ಗಂಗಾವತಿ:ನಿಧಿಗಳ್ಳರಿಂದ ಐತಿಹಾಸಿಕ ದೇವಘಾಟ್ ಅಮೃತೇಶ್ವರ ಗುಡಿ ಧ್ವಂಸ
Team Udayavani, Jan 1, 2022, 10:34 AM IST
ಗಂಗಾವತಿ : ಇತಿಹಾಸ ಪ್ರಸಿದ್ಧ ದೇವಘಾಟದಲ್ಲಿರುವ ಅಮೃತೇಶ್ವರ ದೇಗುಲದ ಗರ್ಭಗುಡಿಯ ಮುಂದಿನ ಭಾಗದಲ್ಲಿ ನಿಧಿಗಳ್ಳರು ಗುಂಡಿ ತೋಡಿದ ಪ್ರಕರಣ ಗುರುವಾರ ರಾತ್ರಿ ಜರುಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯಲ್ಲಿ ದೇಗುಲ ಕಮೀಟಿಯವರು ಕೇಸ್ ದಾಖಲಿಸಿದ್ದಾರೆ.
ವಿಜಯನಗರ ಕಾಲದಲ್ಲಿ ನಿರ್ಮಿಸಲಾಗಿರುವ ಅಮೃತೇಶ್ವರ ದೇಗುಲದಲ್ಲಿ ಶಿವಲಿಂಗ ಹಾಗೂ ನಂದಿ ವಿಗ್ರಹಗಳಿದ್ದು ನಿಧಿ ಆಸೆಗಾಗಿ ಈಗಾಗಲೇ ಹಲವು ಭಾರಿ ನಿಧಿಗಳ್ಳರು ಇಲ್ಲಿಯ ಗರ್ಭಗುಡಿಯ ಮುಂದಿನ ಭಾಗದಲ್ಲಿ ಆಳವಾಗಿ ನೆಲವನ್ನು ತೋಡಿದ್ದರು. ಗುರುವಾರ ರಾತ್ರಿ ಯಾರು ಇಲ್ಲದ ಸಮಯದಲ್ಲಿ ಗರ್ಭಗುಡಿ ಹಾಗೂ ಮುಂದಿನ ಭಾಗದ ಪಡಸಾಲಿಯನ್ನು ತೋಡಿ ನಿಧಿಗಾಗಿ ಶೋಧ ನಡೆಸಿರುವ ಶಂಕೆ ಇದೆ. ಕಳೆದ ವರ್ಷಗಳ ಹಿಂದೆ ಆನೆಗೊಂದಿಯ ನವವೃಂದಾವನ ಗಡ್ಡಿಯಲ್ಲಿರುವ ವ್ಯಾಸರಾಯ(ರಾಜ)ರ ವೃಂದಾವನ ಧ್ವಂಸ ಮಾಡಿ ನಿಧಿಗಾಗಿ ಶೋಧ ನಡೆಸಲಾಗಿತ್ತು. ಇದೇ ತರ ಹೇಮಗುಡ್ಡ, ವಾಣಿಭದ್ರೇಶ್ವರ ಸೇರಿ ಈ ಭಾಗದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯಗಳನ್ನು ತೋಡಿ ನಿಧಿಗಾಗಿ ನಿಧಿಗಳ್ಳರು ಸ್ಮಾರಕಗಳನ್ನು ನಾಶ ಮಾಡುತ್ತಿದ್ದಾರೆ.
ಅಮೃತೇಶ್ವರ ದೇಗುಲದ ಗರ್ಭಗುಡಿ ಮುಂದಿನ ಭಾಗವನ್ನು ನಿಧಿಗಳ್ಳರು ಗುರುವಾರ ತೋಡಿ ನಿಧಿ ಶೋಧ ಮಾಡಲಾಗಿದೆ. ಈ ಕುರಿತು ದೇಗುಲ ಕಮೀಟಿಯ ನಿರ್ಣಯದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಕಮೀಟಿಯ ವಿರೇಶ ಕೊಳ್ಳಿ ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.