದೆ ಮತ್ತು ತರುತ್ತೇವೆ. ಎನ್‌ಇಪಿ- 2020ನ್ನು ಅವರು ಹೇರಿದ್ದಾರೆ. ನಾವು ಅವರಂತೆ ಗಡಿಬಿಡಿಯಲ್ಲಿ ಮಾಡುವುದಿಲ್ಲ. ಇತಿಹಾಸವನ್ನು ಪುನಃ ಬರೆಯಲಾಗುವುದಿಲ್ಲ. ಆದರೆ ಅದಕ್ಕೂ ಹಿಂದಿನ ಸರಕಾರ ಕೈ ಹಾಕಿತ್ತು. ಅದನ್ನು ತಿರುಚಲು ಬಿಡೆವು ಎಂದರು.
ಹೊಸ ಶಿಕ್ಷಣ ನೀತಿಗೆ ಸಲಹೆ ನೀಡಿ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯು ಮನುವಾದಿಗಳ ಮತ್ತು ಅಧುನಿಕ ಚಿಂತನೆಗಳ ವಿರೋಧಿಗಳ ನೀತಿಯಾಗಿದೆ. ಎಲ್ಲ ರನ್ನೂ ಒಳಗೊಂಡ, ಬಹುತ್ವವನ್ನು ರಕ್ಷಿಸುವ, ಶಿಕ್ಷಣ ನೀತಿಗಳನ್ನು ಜಾರಿಗೊಳಿಸಬೇಕಿದೆ. ಅಂತಹ ಶ್ರೇಷ್ಠ ಶಿಕ್ಷಣ ನೀತಿ ಮತ್ತು ವೈಜ್ಞಾನಿಕ ಧೋರಣೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ತಲೆ ಎತ್ತಲು ಸಾಧ್ಯವಿದೆ. ಕೇಸರೀಕರಣ, ಕೋಮುವಾದೀಕರಣ ಶಿಕ್ಷಣದಲ್ಲಿ ತೂರದಿರಲಿ, ಶಿಕ್ಷಣ, ಸಮಾನತೆ, ಭ್ರಾತೃತ್ವದಡಿ ಯಲ್ಲಿ ಹೊಸ ಶಿಕ್ಷಣ ನೀತಿ ಮೂಡಿಬರಬೇಕು ಎಂದರು.
ಯುಜಿಸಿ ಮಾಜಿ ಅಧ್ಯಕ್ಷ ಸುಖದೇವ್ ಥೋರಟ್, ಶಿಕ್ಷಣ ತಜ್ಞ ಡಾ| ಮೈಕೆಲ್ ವಿಲಿಯಮ್ಸ್, ಕರ್ನಾ ಟಕ ಪ್ರದೇಶಿಕ ಶಿಕ್ಷಣ ಆಯೋಗದ ಕಾರ್ಯದರ್ಶಿ ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ, ನಿವೃತ್ತ ವಿಜ್ಞಾನಿ ಎಸ್. ಮಹಾದೇವನ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.