G-20: ಈಗಿರುವುದು ಭಿನ್ನ ಭಾರತ- ಭಾರತದ ವರ್ಚಸ್ಸು ಹೆಚ್ಚಲು ಇದುವೇ ಕಾರಣ: ಜೈಶಂಕರ್
Team Udayavani, Sep 6, 2023, 11:26 PM IST
ಹೊಸದಿಲ್ಲಿ: “ನೀವೀಗ ಕಾಣುತ್ತಿರುವುದು ಭಿನ್ನವಾದ ಜಗತ್ತು, ಭಿನ್ನವಾದ ಭಾರತ, ಭಿನ್ನ ಪ್ರಧಾನಮಂತ್ರಿ, ಭಿನ್ನ ಸರಕಾರ. ಇದೇ ಕಾರಣ ಕ್ಕಾಗಿ, ಹಿಂದೆಲ್ಲ ನೀವು ನೋಡದೇ ಇದ್ದಿದ್ದನ್ನು ಇಂದು ನೋಡಲು ಸಾಧ್ಯವಾಗಿದೆ.’
ಹೀಗೆಂದು ಹೇಳಿರು ವುದು ವಿದೇಶಾಂಗ ಸಚಿವ ಎಸ್. ಜೈಶಂಕರ್. ಜಿ20 ರಾಷ್ಟ್ರಗಳ ಶೃಂಗಸಭೆಗೆ 3 ದಿನಗಳ ಬಾಕಿಯಿರು ವಂತೆಯೇ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿ ರುವ ಸಚಿವ ಜೈಶಂಕರ್, “ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ವರ್ಚಸ್ಸು ಬದಲಾಗಲು, ರಾಜತಾಂತ್ರಿಕ ಮಟ್ಟದಲ್ಲಿ ಭಾರತ ಉನ್ನತ ಸ್ಥಾನ ಪಡೆಯಲು ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ’ ಎಂದಿದ್ದಾರೆ.
ಜತೆಗೆ, ಜಿ20ಯಲ್ಲಿ ಗ್ಲೋಬಲ್ ಸೌತ್ ಪರ ಧ್ವನಿಯೆತ್ತುತ್ತಿರುವ ಕುರಿತು ಪ್ರಸ್ತಾವಿಸಿದ ಅವರು, ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನವನ್ನು ಯಾವ ದೇಶವೂ ಮಾಡಿಲ್ಲ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದಿದ್ದಾರೆ. ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತಕ್ಕೆ ವಿಶೇಷ ಜವಾಬ್ದಾರಿಯಿದೆ. ಜಿ20 ಶೃಂಗಕ್ಕೆ ಆಗಮಿಸುತ್ತಿರುವ ಪ್ರತಿಯೊಂದು ದೇಶವೂ ತನ್ನ ತನ್ನ ಹೊಣೆಗಾರಿಕೆಯನ್ನು ಅರ್ಥಮಾಡಿಕೊಳ್ಳಬೇಕು. ಜಗತ್ತಿನ ಇತರ 180 ದೇಶಗಳು ಜಿ20 ರಾಷ್ಟ್ರಗಳತ್ತ ನೋಡುತ್ತಿವೆ. ಆ ದೇಶಗಳ ನಂಬಿಕೆಯನ್ನು ನಾವು ಉಳಿಸಿಕೊಳ್ಳಬೇಕು ಎಂದಿದ್ದಾರೆ.
ಭದ್ರತಾ ವ್ಯವಸ್ಥೆಗೆ ಮಹಿಳಾ ಶಕ್ತಿ: ಜಿ20
ಸಮ್ಮೇಳನದ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ಬಹುಸ್ತರದ ಭದ್ರತೆ ಕೈಗೊಳ್ಳಲಾಗಿದೆ. ವಿಶೇಷವಾಗಿ 19 ಮಂದಿ ಮಹಿಳಾ ಶಾರ್ಪ್ ಶೂಟರ್‌ಗಳನ್ನು ನೇಮಿಸಲಾಗಿದೆ. ವಿಶೇಷ ಮಹಿಳಾ ಪೊಲೀಸ್ ಆಯುಕ್ತರ ದರ್ಜೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 50 ಸಾವಿರ ಮಂದಿ ಸಿಬಂದಿ, ಕೆ9 ಶ್ವಾನದಳವನ್ನೂ ನಿಯೋಜಿ ಸಲಾಗಿದೆ. ಅವರಿಗೆ ಪೂರಕವಾಗಿ ಕೇಂದ್ರೀಯ ಅರೆಸೇನಾ ಪಡೆ, ಎನ್‌ಎಸ್‌ಜಿ, ಐಎಎಫ್ ಯೋಧರೂ ಭದ್ರತೆಗೆ ನೆರವು ನೀಡಲಿದ್ದಾರೆ.
ಒಮ್ಮತದ ನಿರ್ಣಯ
ಜಿ20 ಶೃಂಗದಲ್ಲಿ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅನುಪಸ್ಥಿತಿಯು ಅಸಹಜವೇನೂ ಅಲ್ಲ. ಸಭೆಯಲ್ಲಿ ಸರ್ವ ಸಮ್ಮತದ ನಿರ್ಣಯ ಕೈಗೊಳ್ಳುವುದರ ಮೇಲೂ ಇದು ಪರಿಣಾಮ ಬೀರುವುದಿಲ್ಲ. ಜಿ20 ಸದಸ್ಯ ರಾಷ್ಟ್ರಗಳ ಶೆರ್ಪಾಗಳು ಅಂದರೆ ದೇಶದ ಪ್ರತಿನಿಧಿಗಳು ಶೃಂಗದ ನಿರ್ಣಯದಲ್ಲಿ ಒಮ್ಮತ ಮೂಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಜಿ20 ಎನ್ನುವುದು ಎಲ್ಲರ ಸಹಭಾಗಿತ್ವದ ವೇದಿಕೆಯಾಗಿದೆಯೇ ಹೊರತು ಅದು ಪವರ್ ಪಾಲಿಟಿಕ್ಸ್‌ನ ಸ್ಥಳವಾಗಬಾರದು ಎಂದೂ ಜೈಶಂಕರ್ ಹೇಳಿದ್ದಾರೆ.
ಸಂಪುಟ ಸದಸ್ಯರಿಗೆ ಪಾಠ
ಶೃಂಗ ಸಮ್ಮೇಳನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಬುಧವಾರ ನಡೆದ ಸಂಪುಟ ಸಭೆಯಲ್ಲಿ ಸಚಿವರಿಗೆ ಹೇಗೆ ವರ್ತಿಸಬೇಕು ಎಂಬ ಬಗ್ಗೆ ವಿವರಣೆ ನೀಡಿದ್ದಾರೆ. ಸಮ್ಮೇಳನ ನಡೆಯುವ ಸ್ಥಳಕ್ಕೆ ತೆರಳಲು ಸಾರ್ವಜನಿಕ ಸಾರಿಗೆ ಬಳಕೆ ಮಾಡಬೇಕು, ಜಿ20 ಇಂಡಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಬೇಕು. ಜತೆಗೆ ವಿವಿಧ ರಾಷ್ಟ್ರಗಳ ನಿಯೋಗದ ಸದಸ್ಯರ ಜತೆಗೆ ಮಾತುಕತೆ ನಡೆಸುವಾಗ ಅದರ ಮೂಲಕವೇ ಸಂವಹನ ನಡೆಸಬೇಕು ಎಂದು ಸೂಚಿಸಿದ್ದಾರೆ. ಅದರಲ್ಲಿ ದೇಶದ ಎಲ್ಲ ಭಾಷೆಗಳೂ, ಜಿ20 ರಾಷ್ಟ್ರಗಳ ಒಕ್ಕೂಟಗಳ ರಾಷ್ಟ್ರಗಳ ಭಾಷೆಗಳನ್ನು ಅಳವಡಿಸಲಾಗಿದೆ.
ಜಿ20 ಸಮ್ಮೇಳನದಲ್ಲಿ ಯಾವ ರೀತಿ ಭಾಗವಹಿಸಬೇಕು ಎನ್ನುವುದು ಆ ದೇಶಕ್ಕೆ ಬಿಟ್ಟ ವಿಚಾರ. ಸಮ್ಮೇಳನದ ಉದ್ದೇಶ ಹಾಳು ಮಾಡಬೇಕು ಎಂಬ ಉದ್ದೇಶ ಹೊಂದಿದ್ದರೆ ಅದಕ್ಕೂ ಅವಕಾಶ ಇದೆ.
ಜ್ಯಾಕ್ ಸಲ್ಲಿವನ್, ಅಮೆರಿಕದ ಭದ್ರತಾ ಸಲಹೆಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.