Gangolli: ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಪತ್ತೆ
Team Udayavani, Oct 30, 2024, 9:10 PM IST
ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ನಾಯಕವಾಡಿಯ ಅಶ್ಫಕ್ ಎಂಬುವರ ಮನೆಯಲ್ಲಿ ಹಮ್ಜಾ, ಗಣೇಶ್ ಅವರು ಸರಕಾರದ ಉಚಿತ ಅನ್ನ ಭಾಗ್ಯ ಅಕ್ಕಿಯನ್ನು ಕಾನೂನು ಬಾಹಿರವಾಗಿ ದಾಸ್ತಾನು ಇರಿಸಿರುವುದನ್ನು ಕುಂದಾಪುರದ ಆಹಾರ ನಿರೀಕ್ಷಕ ಸುರೇಶ್ ಹೆಚ್.ಎಸ್. ಅವರು ಬುಧವಾರ ದಾಳಿ ನಡೆಸಿ ಪತ್ತೆ ಹಚ್ಚಿದ್ದಾರೆ.
ಅಶ್ಫಕ್ ಅವರ ಮನೆಯ ಬಲಬದಿಯ ಚಾವಡಿಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಸುಮಾರು 18,700 ರೂ. ಮೌಲ್ಯದ 550 ಕೆ.ಜಿ. ಅನ್ನಭಾಗ್ಯ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಾದ ಗಣೇಶ ಮತ್ತು ಹಮ್ಜಾರವರು ಸರಕಾರದಿಂದ ಉಚಿತವಾಗಿ ದೊರೆಯುವ ಅಕ್ಕಿಯನ್ನು ಯಾರಿಂದಲೋ ಖರೀದಿಸಿ ಹೆಚ್ಚಿನ ಬೆಲೆಗೆ ಅಂಗಡಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಅಶ³ಕ್‌ರವರ ಮನೆಯ ಚಾವಡಿಯಲ್ಲಿ ದಾಸ್ತಾನು ಇಟ್ಟಿರುವುದಾಗಿದೆ.
ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ
Hardeep Singh Nijjar ಮಾಹಿತಿ ಸೋರಿಕೆ: ತಪ್ಪೊಪ್ಪಿಕೊಂಡ ಕೆನಡಾ
Hamas: ಸಿನ್ವರ್ ಮರಣ ಬಳಿಕ ಕದನ ವಿರಾಮಕ್ಕೆ ಹಮಾಸ್ ಯತ್ನ?
BBK11: ಮಾನಸ ಭಾರೀ ಸೌಂಡ್ ಮಾತ್ರ, ಬಳಿಕ ಠುಸ್ ಬಾಂ*ಬ್ ಎಂದ ಹನುಮಂತು!
Maharashtra Assembly Elections: ಮಹಾ ಚುನಾವಣಾ ಕಣದಲ್ಲಿ 150 ಬಂಡಾಯ ಸ್ಪರ್ಧಿಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.