![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 25, 2024, 12:34 AM IST
ಕೋಟ: ಸಮಾಜದಲ್ಲಿ ಎಷ್ಟೋ ಜನರು ಹುಟ್ಟುತ್ತಾರೆ, ಸಾಯುತ್ತಾರೆ. ಸಾವು ಜೀವನದ ಕೊನೆಯ ಘಟ್ಟ. ಆದರೆ ಸಾಧಕರ ಜೀವನ ಎನ್ನುವುದು ಸಾವಿನ ಬಳಿಕವೂ ಜೀವಂತವಾಗಿರುತ್ತದೆ.
ಅದೇ ರೀತಿ ಡಾ| ಸತೀಶ್ ಪೂಜಾರಿ ಅವರು ಜೀವನದಲ್ಲಿ ನಡೆಸಿದ ವೈದ್ಯಕೀಯ ಕ್ಷೇತ್ರದ ಸೇವೆ, ಸಂಗೀತ, ಕಲೆ, ಸಮಾಜ ಸೇವೆಗಳ ಮೂಲಕ ಎಂದಿಗೂ ನಮ್ಮ ಮುಂದೆ ಜೀವಂತವಾಗಿರುತ್ತಾರೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ.ಶಂಕರ್ ತಿಳಿಸಿದರು.
ಅವರು ಬುಧವಾರ ತೆಕ್ಕಟ್ಟೆ ಪ್ರಸಿಡೆಂಟ್ ಸಭಾಂಗಣದಲ್ಲಿ ಜರಗಿದ ಡಾ| ಸತೀಶ್ ಪೂಜಾರಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ| ಸತೀಶ್ ಪೂಜಾರಿಯವರು ಜೀವನದಲ್ಲಿ ಸಾಕಷ್ಟು ಕನಸುಗಳನ್ನು ಕಂಡವರು. ಕುಂದಾಪುರ ಭಾಗದ ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದವರು. ಹೀಗಾಗಿ ಅವರು ನಡೆಸಿಕೊಂಡು ಬರುತ್ತಿದ್ದ ಎಸ್.ಜಾನಕಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದರು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಮಾತನಾಡಿ, ಡಾ| ಸತೀಶ್ ಪೂಜಾರಿಯವರು ತುಂಬಾ ಕಷ್ಟದಲ್ಲಿ ಜೀವನ ಸಾಗಿಸಿ ಅನಂತರ ಹಂತಹಂತವಾಗಿ ಮೇಲಕ್ಕೆ ಬಂದವರು. ಅವರ ಬದುಕಿನ ಸಾಧನೆ ಎಲ್ಲರಿಗೂ ಪ್ರೇರಣೆ ಎಂದರು.
ಸಾಲಿಗ್ರಾಮ ಗುರುನರಸಿಂಹ ದೇಗುಲದ ಅಧ್ಯಕ್ಷ ಡಾ| ಕೆ.ಎಸ್. ಕಾರಂತ್ ಅವರು ಡಾ| ತೀಶ್ ಪೂಜಾರಿಯವರ ವೈದ್ಯಕೀಯ ಪ್ರಯಾಣದ ಬಗ್ಗೆ ತಿಳಿಸಿದರು.
ಆರ್.ಜೆ.ನಯನಾ, ಬಿಲ್ಲವ ಅಸೋಸಿಯೇಟ್ಸ್‌ನ ಹರೀಶ್ ಬಿಲ್ಲವ, ಭಾಗವತ ಸುರೇಶ್ ಶೆಟ್ಟಿ, ಲಯನ್ಸ್ ಕ್ಲಬ್‌ನ ಜಗದೀಶ್ ಶೆಟ್ಟಿ, ರೋಟರಿ ಜಿಲ್ಲಾ ಗವರ್ನರ್ ದೇವ್ ಆನಂದ್, ಡಾ| ಉಮೇಶ್ ಪುತ್ರನ್, ಇನ್ನಾ ಉದಯ ಶೆಟ್ಟಿ, ವೈದ್ಯೆ ಡಾ| ಪುಷ್ಪಿಂದರ್, ಸಿಎ ಎಸ್.ಎಸ್. ನಾಯಕ್ ಮೊದಲಾದವರು ನುಡಿನಮನ ಸಲ್ಲಿಸಿದರು.
ಗಾನ ನಮನ
ಈ ಸಂದರ್ಭ ಜಿಲ್ಲೆಯ ಪ್ರಸಿದ್ಧ ಗಾಯಕರಿಂದ ಗಾನ ನಮನ ಕಾರ್ಯಕ್ರಮ ನೆರವೇರಿತು.ಡಾ| ಪ್ರಕಾಶ್ ತೋಳಾರ್, ನೇಹಾ ಸತೀಶ್ ಪೂಜಾರಿ ಹಾಗೂ ಡಾ| ಸತೀಶ್ ಪೂಜಾರಿಯವರ ಕುಟುಂಬ ಸದಸ್ಯರು ಕಾರ್ಯಕ್ರಮ ಸಂಯೋಜಿಸಿದರು. ಆರ್.ಜೆ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.