ಅಯ್ಯೋ ಗಣಪ ನಮ್ಮ ಕಷ್ಟ ಕೇಳೋರ್ಯಾರು?

ಗಣೇಶ ಮೂರ್ತಿ ತಯಾರಕರ ಬದುಕು ದುಸ್ತರ ; ಗಣೇಶ ಮೂರ್ತಿ ತಯಾರಿಕೆಗೆ ಸಂಕಷ್ಟ..!

Team Udayavani, Aug 29, 2021, 4:28 PM IST

ಅಯ್ಯೋ ಗಣಪ ನಮ್ಮ ಕಷ್ಟ ಕೇಳೋರ್ಯಾರು?

ದೇವನಹಳ್ಳಿ: ಅದ್ಧೂರಿ ಗಣೇಶೋತ್ಸವ ಆಚರಣೆಗೂ ಕೋವಿಡ್ ಕಂಟಕ ಎದುರಾಗಿದ್ದು ಗಣೇಶ ಮೂರ್ತಿ ತಯಾರಿಕಾ ಕಲಾವಿದರ ಬದುಕು ದುಸ್ತರವಾಗಿದೆ.

ಕಳೆದ 2ವರ್ಷಗಳಿಂದ ಮಹಾಮಾರಿ ಕೋವಿಡ್ ಕಾರಣದಿಂದ ಗಣೇಶಮೂರ್ತಿ ತಯಾರಿಸುವ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬದುಕು ಸಾಗಿಸುತ್ತಿದ್ದಾರೆ.

ರಾಜ್ಯ ಸರ್ಕಾರ ಸೂಚನೆ ಮೇರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಬೇಡಿ, ಮನೆಗಳಲ್ಲಿಯೇ ಸರಳವಾಗಿ ಆಚರಿಸಿ ಎಂದು ಆದೇಶ ನೀಡಿದೆ.

ಈ ಹಿನ್ನೆಲೆ ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಲಾವಿದರಿಗೆ ದೊಡ್ಡ ಪೆಟ್ಟು ಬಿದ್ದಿದೆ. ಸರ್ಕಾರದ ಆದೇಶ ಬಡವಾದ ಬದುಕು: ಸಾವಿರಾರು ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದ ಕಲಾವಿದರಿಗೆ ಈ ಭಾರಿ ಜನರು ಕೊಳ್ಳುವುದು ಅನುಮಾನವಾಗಿದೆ.

ಕೋವಿಡ್ ಸಂಕಷ್ಟದಲ್ಲಿ ಗಣೇಶ ಪ್ರತಿಸ್ಥಾಪನೆಗೆ ಸರ್ಕಾರ ನಿಷೇಧ ಹೇರಿದೆ. ಆಕರ್ಷಕವಾಗಿ ವಿಭಿನ್ನ ರೂಪಗಳಲ್ಲಿ ದೊಡ್ಡ ಗಣೇಶ ಮೂರ್ತಿ, ಸಣ್ಣ ಗಣೇಶ ಮೂರ್ತಿಗಳನ್ನು ಪ್ರತಿವರ್ಷ ತಯಾರಿಸಲಾಗುತ್ತಿತ್ತು. ಮೂರ್ತಿಗಳಿಗೆ ಉತ್ತಮ ಬೇಡಿಕೆ ಬರುತ್ತಿತ್ತು. ಆದರೇ ಕೋವಿಡ್  ಕೆಂಗಣ್ಣಿನಿಂದ ಇಡೀ ಉದ್ಯೋಗವೇ ಅತಂತ್ರವಾಗಿದೆ. ವರ್ಷವಿಡೀ ಕುಟುಂಬದ ಸದಸ್ಯರೆಲ್ಲರೂ ದುಡಿದರು ಜೀವನ ನಿರ್ವಹಣೆ ಕಷ್ಟವಾಗಿದೆ.

ಇದನ್ನೂ ಓದಿ:ಮಂಗಳೂರಿನ ಹಿರಿಯ ಟ್ರಾಫಿಕ್ ವಾರ್ಡನ್ ಜೋಸೆಫ್ ಗೊನ್ಸಾಲ್ವಿಸ್ ನಿಧನ

ನೆರವು ನೀಡಿಲ್ಲ:ಕೋವಿಡ್ ಸಂಕಷ್ಟ ಸ್ಥಿತಿಯಲ್ಲಿ ಸರ್ಕಾರ ಗಣೇಶ ಮೂರ್ತಿ ತಯಾರಿಕಾ ಕಲಾವಿದರಿಗೆ ಯಾವುದೇ ನೆರವು ನೀಡಿಲ್ಲ. ಸಾರ್ವಜನಿಕ ಸ್ಥಳದಲ್ಲಿ, ಹೊರಾಂಗಣದಲ್ಲಿ ದೊಡ್ಡ ವೇದಿಕೆಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡದಂತೆ ಆದೇಶ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಗಣೇಶಮೂರ್ತಿ ತಯಾರಕರು ತಮ್ಮ ಅಳಲನ್ನು ತೋಡಿಕೊಂಡರು. ಗಣೇಶಮೂರ್ತಿಗಳನ್ನು ನಿರ್ಮಾಣ
ಮಾಡಲು ಬೇಕಾಗುವ ಕಚ್ಚಾಸಾಮಗ್ರಿ ಕೊರತೆ ಎದುರಾಗಿದ್ದು ಕಳೆದ ಬಾರಿ ಗಣೇಶಮೂರ್ತಿಗಳ ಮಾರಾಟದಲ್ಲಿ ಹೆಚ್ಚು ಸಮಸ್ಯೆ ಅನುಭವಿಸಿದ ತಯಾರಕರು ಹಾಗೂ ವ್ಯಾಪಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಬುಕ್ಕಿಂಗ್‌ ಇಲ್ಲ, ಬೇಡಿಕೆಯೇ ಇಲ್ಲ: ಜುಲೈ, ಆಗಸ್ಟ್‌ ಪ್ರಾರಂಭದಿಂದಲೇ ವಿವಿಧ ರೀತಿಯ ಗಣಪತಿ ಮೂರ್ತಿಗಳನ್ನು ತಯಾರಿಸಲು ಬೇಡಿಕೆ ಬರುತ್ತಿದ್ದ ಹಿನ್ನೆಲೆಯಲ್ಲಿ ತಯಾರಿಕರಿಗೆ ಬಿಡುವೇ ಇಲ್ಲದಂತಾಗುತ್ತಿತ್ತು. ಕೋವಿಡ್ ಜನರ ಬದುಕನ್ನು ಕಸಿದುಕೊಳ್ಳುವುದರ ಜೊತೆಗೆ ಗಣಪತಿ ಮೂರ್ತಿಗಳ ನಿರ್ಮಾಣಕ್ಕೆ ಬಹಳಷ್ಟು ವಿಘ್ನ ತಡೆ ಒಡ್ಡಿದೆ. ಗಣೇಶ ಹಬ್ಬದ ದಿನವೂ ಗಣಪತಿ ಮೂರ್ತಿ ತಯಾರಿಕೆಗೆ ಬೇಡಿಕೆ ಬರುತ್ತಿತ್ತು. ಈ
ಬಾರಿಯೂ ವಿಘ್ನ ವಿನಾಯಕ ನಿವಾರಕನನ್ನು ತಯಾರಿಸುವವರಿಗೂ ಕೋವಿಡ್ ವಿಘ್ನವಾಗಿದೆ. ಆಗಸ್ಟ್‌ ತಿಂಗಳು ಮುಗಿಯುತ್ತಾ ಹೋದರೂ ಸಹ
ಗಣಪತಿ ಮೂರ್ತಿಗಳನ್ನುಕೇಳುವರೇ ಇಲ್ಲದಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.8ರಷ್ಟು ಬೇಡಿಕೆ ಬುಕಿಂಗ್‌ ನಡೆದಿಲ್ಲ.

ಕೋವಿಡ್ ಪರಿಹಾರ ನೀಡಿ: ಚಲನಚಿತ್ರ, ನಾಟ್ಯ, ಸಂಗೀತ ಕಲಾವಿದರು ಸೇರಿ ಇತರೆ ರಂಗ ಕಲಾವಿದರುಗಳಿಗೆ ಮಾತ್ರ ಸರ್ಕಾರ ಕೋವಿಡ್
ಪ್ಯಾಕೇಜ್‌ ನೀಡುತ್ತಿದೆ. ಆದರೆ ಕಲಾವಿದರ ಪಟ್ಟಿಯಲ್ಲಿ ಚಿತ್ರ, ಗಣಪತಿ ಮೂರ್ತಿ ತಯಾರಕ ಕಲಾವಿದರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ನಾವು ಕೂಡ ಕಲಾವಿದರೇ ನಮ್ಮನ್ನು ಪರಿಗಣನೆಗೆ ತೆಗೆದುಕೊಂಡು ಸರ್ಕಾರದಿಂದ ನಮಗೆ ಆಗಿರುವ ನಷ್ಟ ಪರಿಹಾರವನ್ನು ನೀಡಬೇಕು. ಕೋವಿಡ್ ಪ್ಯಾಕೇಜ್‌ ಘೋಷಣೆ ಮಾಡಬೇಕುಎಂದು ಗಣಪತಿಮೂರ್ತಿ ತಯಾರಕರು ಆಗ್ರಹಿಸಿದ್ದಾರೆ

ಹೊಟ್ಟೆ ಪಾಡಿಗೆ ಏನು
ಮಾಡೋದು..?
ವರ್ಷಕೊಮ್ಮೆ ಬರುವ ಗಣೇಶನ ಹಬ್ಬದಲ್ಲಿ ಹರ್ಷ ದಿಂದ ವರ್ಷದ ಜೀವನ ಕಟ್ಟಿಕೊಳ್ಳುತ್ತಿದ್ದ ನಮಗೆ ಕೋವಿಡ್ ಕೆಂಗಣ್ಣಿನಿಂದ ತಿಂಗಳ ಜೀವನ ದೂಡುವುದು ಕಷ್ಟವಾಗಿದೆ.ಕಳೆದ ಮತ್ತು ಈ ಬಾರಿಯ ಹಬ್ಬ ಗಣೇಶಮೂರ್ತಿ ತಯಾರಿಕಾ ಕಲಾವಿದರ ಹೊಟ್ಟೆ ಪಾಡಿನ ಬದುಕಿಗೆ ತಣ್ಣೀರ ಬಟ್ಟೆ ಹಾಕಿದಂತೆ ಆಗಿದೆ ಎಂದು ಅಳಲು ತೋಡಿಕೊಂಡರು.

ಸುಮಾರು 51ವರ್ಷಗಳಿಂದ ಗಣೇಶಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದೇನೆ. ಪ್ರತಿವರ್ಷ ಹಬ್ಬಕ್ಕೆ ಎರಡು, ಮೂರು ತಿಂಗಳ ಮುಂಚಿತವಾಗಿ ಗೌರಿ-ಗಣೇಶ ಮೂರ್ತಿಗೆ ಭಕ್ತರು ಮುಂಗಡ ನೀಡುತ್ತಿದ್ದರು. ಆದರೆ ಈ ಬಾರಿ ಒಂದೇ ಒಂದು ಬೇಡಿಕೆ ಬಂದಿಲ್ಲ.
– ಲಕ್ಷ್ಮಮ್ಮ,
ಗಣೇಶ ಮೂರ್ತಿ ತಯಾರಕರು.

ಕಳೆದ 31ವರ್ಷಗಳಿಂದ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಮಣ್ಣಿನ ಗಣಪತಿ ಮೂರ್ತಿಗಳನ್ನು ಹೆಚ್ಚು ಮಾಡಲಾಗುತ್ತಿದೆ. ವಂಶಪಾರಂಪರೆಯಾಗಿರುವ ಕುಲಕಸುಬನ್ನು ಬಿಡಬಾರದೆಂಬ ಉದ್ದೇಶದಿಂದ ಗಣಪತಿ ಮೂರ್ತಿ ತಯಾರಿಸುತ್ತಿದ್ದೇವೆ. ಸಾರ್ವಜನಿಕವಾಗಿ ಗಣೇಶ ಮೂರ್ತಿಗೆ ಹೆಚ್ಚಿನವರು ಆಸಕ್ತಿ ತೋರುತ್ತಿಲ್ಲ. ಗೌರಿಗಣೇಶ ಹಬ್ಬವೆಂದರೆ ಗ್ರಾಮದಿಂದ ಹಿಡಿದು ಪಟ್ಟಣ, ನಗರ ಪ್ರದೇಶಗಳಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿತ್ತು.
● ರಾಮಪ್ಪ, ಗಣಪತಿ ಮೂರ್ತಿ ತಯಾರಕ.

-ಎಸ್‌.ಮಹೇಶ್‌.

ಟಾಪ್ ನ್ಯೂಸ್

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

4

Crime: ರೌಡಿಶೀಟರ್‌ ಕೊಲೆ ಯತ್ನ; ಆರೋಪಿಗೆ ಗುಂಡೇಟು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

11

Lack of Bus stand: ಹೊಸಕೋಟೆ; ಬಸ್‌ ನಿಲ್ದಾಣವಿಲ್ಲದೆ ಪರದಾಟ!

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

1-dhanjay

Ullal; ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ವಂಚನೆ ಯತ್ನ: ಬಂಧನ

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.