ಕಂಟೇನ್ಮೆಂಟ್‌ನಲ್ಲಿ ಶೋಧ ಚುರುಕು
10ಕ್ಕೂ ಹೆಚ್ಚು ತಂಡದಿಂದ ಸೋಂಕಿತರ ಹುಡುಕಾಟಪರ ಊರಿನರಿಗೆ ಸೀಲ್
Team Udayavani, Apr 10, 2020, 2:01 PM IST
ಗದಗ: ರಂಗನವಾಡದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸಮೀಕ್ಷೆ ನಡೆಸಿದರು.
ಗದಗ: ರಂಗನವಾಡದ ವೃದ್ಧೆಯೊಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇವರಿಗೆ ಯಾರಿಂದ ಸೋಂಕು ತಗುಲಿದೆ ಎಂಬ ಕುರಿತು ಇದುವರೆಗೂ ನಿಖರ ಮಾಹಿತಿಯಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಸಮೀಕ್ಷಾ ಕಾರ್ಯವನ್ನು ಚುರುಕುಗೊಳಿಸಿದೆ.
ರಂಗನವಾಡ ಹಾಗೂ ಎಸ್.ಎಂ. ಕೃಷ್ಣ ನಗರದಲ್ಲಿ 10ಕ್ಕೂ ಹೆಚ್ಚು ತಂಡಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತರಿಗಾಗಿ ಜಾಲಾಡುತ್ತಿದ್ದಾರೆ. ಅಲ್ಲದೇ ಮೃತರ ಮನೆಯವರು ಹಾಗೂ ಸಂಬಂಧಿ ಕರು ಸೇರಿದಂತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 35 ಜನರನ್ನು ಕೊರೊನಾ ಪರೀಕ್ಷೆ ಒಳಪಡಿಸಿದರೂ, ವೃದ್ಧೆಗೆ ಹರಡಿದ್ದ ಸೋಂಕಿನ ಮೂಲ ಪತ್ತೆಯಾಗಿಲ್ಲ. ಇದು ಜಿಲ್ಲೆಯ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದರೆ, ಜಿಲ್ಲಾಡಳಿತವನ್ನು ಚಿಂತೆಗೀಡುಮಾಡಿದೆ. ಈ ನಡುವೆ ಗುರುವಾರ ಬೆಳಗಿನಜಾವ ಸೋಂಕಿತ ವೃದ್ಧೆ ಮೃತಪಟ್ಟಿದ್ದರಿಂದ ರಂಗನವಾಡ ಭಾಗದ ದಾಸರ ಓಣಿ, ಖೀಲ್ಲಾ ಓಣಿ, ಹಳೇ ಕಚೇರಿ ಹಿಂಭಾಗದಲ್ಲಿ, ರೆಹಮತ ನಗರ, ಎಸ್. ಎಂ. ಕೃಷ್ಣ ನಗರದಲ್ಲಿ ಸಮೀಕ್ಷೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.
ಓರ್ವ ಆಶಾ ಕಾರ್ಯಕರ್ತೆ, ಕಿರಿಯ ಆರೋಗ್ಯ ಸಹಾಯಕಿಯನ್ನು ಒಳಗೊಂಡಂತೆ ತಲಾ ಒಂದು ತಂಡವನ್ನು ರಚಿಸಲಾಗಿದೆ. ರಂಗನವಾಡ ಹಾಗೂ ಎಸ್.ಎಂ. ಕೃಷ್ಣ ನಗರದಲ್ಲಿ ತಲಾ 7- 8 ತಂಡಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸಮೀಕ್ಷೆ ನಡೆಸುತ್ತಿದ್ದಾರೆ. ಮನೆ ಮನೆಗೆ ಭೇಟಿ ನೀಡಿದ್ದಾರೆ. ಮನೆಯಲ್ಲಿರುವ ಸದಸ್ಯರ ಸಂಖ್ಯೆ, ಅವರ ಆರೋಗ್ಯ ಸ್ಥಿತಿಗತಿ, ಫೆಬ್ರವರಿ ಅಂತ್ಯದ ಬಳಿಕ ಮನೆಗೆ ಬಂದಿದ್ದ ಅತಿಥಿಗಳು, ನೆಂಟರಿಷ್ಟರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಅವರಲ್ಲಿ ಊರಿಂದ ಬಂದವರಿಗೆ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಅವಧಿಯ ಸೀಲ್ ಹಾಕಲಾಗುತ್ತಿದೆ. ಈ ವೇಳೆ ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡು ಬಂದರೆ, ಸಮೀಕ್ಷಾ ಕಾರ್ಯದಲ್ಲಿ ತೊಡಗಿರುವ ಕಿರಿಯ ಆರೋಗ್ಯ ಸಹಾಯಕಿಯರು ಪ್ರಾಥಮಿಕ ಹಂತದಲ್ಲಿ ತಪಾಸಣೆ ನಡೆಸಿ, ಔಷಧೋಪಚಾರ ನೀಡುತ್ತಿದ್ದಾರೆ.
ಒಂದೆರಡು ದಿನಗಳಲ್ಲಿ ಜ್ವರ, ಕಫ ಹಾಗೂ ಕೆಮ್ಮು, ಶೀತ ಕಡಿಮೆಯಾಗದಿದ್ದರೆ, ವೈದ್ಯಕೀಯ ತಪಾಸಣೆಗೆ ಶಿಫಾರಸ್ಸು ಮಾಡಲಾಗುವುದು. ಆದರೆ ಸದ್ಯಕ್ಕೆ ಅಂತಹ ಯಾವುದೇ ಪ್ರಕರಣಗಳು ಕಂದು ಬಂದಿಲ್ಲ ಎಂದು ಸಮೀಕ್ಷಾಧಿ ಕಾರಿಗಳು ತಿಳಿಸಿದರು.
ಸಮೀಕ್ಷೆಯಿಂದ 11 ಜನ ಪತ್ತೆ
ಕೋವಿಡ್ ಸೋಂಕಿನಿಂದ ಮೃತ ಪಟ್ಟಿರುವ ವೃದ್ಧೆಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ಕು ಕುಟುಂಬಗಳ 11 ಜನರನ್ನು ಸಮೀಕ್ಷೆ ವೇಲೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ರಂಗನವಾಡದ ಕಂಟೇನ್ಮೆಂಟ್ ಪ್ರದೇಶ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿ ವೃದ್ಧೆಯೊಂದಿಗೆ ಸಂಪರ್ಕದಲ್ಲಿದ್ದ 11 ಜನರನ್ನು ಗುರುತಿಸಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳ ನೆರವು ಪಡೆದು, ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಕೊರೊನಾ ತಪಾಸಣೆಗಾಗಿ ಅವರಿಂದ ಗಂಟಲು
ದ್ರವ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ರಂಗನವಾಡದ ವೃದ್ಧೆಗೆ ಕೋವಿಡ್ ಸೋಂಕು ಹೇಗೆ?ಯಾರಿಂದ ತಗುಲಿದೆ ಎಂಬುದನ್ನು ಪತ್ತೆ ಮಾಡಲು ಹಲವು ತಂಡಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ
ಕಾರ್ಯನಿರ್ವಹಿಸುತ್ತಿದ್ದಾರೆ. ರಂಗನವಾಡದಲ್ಲಿ ನಡೆದ ಸಮೀಕ್ಷೆಯಿಂದ ವೃದ್ಧೆಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಜನರನ್ನು ಗುರುತಿಸಿ, ಜಿಲ್ಲಾ ಆಸ್ಪತ್ರೆಗೆ
ರವಾನಿಸಲಾಗಿದೆ.
ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…
ಗದಗ: ರುದ್ರಭೂಮಿಗೆ ತೆರಳಲು ರಸ್ತೆಗಳದ್ದೇ ಸಮಸ್ಯೆ!
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.