ಕೋತಿಗಳ 2 ಗುಂಪುಗಳ ನಡುವೆ ಗ್ಯಾಂಗ್‌ವಾರ್; ಚರ್ಚೆಗೆ ಗ್ರಾಸ
ಈ ಗ್ರಾಮದಲ್ಲಿ ವಾನರಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದೇ ಈ ಹೆಸರು ಬರಲು ಕಾರಣವಾಗಿತ್ತು.
Team Udayavani, Jul 15, 2022, 5:34 PM IST
ಹನೂರು: ಕೋತಿಗಳ 2 ಗುಂಪುಗಳ ನಡುವೆ ನಡೆದ ಗ್ಯಾಂಗ್‌ವಾರ್‌ನ ವಿಡಿಯೋವೊಂದು ವೈರಲ್ ಆಗಿದ್ದು ಹನೂರು ಪಟ್ಟಣಾದ್ಯಂತ ಹಲವು ಆಯಾಮಗಳ ಚರ್ಚೆಗೆ ಗ್ರಾಸವಾಗಿದೆ.
ಪಟ್ಟಣದ ಸಂತೇಪೇಟೆ ಬೀದಿಯಲ್ಲಿ ಗುರುವಾರ ಮಧ್ಯಾಹ್ನ ಕೋತಿಗಳ 2 ಗುಂಪು ಪರಸ್ಪರ ಕಿತ್ತಾಡಿಕೊಂಡು, ಚೀರಾಡುತ್ತಿರುವುದನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಮಂಗನಿಂದ ಮಾನವ ಎಂಬ ಗಾದೆ ಮಾತಿನಂತೆ ಮಂಗಗಳ ಜಗಳವು ಮಾನವನ ಗ್ಯಾಂಗ್‌ವಾರ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿಯೇ ಜರುಗಿದೆ. ಈ ಗ್ಯಾಂಗ್‌ವಾರ್‌ನಿಂದಾಗಿ ರಸ್ತೆಯ ಬದಿಯಲ್ಲ ನಿಲ್ಲಿಸಿದ್ದ ಟಿವಿಎಸ್ ಮೊಪೆಡ್ ಗೂ ಹಾನಿಯುಂಟಾಗಿದೆ.
ಹಲವು ಆಯಾಮಗಳಲ್ಲಿ ಚರ್ಚೆ:ಕೋತಿಗಳ ಈ ಗ್ಯಾಂಗ್‌ವಾರ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗಳು ಜರುಗುತ್ತಿವೆ. ಈ ವಿಡಿಯೋ ಯುವಕ- ಯುವತಿಯರಿಗೆ ಮನರಂಜನೆಯ ವಿಡಿಯೋ ಅಷ್ಟೇ ಆಗಿದೆ.
ಆದರೆ ಕೆಲ ಹಿರಿಯರು ಈ ಬಗ್ಗೆ ಅವರದೇ ಶೈಲಿಯಲ್ಲಿ ವ್ಯಾಖ್ಯಾನಿಸುತ್ತಿದ್ದು ಹನೂರು ಹಿಂದೆ ಹನುಮಪುರಿ ಎಂಬ ಹೆಸರಿನಿಂದ ಕರೆಯಲ್ಪಡುತಿತ್ತು. ಈ ಗ್ರಾಮದಲ್ಲಿ ವಾನರಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದೇ ಈ ಹೆಸರು ಬರಲು ಕಾರಣವಾಗಿತ್ತು.
ಆದರೆ ಇಂದು ಮಂಗಗಳ ಕಾಳಗ ನೋಡಿ ಪಟ್ಟಣಕ್ಕೆ ಅದ್ಯಾವ ಕಷ್ಟ ಬಂದೊದಗಲಿದೆಯೋ, ಪಟ್ಟಣದಲ್ಲಿ ಮುಂದೆ ನಡೆಯುವ ಕೆಲ ಅಹಿತಕರ ಘಟನೆಗಳ ಮುನ್ಸೂಚನೆ ಇದಾಗಿದೆ ಎಂದು ಕೆಲವರು ಅವರದ ಶೈಲಿಯಲ್ಲಿ ವ್ಯಾಖ್ಯಾನಿಸುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.