ಬೀದಿ ಗಣೇಶೋತ್ಸವಕ್ಕೆ ಕೋವಿಡ್ ಕಾರ್ಮೋಡ
ಪರಿಸರ ಸ್ನೇಹಿ ಅರಿಶಿಣ, ಗೋಧಿಹಿಟ್ಟಲ್ಲಿ ಮಾಡಿದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ; ದೊಡ್ಡ ಮೂರ್ತಿಗಳ ತಯಾರಿ ಇಲ್ಲ
Team Udayavani, Aug 28, 2021, 5:13 PM IST
ಕೋಲಾರ: ಗೌರಿ ಗಣೇಶ ಹಬ್ಬದ ಮೇಲೆ ಮತ್ತೆ ಕೋವಿಡ್ ಕಾರ್ಮೋಡ ಕವಿದಿದೆ. ಸರ್ಕಾರ ಈಗಾಗಲೇ ಸಾರ್ವಜನಿಕ ಗಣೇಶೋತ್ಸವ ನಿಷೇಧಿಸಿದೆ.
ಹಿಂದೂ ಪರ ಸಂಘಟನೆಗಳು ಬೀದಿಗಳಲ್ಲಿ ಹಬ್ಬ ಆಚರಣೆಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡುತ್ತಿದೆ. ಇವೆಲ್ಲದರ ನಡುವೆ ಪರಿಸರ ಸ್ನೇಹಿ ಗಣೇಶೋತ್ಸವ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತ ಸಜ್ಜಾಗುತ್ತಿದೆ.
ಕೋವಿಡ್ ಕಟ್ಟೆಚ್ಚರ: ಸತತ 2ನೇ ವರ್ಷ ಗಣೇಶ ಹಬ್ಬದ ಮೇಲೆ ಕೋವಿಡ್ ಕಾರ್ಮೋಡ ಕವಿದಿದೆ. ಈ ಬಾರಿ ಮೂರನೇ ಅಲೆಯ ಎಚ್ಚರಿಕೆಯ ನಡುವೆಯೇ ಗಣೇಶ ಹಬ್ಬವನ್ನು ಆಚರಿಸಬೇಕಾಗಿದೆ. ಮುನ್ನೆಚ್ಚರಿಗೆ ಕ್ರಮವಾಗಿ ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಮತ್ತುವಿಸರ್ಜನಾ ಮೆರವಣಿಗೆ ನಿಷೇಧಿಸಿದೆ. ಹಬ್ಬವನ್ನು ಮನೆಗಳಲ್ಲಿಯೂ ಸರಳ, ಪರಿಸರ ಸ್ನೇಹಿ ಆಗಿ ಆಚರಿಸುವಂತೆ ಮನವಿ ಮಾಡಿದೆ. ಇದು ಸಾರ್ವಜನಿಕ ವಲಯದಲ್ಲಿ ಗೊಂದಲಕ್ಕೂ ಕಾರಣವಾಗಿದೆ.
ದೊಡ್ಡ ಗಣೇಶ ಮಾರಾಟವಿಲ್ಲ: ಸರ್ಕಾರ ಸಾರ್ವಜನಿಕ ಗಣೇಶೋತ್ಸವವನ್ನು ನಿಷೇಧಿಸಿರುವುದರಿಂದ ಗಣಪತಿ ಪೆಂಡಾಲ್‌ಗಳಲ್ಲಿಪ್ರತಿಷ್ಠಾಪನೆ ಮಾಡಿ ಪೂಜಿಸಲ್ಪಡುತ್ತಿದ್ದ ದೊಡ್ಡ ಗಾತ್ರದ ಗಣೇಶ ಮೂರ್ತಿಗಳಿಗೆ ಬೇಡಿಕೆ ಇಲ್ಲದಂತಾಗಿದೆ. ವ್ಯಾಪಾರಿಗಳು ಕೋವಿಡ್ ಮಾರ್ಗ ಸೂಚಿ ಪಾಲಿಸಬೇಕಾಗಿರುವುದರಿಂದ ದೊಡ್ಡ ಗಾತ್ರದ ಗಣೇಶನ ಮೂರ್ತಿಗಳನ್ನು ಖರೀದಿಸಿ ಮಾರಾಟ ಮಾಡುವುದನ್ನು ಸ್ಥಳೀಯ ವ್ಯಾಪಾರಿ ಗಳು ಕೈಬಿಟ್ಟಿದ್ದಾರೆ. ಸಣ್ಣ ಅಂದರೆ ಎರಡು ಅಡಿಗಳಿಗಿಂತಲೂ ಕಡಿಮೆ ಗಾತ್ರದ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲುವ್ಯಾಪಾರಿಗಳು ಸಜ್ಜಾಗುತ್ತಿದ್ದಾರೆ.ಕೋವಿಡ್‌ಆತಂಕದಲ್ಲಿ ಇನ್ನೂ ಕೋಲಾರ ಜಿಲ್ಲಾ ಕೇಂದ್ರದಲ್ಲಿ ಗಣೇಶ ಮೂರ್ತಿಗಳ ಮಾರಾಟ ಆರಂಭವಾಗಿಲ್ಲ. ಸೋಮವಾರ ಡೀಸಿ ಭೇಟಿ ಮಾಡಲಿರುವ ಗಣೇಶ ಮೂರ್ತಿ ತಯಾರಕರು, ವ್ಯಾಪಾರಿಗಳು ಮಾರಾಟಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಳ್ಳಲು ಸಿದ್ಧವಾಗುತ್ತಿದ್ದಾರೆ.
ಇದನ್ನೂ ಓದಿ:ಕಾಬೂಲ್ ಬ್ಯಾಂಕ್ ಹೊರಗೆ ನೂರಾರು ಮಂದಿ ಪ್ರತಿಭಟನೆ: ಎಟಿಎಂಗಳಲ್ಲಿ ಹಣವಿಲ್ಲದೇ ಪರದಾಟ
ನಿಷೇಧ ಇದ್ದರೂ ವಸೂಲಿ ಆರಂಭ: ಸಾರ್ವಜನಿಕ ಗಣೇಶೋತ್ಸವ ನಿಷೇಧದ ನಡುವೆಯೂ ಕೋಲಾರ ನಗರ ಸೇರಿ ವಿವಿಧ ತಾಲೂಕು ಕೇಂದ್ರ ಗಳಲ್ಲಿಯೂ ಗಣೇಶೋತ್ಸವ ಸಮಿತಿಯುವಕರುಚಂದಾ ವಸೂಲಿಗೆ ಮುಂದಾಗಿದ್ದಾರೆ. ಜಿಲ್ಲಾ ಕೇಂದ್ರದ ವಿವಿಧ ವಾರ್ಡ್ ಗಳಲ್ಲಿಯೂ ಯುವಕರು ಸಂಜೆಯ ವೇಳೆ ಗುಂಪುಗೂಡಿ ಗಣೇಶೋತ್ಸವ ಚಂದಾ ವಸೂಲು ಮಾಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬರುತ್ತಿದೆ. ಆದರೆ, ಈ ಕುರಿತು ಸಮಿತಿಯ ಯುವಕರಿಗೆ ತಿಳಿ ಹೇಳುವ ಹಾಗೂ ಸಾರ್ವಜನಿಕ ಗಣೇಶೋತ್ಸವವನ್ನು ಸರ್ಕಾರ ನಿಷೇಧಿಸಿದೆ ಎಂದು ಮಾಹಿತಿ ನೀಡುವ ಕುರಿತು ಪೊಲೀಸ್ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ ಇದುವರೆಗೂ ಕ್ರಮ ಕೈಗೊಂಡಿಲ್ಲ.
ಗಣೇಶ ಮೂರ್ತಿಗಳ ಉಳಿಕೆ: ಹಿಂದಿನ ವರ್ಷವೇ ಗಣೇಶ ಹಬ್ಬದ ಮೇಲೆ ಕೋವಿಡ್ ಕರಿನೆರಳು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಹಬ್ಬದ ವ್ಯಾಪಾರ ವಹಿವಾಟು ಮೇಲೆ ಹೇರಲಾಗಿತ್ತು. ಇದರಿಂದ ಗಣೇಶ ಮೂರ್ತಿಗಳ ವ್ಯಾಪಾರದ ಮೇಲೆ ಸಾಕಷ್ಟು ಒತ್ತಡ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ವಿಗ್ರಹಗಳು ಮಾರಾಟವಾಗದೆ ವ್ಯಾಪಾರಿಗಳ ಬಳಿಯೇ ಉಳಿಯುವಂತಾಗಿತ್ತು. ಕೋಲಾರ ಜಿಲ್ಲಾ ಕೇಂದ್ರದಲ್ಲಿ ಸ್ಪಂದನ ಕೈಗಾರಿಕೆ ಮತ್ತು ಕುಂಭೇಶ್ವರ ಕೈಗಾರಿಕೆಗಳು ದೊಡ್ಡ ಮಟ್ಟದಲ್ಲಿ ಗಣೇಶ ಮೂರ್ತಿಗಳನ್ನು ತಯಾರಿ ಸುತ್ತವೆ ಹಾಗೆಯೇ 15ಕ್ಕೂ ಹೆಚ್ಚು ವ್ಯಾಪಾರಿಗಳು ಗಣೇಶ ಮೂರ್ತಿಗಳನ್ನು ಹೊರಗಿನಿಂದ ಖರೀದಿಸಿ ತಂದು ವ್ಯಾಪಾರಮಾಡುತ್ತಾರೆ. ಆದರೆ, ಇವರೆಲ್ಲರ ಬಳಿಯೂ ಹಿಂದಿನ ವರ್ಷ ಮಾರಾಟವಾಗದೆ ಬಾಕಿ ಉಳಿದ ಗಣೇಶ ಮೂರ್ತಿಗಳ ದೊಡ್ಡ ದಾಸ್ತಾನಿದೆ. ಇದೇಮೂರ್ತಿಗಳಿಗೆ ಮತ್ತೆ ಬಣ್ಣ ಬಳಿದು ವ್ಯಾಪಾರಕ್ಕೆ ಇಡಲು ಸಿದ್ಧತೆ ನಡೆದಿದೆ.
ಪಿಒಪಿ ಗಣೇಶ ಮೂರ್ತಿಗೆ ತಡೆ: ಕಳೆದ ಐದಾರು ವರ್ಷಗಳಿಂದಲೂ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯನ್ನು ಸರ್ಕಾರ ನಿಷೇಧಿಸಿದೆ. ಈ ಕುರಿತು ಗಣೇಶ ತಯಾರಕರಿಗೂ ಮಾಹಿತಿ ಇರುವುದರಿಂದ ಪಿಒಪಿ ಗಣೇಶ ಮೂರ್ತಿಗಳು ಸ್ಥಳೀಯವಾಗಿ ತಯಾರಾಗುತ್ತಿಲ್ಲ. ಆದರೂ, ಕೆಲವು ಗಣೇಶೋತ್ಸವ ಸಮಿತಿಗಳು ಮುಂಬೈ, ಕೊಲ್ಕತ್ತಾಗಳಿಂದ ಪಿಒಪಿ ಬೃಹತ್ ಗಾತ್ರದ ಗಣೇಶ ವಿಗ್ರಹಗಳನ್ನುತರಿಸಿ ಪ್ರತಿಷ್ಠಾಪನೆ ಮಾಡುತ್ತಿದೆ. ಆದರೂ, ಈ ಬಾರಿ ಗಣೇಶ ತಯಾರಕರಿಗೆ ಪಿಒಪಿ ಗಣೇಶ ಮೂರ್ತಿಗಳ ತಯಾರು ಮಾಡದಂತೆ ಸಂಬಂಧಪಟ್ಟ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಒಂದು ವೇಳೆ ಮಾರುಕಟ್ಟೆಯಲ್ಲಿ ಇಟ್ಟು ಮಾರಾಟಕ್ಕೆ ಮುಂದಾದರೆ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಹಾಗೂ ಪೊಲೀಸ್ ಸಹಕಾರದಿಂದ ಅಂತಹ ಮೂರ್ತಿಗಳನ್ನು ವಶಕ್ಕೆ ಪಡೆದು ನಾಶಪಡಿಸಲಾಗುವುದು ಎಂದು ಎಚ್ಚರಿಸಲಾಗುತ್ತಿದೆ. ಹಿಂದಿನ ವರ್ಷಗಳ ಈ ಆದೇಶ ಚಾಲ್ತಿಯಲ್ಲಿದೆ.
ಗಣೇಶ ವಿಸರ್ಜನೆಗೆ ಸ್ಥಳ ಆಯ್ಕೆ: ಸ್ಥಳೀಯ ಸಂಸ್ಥೆಗಳು ಗಣೇಶ ವಿಸರ್ಜನೆಗೆ ಪ್ರತ್ಯೇಕ ಸ್ಥಳ ಗುರುತಿಸಿ ಸಿದ್ಧಪಡಿಸುತ್ತಿವೆ.ಕೋಲಾರ ಜಿಲ್ಲಾಕೇಂದ್ರ ದಲ್ಲಿ ಕುರುಬರಪೇಟೆ ಅಂಚಿನಲ್ಲಿರುವ ಕೋಲಾರಮ್ಮ ಕೆರೆ ಅಂಗಳದಲ್ಲಿ ಗಣೇಶ ವಿಸರ್ಜನಾ ಬೃಹತ್ ತೊಟ್ಟಿಯನ್ನು ನಿರ್ಮಾಣಮಾಡಲಾಗುತ್ತದೆ. ಆದರೂ ಪರಿಸರ ಇಲಾಖೆ ಪ್ರತಿ ವರ್ಷದಂತೆ ಗಣೇಶೋತ್ಸವ ಕ್ಕೂ ಮುನ್ನ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ಗಣೇಶ ವಿಸರ್ಜನಾ ಸ್ಥಳ ನಿಗದಿಪ ಡಿಸ ಲು ನಿರ್ಧರಿಸಿದೆ. ಈ ಸಭೆಯು ಜಿಲ್ಲಾ ಮಟ್ಟದಲ್ಲಿ ಇನ್ನು ನಡೆಯಬೇಕಿದೆ.
ಸಾರ್ವಜನಿಕ ಗಣೇಶೋತ್ಸವಕ್ಕೆ ಮನವಿ
ಕೋಲಾರ ಜಿಲ್ಲೆ ಸೇರಿ ರಾಜ್ಯಾದ್ಯಂತ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ನಿಷೇಧಿಸಿದೆ. ಇದು ಸಹಜವಾಗಿಯೇ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಶ್ರೀರಾಮಸೇನೆ ಇನ್ನಿತರ ಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿ ನೀಡಿ, ಕೋವಿಡ್ ಮಾರ್ಗಸೂಚಿ ಪಾಲಿಸುತ್ತಲೇ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದೆ. ಆದರೆ, ಈ ವಿಚಾರ ದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿದೆ. ಈಗಾಗಲೇ ನಿಷೇಧ ಜಾರಿಯಲ್ಲಿದ್ದರೂ ಸರ್ಕಾರ ಮುಂದಿನ ದಿನಗಳಲ್ಲಿ ತನ್ನದೇ ಆದೇಶಕ್ಕೆ ತಿದ್ದುಪಡಿ ತಂದು ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶಕಲ್ಪಿಸುತ್ತದೆ
ಇದನ್ನೂ ಓದಿ:ಸದಾಶಿವ ಆಯೋಗ ಜಾರಿಗೆ ಈಗಲೂ ನಮ್ಮ ವಿರೋಧವಿದೆ: ಸಚಿವ ಪ್ರಭು ಚವ್ಹಾಣ್
ಅರಿಶಿಣ, ಗೋಧಿ ಹಿಟ್ಟಲ್ಲಿ ಮೂರ್ತಿ ತಯಾರಿಸಿ, ಪೂಜಿಸಿ
ಪರಿಸರ ಸ್ನೇಹಿ ಗಣೇಶೋತ್ಸವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಪರಿಸರ ಇಲಾಖೆ ಸಿದ್ಧವಾಗುತ್ತಿದೆ. ಆದಷ್ಟು ಮಣ್ಣಿನಿಂದ ತಯಾರಿ ಸಿದ ಮೂರ್ತಿಗಳ ಮಾರಾಟಕ್ಕೆ ವ್ಯಾಪಾರಿಗಳು ಸಿದ್ಧವಾಗುತ್ತಿದ್ದಾರೆ. ಪರಿಸರ ಇಲಾಖೆಯು ಆದಷ್ಟು ಅರಿಶಿಣ ಹಾಗೂ ಗೋಧಿ ಹಿಟ್ಟಿನಿಂದ ತಯಾರಿಸಿರುವ ಗಣೇಶ ಮೂರ್ತಿಗಳನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಪೂಜಿಸುವುದಕ್ಕೆ ಹೆಚ್ಚು ಒತ್ತು ನೀಡುವಂತೆ ಜನರಲ್ಲಿ ಮನವಿ ಮಾಡುತ್ತಿದೆ. ಹೀಗೆ ಪೂಜಿಸಲ್ಪಟ್ಟ ಗಣೇಶ ಮೂರ್ತಿಗಳನ್ನು ಮನೆಯಲ್ಲಿಯೇ ಬಕೆಟ್‌ನಲ್ಲಿ ಮುಳುಗಿಸಿ ವಿಸರ್ಜನೆ ಮಾಡಿ, ನೀರನ್ನು ಗಿಡ ಮರಗಳ ಬುಡಕ್ಕೆ ಹಾಕುವುದು ಶ್ರೇಷ್ಠ ಎಂಬುದನ್ನು ಜನರಲ್ಲಿ ಮನವರಿಕೆ ಮಾಡಿಕೊಡಲು ಸಿದ್ಧವಾಗುತ್ತಿದೆ. ಈ ಕುರಿತು ಕರಪತ್ರ, ವಿಡಿಯೋಗಳನ್ನು ಸಜ್ಜುಗೊಳಿಸಿ ಸಾಮಾಜಿಕ ಜಾಲ ತಾಣಗಳ ಮೂಲಕ ಜನರಿಗೆ ತಲುಪಿಸಲು ಮುಂದಾಗಿದೆ.
ಪರಿಸರ ಸ್ನೇಹಿಯಾಗಿ ಗಣೇಶೋತ್ಸವವನ್ನು ಮನೆಗಳಲ್ಲಿಯೇ ಅರಿಶಿಣ ಗೋಧಿ ಬಳಸಿ ಮೂರ್ತಿಗಳನ್ನು ತಯಾರಿಸಿ, ಪೂಜಿಸಿ, ಬಕೆಟ್‌ಗಳಲ್ಲಿ ವಿಸರ್ಜಿಸಿ, ವಿಸರ್ಜಿಸಿದ ನೀರನ್ನು ಗಿಡ ಮರಗಳಿಗೆ ಹಾಕುವ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡುತ್ತೇವೆ. ಪರಿಸರ ಸ್ನೇಹಿ ಗಣೇಶ ವಿಗ್ರಹಗಳ ತಯಾರಿಸುವಕುರಿತಕಿರು ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡಲಾಗುವುದು.
-ರಾಜಶೇಖರ್, ಜಿಲ್ಲಾ ಪರಿಸರ ಅಧಿಕಾರಿ, ಕೋಲಾರ.
ರಾಜ್ಯ ಸರಕಾರವು ಸಾರ್ವಜನಿಕರ ಗಣೇಶೋತ್ಸವಗಳನ್ನು ನಿಷೇಧಿಸಿದೆ. ಗಣೇಶೋತ್ಸವಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರಕಾರ ಹೊರಡಿಸಿರುವ ಆದೇಶವನ್ನು ಪೊಲೀಸ್ ಇಲಾಖೆಯುಕಟ್ಟು ನಿಟ್ಟಾಗಿ ಪಾಲಿಸುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ.
– ಡೆಕ್ಕಾಕಿಶೋರ್‌ಬಾಬು, ಪೊಲೀಸ್ ವರಿಷ್ಠಾಧಿಕಾರಿ, ಕೋಲಾರ.
ನಿಷೇಧಿಸಿರುವುದರಿಂದ ದೊಡ್ಡ ಗಾತ್ರದ ಮೂರ್ತಿಗಳ ತಯಾರು ಮಾಡುತ್ತಿಲ್ಲ. 2 ಅಡಿಗಳಿಗಿಂತಲೂ ಕಡಿಮೆ ಗಾತ್ರದ ಗಣೇಶ ಮೂರ್ತಿಗಳನ್ನು ಹಬ್ಬಕ್ಕೆ ಸಜ್ಜುಗೊಳಿಸುತ್ತಿ ದ್ದೇವೆ. ಸೋಮವಾರ ಗಣೇಶ ಮೂರ್ತಿಗಳ ಮಾರಾಟಕ್ಕೆ ಅವಕಾಶಕಲ್ಪಿಸುವಂತೆ ಡೀಸಿಗೆಕೋರುತ್ತೇವೆ.
-ಸ್ಪಂದನಾ ರಂಗನಾಥ್, ಸ್ಪಂದನ ಕೈಗಾರಿಕೆ,ಕೋಲಾರ.
ಕೋವಿಡ್‌ಮಾರ್ಗಸೂಚನೆಗಳನ್ನುಕಡ್ಡಾಯವಾಗಿ ಪಾಲಿಸುತ್ತಲೇ ಸಾರ್ವಜನಿಕ ಗಣೇಶೋತ್ಸವಗಳನ್ನು ಸಾಂಪ್ರದಾಯಬದ್ಧವಾಗಿ ಆಚರಿಸಲು ಸರ್ಕಾರಅವಕಾಶ ಕಲ್ಪಿಸಬೇಕು.ಈ ಕುರಿತುಜಿಲ್ಲಾಡಳಿತಹಾಗೂ ಸರ್ಕಾವನ್ನು ಒತ್ತಾಯಿಸುತ್ತೇವೆ. ಸರಕಾರದಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅಡ್ಡಿಆಗುವುದಿಲ್ಲವೆಂದು ಭಾವಿಸಿದ್ದೇವೆ
-ಅಪ್ಪಿ, ಭಜರಂಗದಳ ಮುಖಂಡ,ಕೋಲಾರ.
-ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.