Gangolli ಜಾಮೀನಿನಲ್ಲಿ ಬಂದು ವಾರದಲ್ಲಿ ಕದ್ದು ಸಿಕ್ಕಿಬಿದ್ದ
Team Udayavani, Jun 25, 2024, 12:04 AM IST
ಗಂಗೊಳ್ಳಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಬಳಿ ಇರುವ ಪಂಚಗಂಗಾ ಸೊಸೈಟಿಯಲ್ಲಿ ಜೂ. 22ರ ತಡರಾತ್ರಿ ಕಳ್ಳತನ ಮಾಡುತ್ತಿದ್ದಾಗಲೇ ಪೊಲೀಸರು ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
13 ಕಳವು ಪ್ರಕರಣ
ಆರೋಪಿ ಕೊಲ್ಲಂ ಜಿಲ್ಲೆ ಕರುನಾಗಪಳ್ಳಿ ತಾಲೂಕು ಚೆರಿಯಳ್ಳಿಕಲ್ ಅಲಪ್ಪಾಡ್ ತಾಝಃಚೆಯಿಲ್ ವೀಡು ಪ್ರಕಾಶ್ ಬಾಬು ಯಾನೆ ನಿಯಾಝ್ (46) ಕುಂಬಳೆ ಪೊಲೀಸ್ ಠಾಣೆಯಲ್ಲಿ, ಕ್ಯಾಲಿಕಟ್‌ನ ಮಾರಾಡ ಠಾಣೆ, ತಲಶೆÏàರಿ ಠಾಣೆ, ಕಣ್ಣೂರು ನಗರ ಠಾಣೆ, ಅಲೆಪ್ಪಿ ಮಾವಿಲಕಾರ ಠಾಣೆ, ಚೆಂಗನೂರು ಠಾಣೆ, ಉಡುಪಿ ಜಿಲ್ಲೆಯ, ಗಂಗೊಳ್ಳಿ ಠಾಣೆ, ಕುಂದಾಪುರ ಠಾಣೆ, ದ.ಕ. ಜಿಲ್ಲೆಯ ಕೊಣಾಜೆ ಠಾಣೆ, ಬೆಂಗಳೂರು ಕುಮಾರಸ್ವಾಮಿ ಲೇ ಔಟ್ ಠಾಣೆ ವ್ಯಾಪ್ತಿ ಸೇರಿ 13 ಕಡೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಸ್ಕೂಟರ್‌ನಲ್ಲಿ ಕೇರಳದಿಂದ ಬಂದಿದ್ದ
ಜೂ. 15ರಂದು ಕೇರಳದ ಮಾವಿಲಕಾರ ಹಾಗೂ ಚೆಂಗನೂರು ಠಾಣಾ ಸರಹದ್ದಿನ ಕಳವು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡು ಬಂದಿದ್ದ ಈತ ಕೇರಳದಿಂದ ಬೆಂಗಳೂರಿಗೆ ಬಂದು, ಅಲ್ಲಿಂದ ಚಿಕ್ಕಮಗಳೂರಿಗೆ ಬಂದು, ಅಲ್ಲಿಂದ ಕುಂದಾಪುರ, ಮುಳ್ಳಿಕಟ್ಟೆಗೆ ಸ್ಕೂಟರ್‌ನಲ್ಲಿ ಬಂದಿದ್ದ.
ಲಘುವಾಗಿ ಪರಿಗಣಿಸಿದ್ದನೇ?
ರಾತ್ರಿ ಪಂಚಗಂಗಾ ಸೊಸೈಟಿಯ ಹಿಂಬದಿಯ ಕಿಟಕಿ ಮುರಿದು ಸೊಸೈಟಿಗೆ ನುಗ್ಗಿದ ಕಳ್ಳ ಸಿಸಿ ಟಿವಿ ಕೆಮರಾ ಇರುವುದನ್ನು ಗಮನಿಸಿದ್ದ. ಸ್ವಿಚ್ ಹಾಕಿ ಲೈಟ್ ಕೂಡಾ ಬೆಳಗಿಸಿ ಕೋಣೆಯೆಲ್ಲ ಬೆಲೆಬಾಳುವ ವಸ್ತು, ಹಣಕ್ಕಾಗಿ ತಡಕಾಡಿದ್ದ. ಆದರೆ ಅಲ್ಲಿದ್ದ ಸಿಸಿ ಟಿವಿ ಕುಂದಾಪುರದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ 24 ತಾಸು ನೇರ ವೀಕ್ಷಣೆಯ ಟಿವಿ ಎಂದು ಗೊತ್ತಾಗದೇ ಸಿಕ್ಕಿಬಿದ್ದ. ನೇರ ವೀಕ್ಷಣೆ ಮಾಡುತ್ತಿದ್ದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಸಿಬಂದಿ ತತ್‌ಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿ, ರಾತ್ರಿ ರೌಂಡ್ಸ್‌ನಲ್ಲಿ ಬಂಟ್ವಾಡಿ ಸಮೀಪವಿದ್ದ ಪಿಎಸ್‌ಐ ಬಸವರಾಜ ಕನಶೆಟ್ಟಿ ಅವರು 5 ನಿಮಿಷದ ಒಳಗೆ ತಲುಪುವಂತೆ ಮಾಡಿದರು. ಪೊಲೀಸ್ ಸಿಬಂದಿ ಮೋಹನ ಪೂಜಾರಿ ಹಾಗೂ ಎಸ್‌ಐ ಘಟನ ಸ್ಥಳಕ್ಕೆ ತೆರಳಿ ಕಿಟಕಿ ಮೂಲಕವೇ ಕಳ್ಳನಿಗೆ ಪೊಲೀಸ್ ಬಂದುದನ್ನು ತಿಳಿಸಿ ಎಚ್ಚರಿಸಿ ಅಲ್ಲೇ ಇರುವಂತೆ ಮಾಡಿದರು. ಬ್ರಾಂಚ್ ಮ್ಯಾನೇಜರ್ ಹಾಗೂ ಸಿಬಂದಿ ಸ್ಥಳಕ್ಕೆ ಬಂದ ಬಳಿಕ ಬಾಗಿಲು ತೆರೆದು ಕಳವು ಮಾಡುತ್ತಿದ್ದವನನ್ನು ವಶಕ್ಕೆ ಪಡೆದಿದ್ದಾರೆ.
ಸ್ವಾಧೀನ
ಆರೋಪಿಯಿಂದ ಕಳವು ಮಾಡಿದ ನಗದು 2 ಸಾವಿರ ರೂ., ಕಳವು ಮಾಡಲು ಬಂದ ಸುಝುಕಿ ಎಕ್ಸೆಸ್ ಮೋಟಾರು ಸೈಕಲ್, ಮೊಬೈಲ್, ಕೃತ್ಯಕ್ಕೆ ಉಪಯೋಗಿಸಿದ ಮೂರು ರಾಡ್, ಕಟ್ಟಿಂಗ್ ಪ್ಲೇಯರ್ ಇನ್ನಿತರ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.