ಜಿ.ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್: ಫೆ.10ರ ತನಕ ನೋಂದಣಿ ಅವಧಿ ವಿಸ್ತರಣೆ
Team Udayavani, Feb 1, 2023, 12:01 AM IST
ಉಡುಪಿ: ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದೊಂದಿಗೆ ಮಾಹೆ ಮಣಿಪಾಲದ ಸಹಕಾರದೊಂದಿಗೆ ಜಿ. ಶಂಕರ್ ಮಣಿಪಾಲ್ ಆರೋಗ್ಯ ಸುರûಾ ಕಾರ್ಡ್ ಯೋಜನೆ ಬಡಜನರ ಆರೋಗ್ಯ ಸುರಕ್ಷೆಗಾಗಿ ಹಮ್ಮಿಕೊಂಡ ಮಹತ್ವದ ಯೋಜನೆಯಾಗಿದ್ದು, ನೋಂದಣಿಯ ಅವಧಿಯನ್ನು ಫೆ. 10ರ ವರೆಗೆ ವಿಸ್ತರಿಸಲಾಗಿದೆ.
ಜ. 31ರೊಳಗೆ ನೋಂದಣಿ ಮಾಡಿಕೊಂಡ ಫಲಾನುಭವಿಗಳು ಫೆ. 1ರಿಂದ ಕಾರ್ಡ್‌ನ ಸೌಲಭ್ಯ ಪಡೆಯುವುದಕ್ಕೆ ಅರ್ಹರಾಗುತ್ತಾರೆ. ಈ ಕಾರ್ಡ್‌ನ ಸೌಲಭ್ಯ 1 ವರ್ಷಕ್ಕೆ ಸೀಮಿತವಾಗಿದ್ದು, ಮುಂದಿನ ವರ್ಷದಿಂದ ಕಾರ್ಡ್‌ನ ನವೀಕರಣ ಮತ್ತು ಹೊಸ ನೋಂದಣಿ ಇರುವುದಿಲ್ಲ. ಕಾರ್ಡ್‌ಗಳನ್ನು ಜಿಲ್ಲಾ ಮೊಗವೀರ ಯುವ ಸಂಘಟನೆ ಹಾಗೂ ವಿವಿಧ ಘಟಕಗಳ ಮೂಲಕ ನೋಂದಣಿಗೊಳಿಸಿ ವಿತರಿಸಲಾಗುವುದು. ಈ ಯೋಜನೆಯು ಮಣಿಪಾಲ ಸಮೂಹ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗಿದೆ.
ಯೋಜನೆಯಲ್ಲಿ ಜನರಲ್ ವಾರ್ಡ್‌ಗಳಿಗೆ ಒಳರೋಗಿಗಳಾಗಿ ದಾಖಲಾಗುವ ಯಾವುದೇ ಕಾಯಿಲೆಗಳ ರೋಗಿಯ ಆಸ್ಪತ್ರೆಯ ಒಟ್ಟು ಬಿಲ್‌ನ ಮೊತ್ತದಲ್ಲಿ ಶೇ. 35 ರಿಯಾಯಿತಿ ದೊರೆಯಲಿದೆ. ಕಾರ್ಡ್‌ದಾರರು ಮಣಿಪಾಲ ಸಮೂಹ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗದಲ್ಲಿ ರಿಯಾಯಿತಿ ಪಡೆಯಬಹುದು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಟಿಎಂಎ ಪೈ ಆಸ್ಪತ್ರೆ ಉಡುಪಿ, ಕೆಎಂಸಿ ಆಸ್ಪತ್ರೆ ಅತ್ತಾವರ, ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು, ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಸೌಲಭ್ಯ ಪಡೆಯಬಹುದು.
ಷರತ್ತುಗಳಿಲ್ಲದೆ ಎಲ್ಲರಿಗೂ ಹೊಸದಾಗಿ ಕಾರ್ಡ್ ಪಡೆಯಲು ಅವಕಾಶವಿದೆ. ಹಿಂದೆ ಕಾರ್ಡ್ ಹೊಂದಿದ್ದ ಯಾವುದೇ ಕುಟುಂಬ/ಸದಸ್ಯರು ಹೊಸ ಕಾರ್ಡ್ ಪಡೆಯಬಹುದು. ನೋಂದಣಿಗೆ ಒಳಪಡುವ ಎಲ್ಲ ಸದಸ್ಯರ ಆಧಾರ್ ಕಾರ್ಡ್, ಕುಟುಂಬದ ರೇಷನ್ ಕಾರ್ಡ್ ಪ್ರತಿಯೊಂದಿಗೆ ಫೆ. 10ರೊಳಗೆ ಮೊಗವೀರ ಯುವ ಸಂಘಟನೆಯ ಜಿಲ್ಲಾ ಕಚೇರಿ, ಅಂಬಲಪಾಡಿ ಶ್ಯಾಮಿಲಿ ಸಭಾಂಗಣ ಎದುರಿನ ಮಂಗಲ ಸಮುದಾಯ ಭವನ ಅಥವಾ ಮೊಗವೀರ ಯುವ ಸಂಘಟನೆಯ ಘಟಕಗಳನ್ನು ಸಂಪರ್ಕಿಸಿ ನೋಂದಾಯಿಸಿ ಕೊಳ್ಳಬಹುದು.
ಒಂದು ಕುಟುಂಬ ಅಥವಾ ಕುಟುಂಬದ ಸದಸ್ಯರು ಯಾವುದೇ ಘಟಕದಲ್ಲಿ ರಿಯಾಯಿತಿ ಸೌಲಭ್ಯ ಯೋಜನೆಯನ್ನು ನೋಂದಾಯಿಸಿಕೊಳ್ಳಬಹುದು. ಈ ಯೋಜನೆಯ ಸವಲತ್ತುಗಳು ಜನರಲ್ ವಾರ್ಡ್‌ಗಳಿಗೆ ಮಾತ್ರ ಸೀಮಿತವಾಗಿದೆ. ಇಲ್ಲಿ ರೋಗಿ ಮರುದಾಖಲಾದರೂ ಸೌಲಭ್ಯ ಪಡೆಯುವುದಕ್ಕೆ ಅವಕಾಶವಿದೆ ಎಂದು ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡಕ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thokottu: ಸ್ಕೂಟರ್ ಪಲ್ಟಿಯಾಗಿ ಸವಾರ ಸಾವು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.