ಗಂಗೊಳ್ಳಿ ಕಡಲತಡಿ ತ್ಯಾಜ್ಯಗಳ ಬೀಡು


Team Udayavani, Mar 5, 2023, 2:55 PM IST

beach

ಗಂಗೊಳ್ಳಿ: ಪಂಚ ನದಿಗಳ ಸಂಗಮದ ತಾಣವಾಗಿರುವ ಗಂಗೊಳ್ಳಿಯ ಸುಂದರ ಸಮುದ್ರ ತೀರ ತ್ಯಾಜ್ಯ ವಿಸರ್ಜನೆಯ ಕೇಂದ್ರವಾಗಿ ಮಾರ್ಪಡುತ್ತಿದ್ದು, ಪ್ರವಾಸಿಗರು ಹಾಗೂ ವಾಯುವಿಹಾರಿಗಳು ತೀವ್ರ ಮುಜುಗರ ಅನು ಭವಿಸುವಂತಾಗುತ್ತಿದೆ. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವೆಂದು ಗುರುತಿಸಲ್ಪಡುವ ಗಂಗೊಳ್ಳಿಯ ಸಮುದ್ರ ತೀರಅಭಿವೃದ್ಧಿಯ ಭಾಗ್ಯ ಕಂಡಿಲ್ಲ. ತ್ರಾಸಿ – ಮರವಂತೆ ಕಡಲ ಕಿನಾರೆ ಪ್ರದೇಶ ಹೊರತುಪಡಿಸಿದರೆ ಈ ಭಾಗದ ಯಾವುದೇ ಕಡಲ ಕಿನಾರೆ ಪ್ರದೇಶಗಳು ಅಭಿವೃದ್ಧಿ ಹೊಂದಿಲ್ಲ.

ಕುಂದಾಪುರದ ಕೋಡಿ ಕಡಲತಡಿಯಲ್ಲಿ ಸೀವಾಕ್‌ ನಿರ್ಮಾಣವಾಗಿ ಸಾವಿರಾರು ಜನ ಪ್ರವಾಸಿಗರು ಬರುತ್ತಿದ್ದರೂ ಪ್ರವಾಸೋದ್ಯಮದ ನಿಟ್ಟಿನಲ್ಲಿ ನಡೆದ ಅಭಿವೃದ್ಧಿ ಕಾರ್ಯ ಶೂನ್ಯವೇ ಸರಿ. ಪಂಚ ಗಂಗಾವಳಿ ಎಂಬ ಹೆಸರಿಗೆ ತಕ್ಕಂತೆ ಐದು ನದಿಗಳು ಒಟ್ಟು ಸೇರಿ ಸಮುದ್ರವನ್ನು ಸೇರುವ ನಯನ ಮನೋಹರ ದೃಶ್ಯ ಗಂಗೊಳ್ಳಿಯಲ್ಲಿ ಕಾಣಬಹುದು. ಸೂರ್ಯೋದಯ ಹಾಗೂ ಸೂರ್ಯಾಸ್ತಮಾನವನ್ನು ಒಂದೇ ಸ್ಥಳದಲ್ಲಿ ನಿಂತು ನೋಡಬಹುದಾದ ಸ್ಥಳ ಗಂಗೊಳ್ಳಿ.

ಇನ್ನೊಂದೆಡೆ ಮೀನುಗಾರಿಕಾ ಬಂದರು, ಹಳೆಯ ಲೈಟ್‌ಹೌಸ್‌ ಸೇರಿದಂತೆ ಸುಮಾರು 450 ವರ್ಷಕ್ಕೂ ಪುರಾತನವಾದ ದೇವಸ್ಥಾನಗಳು, ಶಿಲಾಶಾಸನಗಳು ಗಂಗೊಳ್ಳಿಯಲ್ಲಿ ಕಂಡು ಬರುತ್ತದೆ. ತ್ಯಾಜ್ಯ ರಾಶಿ ಸುಂದರ ರಮಣೀಯ ಪ್ರದೇಶದ ಕಡಲತೀರ ತ್ಯಾಜ್ಯಗಳಿಂದ ತುಂಬಿ ತುಳುಕುತ್ತಿದೆ. ಕಡಲ ತೀರಕ್ಕೆ ಹೋಗುವ ದಾರಿಯುದ್ದಕ್ಕೂ ತಾಜ್ಯಗಳು ಅಲ್ಲಲ್ಲಿ ಕಂಡು ಬರುತ್ತಿದೆ. ಪ್ರವಾಸಿಗರನ್ನು ಹಾಗೂ ಪ್ರತಿನಿತ್ಯ ವಿಹಾರಕ್ಕೆಂದು ಬರುವ ಜನರನ್ನು ಈ ಪರಿಸರದ ಗಬ್ಬು ವಾಸನೆ ಸ್ವಾಗತಿಸುತ್ತಿದೆ. ಎಲ್ಲಿ ನೋಡಿದರಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆಯಲಾಗಿದೆ.

ಕಡಲ ತೀರಕ್ಕೆ ಸಾಗುವ ದಾರಿಯ ಇಕ್ಕೆಲಗಳಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಸಂಗ್ರಹಗೊಂಡಿದ್ದು ಪ್ರವಾಸಿಗರನ್ನು ಹಾಗೂ ಪ್ರತಿನಿತ್ಯ ವಿಹಾರಕ್ಕೆ ಬರುವ ಜನರಿಗೆ ಅಸಹ್ಯ ಮೂಡಿಸುತ್ತಿದೆ. ಕಡಲ ತೀರದಲ್ಲಿ ಕಸ ವಿಲೇವಾರಿ ಗಂಗೊಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಎಸ್‌ ಎಲ್‌ಆರ್‌ಎಂ ಘಟಕ ಕಾರ್ಯನಿರ್ವಹಿಸುತ್ತಿದ್ದರೂ ಜನರು ತಮ್ಮ ಮನೆ ಹಾಗೂ ವಾಣಿಜ್ಯ ಮಳಿಗೆಗಳ ತ್ಯಾಜ್ಯವನ್ನು ಸಂಜೆ ಬಳಿಕ ಕಡಲ ತೀರದಲ್ಲಿ ಎಸೆಯುತ್ತಿದ್ದಾರೆ. ಮನೆಯ ಹಳೆ ಸಾಮಗ್ರಿಗಳು, ಹಾಳಾದ ಟಿವಿ, ಫ್ರಿಡ್ಜ್ ಮೊದಲಾದ ಉಪಕರಣಗಳನ್ನು ಕೂಡ ಕಡಲ ತೀರದಲ್ಲಿ ವಿಲೇವಾರಿ ಮಾಡಲಾಗಿದೆ.

ಮನೆಯ ನಿರುಪಯುಕ್ತ ಕಟ್ಟಡ ಸಾಮಗ್ರಿಗಳು, ಮರಗಳನ್ನು ಕೂಡ ಕಡಲ ತೀರದಲ್ಲಿ ಬೇಕಾಬಿಟ್ಟಿ ವಿಸರ್ಜಿಸಲಾಗಿದೆ. ಗಂಗೊಳ್ಳಿಯ ಕಡಲ ತೀರದಲ್ಲಿ ತ್ಯಾಜ್ಯ ವಿಸರ್ಜನೆಯಿಂದ ಜನರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿನ ಜನರಿಗೆ ಬಂದೊದಗಿದೆ. ಕಳೆದ ಕೆಲವು ದಿನಗಳ ಹಿಂದೆ ಕಡಲ ತೀರದಲ್ಲಿ ಬಿಸಾಡಿದ ಪ್ಲಾಸ್ಟಿಕ್‌ ತ್ಯಾಜ್ಯ ತಿಂದು ಜಾನುವಾರು ಮೃತಪಟ್ಟಿದೆ. ಗಮನಿಸಲಿ ಒಟ್ಟಿನಲ್ಲಿ ಸುಂದರ ಕಡಲ ತೀರವಾಗಿ ರೂಪುಗೊಳ್ಳಬೇಕಾಗಿದ್ದ ಗಂಗೊಳ್ಳಿ ಕಡಲ ತೀರ ತ್ಯಾಜ್ಯ ವಿಸರ್ಜನೆಯ ಕೇಂದ್ರವಾಗಿ ಬೆಳೆಯುತ್ತಿದೆ.

ಕಡಲ ತೀರದಲ್ಲಿ ತ್ಯಾಜ್ಯ ವಿಸರ್ಜನೆಗೆ ಅಂಕುಶ ಹಾಕದಿದ್ದಲ್ಲಿ ಮತ್ತೂಂದು ಬೀಡಿನಗುಡ್ಡೆ ಆಗಿ ಮಾರ್ಪಡುವುದರಲ್ಲಿ ಸಂಶಯವಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆ, ಗ್ರಾ.ಪಂ. ಸೂಕ್ತ ಕಠಿನ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಗಂಗೊಳ್ಳಿಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಗುರುತಿಸಿ ಅಭಿವೃದ್ಧಿಪಡಿಸಿದರೆ ತ್ಯಾಜ್ಯ ವಿಲೇವಾರಿಗೆ ಬ್ರೇಕ್‌ ಬೀಳಲಿದೆ. ಖಾಲಿ ಜಾಗ ನೋಡಿ ಜನರು ತ್ಯಾಜ್ಯ ಎಸೆಯುತ್ತಿದ್ದು, ತ್ಯಾಜ್ಯ ಎಸೆಯುವವರನ್ನು ಗುರುತಿಸಿ ಅವರಿಗೆ ಕಠಿನ ಶಿಕ್ಷೆ ನೀಡಬೇಕು. ಗಂಗೊಳ್ಳಿ ಬೀಚ್‌ನಲ್ಲಿ ಸ್ವತ್ಛತೆ ಕಾಪಾಡಲು ಸಾರ್ವಜನಿಕರು ಸಹಕಾರ ನೀಡಬೇಕು. ಸ್ಥಳೀಯಾಡಳಿತ ಬೀಚ್‌ನಲ್ಲಿ ಎಸೆಯಲಾಗಿರುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎನ್ನುತ್ತಾರೆ ಸ್ಥಳೀಯರಾದ ಕೃಷ್ಣ ಖಾರ್ವಿ.

ಗಂಭೀರ ಪರಿಗಣನೆ ಇಲ್ಲ
ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಗಂಗೊಳ್ಳಿ ಕಡಲ ತೀರ ತ್ಯಾಜ್ಯ ವಿಸರ್ಜನೆಯ ಕೇಂದ್ರವಾಗಿ ಮಾರ್ಪಾಟಾಗುತ್ತಿರುವುದರ ಬಗ್ಗೆ ಸ್ಥಳೀಯಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ. ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಕೂಡ ತ್ಯಾಜ್ಯ ವಿಸರ್ಜನೆ ನಿಲ್ಲಿಸಲು ಯಾವುದೇ ಕ್ರಮಕೈಗೊಳ್ಳದಿರುವುದು ತ್ಯಾಜ್ಯ ವಿಲೇವಾರಿ ಮಾಡುವವರಿಗೆ ವರದಾನವಾಗಿ ಪರಿಣಮಿಸಿದೆ. ಕಡಲ ತೀರದಲ್ಲಿ ವಿಹರಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಪ್ರತಿನಿತ್ಯ ನೂರಾರು ಮಂದಿ ಬರುತ್ತಿದ್ದ ಬೀಚ್‌ನಲ್ಲಿ ಇದೀಗ ಕೆಲವೇ ಕೆಲವು ಮಂದಿ ಮಾತ್ರ ಬರುತ್ತಿದ್ದಾರೆ. ಆಸುಪಾಸಿನ ಮಂದಿ ಬೀಚ್‌ನಲ್ಲಿ ಗೊತ್ತಿಲ್ಲದೆ ತ್ಯಾಜ್ಯ ಎಸೆಯುತ್ತಿರುವುದು ಸುತ್ತಮುತ್ತಲಿನ ನಿವಾಸಿಗಳ ನಿದ್ರೆಗೆಡಿಸಿದೆ. ಗಬ್ಬು ವಾಸನೆ ಪರಿಸರದ ತುಂಬೆಲ್ಲಾ ಹರಡಿಕೊಂಡಿದ್ದು ಜನಜೀವನ ದುಸ್ತರವೆನಿಸಿದೆ.

ತೆರವಿಗೆ ಕ್ರಮ

ಗಂಗೊಳ್ಳಿ ಬೀಚ್‌ನಲ್ಲಿ ತ್ಯಾಜ್ಯ ವಿಸರ್ಜನೆಗೆ ಸಂಬಂಧಪಟ್ಟಂತೆ ಈಗಾಗಲೇ ಅನೇಕ ಬಾರಿ ಸ್ಥಳೀಯರಿಗೆ ಮೌಖೀಕ ಎಚ್ಚರಿಕೆ ನೀಡಲಾಗಿದೆ. ಆದರೂ ತ್ಯಾಜ್ಯ ಕಡಿಮೆಯಾಗಿಲ್ಲ. ಸಂಬಂಧಪಟ್ಟ ಇಲಾಖಾಧಿ ಕಾರಿಗಳ ಜತೆ ಚರ್ಚೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಸದ್ಯ ಬೀಚ್‌ ವಠಾರದಲ್ಲಿರುವ ತ್ಯಾಜ್ಯಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು.

-ಉಮಾಶಂಕರ, ಪಿಡಿಒ, ಗ್ರಾಮ ಪಂಚಾಯತ್‌ ಗಂಗೊಳ್ಳಿ

ಗ್ರಾ.ಪಂ.ಗೆ ದೂರು

ಕಳೆದ ಹಲವು ವರ್ಷಗಳಿಂದ ಜನರು ಗಂಗೊಳ್ಳಿ ಬೀಚ್‌ನಲ್ಲಿ ತ್ಯಾಜ್ಯ ಎಸೆಯುತ್ತಿದ್ದು ಅನೇಕ ಬಾರಿ ಈ ಬಗ್ಗೆ ಸ್ಥಳೀಯ ಗ್ರಾಪಂ. ಗೆ ದೂರು ನೀಡಲಾಗಿದೆ. ಆದರೆ ತ್ಯಾಜ್ಯ ವಿಸರ್ಜನೆ ಕಡಿಮೆಯಾಗಿಲ್ಲ. ಪ್ರತಿನಿತ್ಯ ತ್ಯಾಜ್ಯ ವಿಸರ್ಜನೆ ವ್ಯಾಪಕವಾಗುತ್ತಿದೆ. ಪರಿಸರದಲ್ಲಿ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಎಲ್ಲರೂ ತಂದು ಬೀಚ್‌ ವಠಾರದಲ್ಲಿ ತ್ಯಾಜ್ಯ, ಕಟ್ಟಡದ ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಸ್ಥಳೀಯಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು.
-ಜಾನ್ಸನ್‌, ಸ್ಥಳೀಯ ನಿವಾಸಿ

ಟಾಪ್ ನ್ಯೂಸ್

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.