ಹಲವು ಆಯಾಮಗಳಲ್ಲಿ ಗೀತೆ

Team Udayavani, Dec 25, 2020, 4:54 AM IST

ಹಲವು ಆಯಾಮಗಳಲ್ಲಿ ಗೀತೆ

ಹಿಂದೂ ಪಂಚಾಂಗದಂತೆ ಮಾರ್ಗಶಿರ ಶುಕ್ಲ ಏಕಾದಶಿಯಂದು ಭಗವಾನ್‌ ಶ್ರೀಕೃಷ್ಣನಿಂದ ಅರ್ಜುನನಿಗೆ ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಗೀತೆಯು ಉಪದೇಶಿಸಲ್ಪಟ್ಟಿತು. ಹಾಗಾಗಿ ಈ ದಿನವನ್ನು ಗೀತಾಜಯಂತಿ ಎಂದು ಆಚರಿಸಲಾಗುತ್ತದೆ. 18 ಅಧ್ಯಾಯ, 700 ಶ್ಲೋಕಗಳಿರುವ ಭಗವ ದ್ಗೀತೆಯು ಮಹಾಭಾರತದ ಒಂದು ಭಾಗವಾಗಿದ್ದು ವ್ಯಾಸ ಮಹರ್ಷಿಗಳಿಂದ ರಚಿಸಲ್ಪಟ್ಟಿದೆ. ಭಗವದ್ಗೀತೆಯನ್ನು ಕೇವಲ ಒಂದು ಧಾರ್ಮಿಕ ಗ್ರಂಥವನ್ನಾಗಿ ನೋಡದೆ ವ್ಯಕ್ತಿತ್ವ ವಿಕಸನದ ಪುಸ್ತಕವಾಗಿ ನೋಡಬೇಕು.

ಇದರಲ್ಲಿ ಪ್ರತಿಯೊಬ್ಬರ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ದುಃಖದಲ್ಲಿ ರುವಾಗ ಇದನ್ನು ಓದಿದರೆ ಸ್ವಲ್ಪಮಟ್ಟಿಗೆ ಸಮಾ ಧಾನವಾಗಿ ಮನಸ್ಸಿಗೆ ಶಾಂತಿ ಲಭಿಸು ತ್ತದೆ ಮತ್ತು ಸಂತೋಷದಲ್ಲಿರುವಾಗ ಗ್ರಂಥ ವನ್ನು ಓದಿದರೆ ಯಶಸ್ಸು ನಮ್ಮ ತಲೆಗೆ ಏರ ದಂತೆ ನೋಡಿಕೊಳ್ಳುತ್ತದೆ. ಪ್ರತೀಸಲ ಇದನ್ನು ಓದುವಾಗ ಒಂದು ಹೊಸ ಅರ್ಥ ಗೋಚರಿ ಸುತ್ತದೆ. ಹೊಸ ವಿಷಯಗಳು ಹೊಳೆಯುತ್ತವೆ. ಯಾವ motivational ಪುಸ್ತಕಗಳು ಬೇಕಾ ಗಿಲ್ಲ, ಭಗವದ್ಗೀತೆ ಒಂದೇ ಸಾಕು ನಮ್ಮ ಇಚ್ಛಾಶಕ್ತಿಯನ್ನು ಹೆಚ್ಚಿಸಲು ಮತ್ತು ನಮ್ಮನ್ನು ಜೀವನ್ಮುಖೀಯನ್ನಾಗಿಸಲು.

“ಹಿತ್ತಲ ಗಿಡ ಮದ್ದಲ್ಲ’ ಎನ್ನುವಂತೆ ಗೀತೆಯ ಮಹತ್ವ ನಮಗೆ ತಿಳಿದಿಲ್ಲ. ಕೊನೆಗಾಲದಲ್ಲಿ ಬದುಕಿನ ಜವಾಬ್ದಾರಿ ಕಳೆದ ಅನಂತರ ಓದ ಬೇಕಾದ ಗ್ರಂಥವಿದು ಅನ್ನುವಂಥ ಭಾವನೆ. ಇದು ಸರಿಯಲ್ಲ. ಶಾಲಾ ಪಠ್ಯದಲ್ಲಿ ನಾವು ಗೀತೆಯನ್ನು ಅಳವಡಿಸಿಕೊಂಡು ಅದನ್ನು ಪರಿಣಾಮಕಾರಿಯಾಗಿ ಬೋಧಿಸಿದರೆ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ರೂಪು ಗೊಳ್ಳಲಾರರೇ? ಮಾನವೀಯತೆ, ಅನುಕಂಪ, ಸಹಾನುಭೂತಿ, ನೈತಿಕತೆಯಂಥ ಮೌಲ್ಯಗಳು ಮಕ್ಕಳಲ್ಲಿ ಮೂಡಲಾರದೇ? ತನ್ನ ಮೂವತ್ತರ ಹರೆಯದಲ್ಲಿ ಹೃದಯದ ತೊಂದರೆಗೆ ತುತ್ತಾದ ಗೆಳತಿಯೊಬ್ಬಳಿಗೆ ವೈದ್ಯರು ಹೇಳಿದ್ದು ಯಾವ ಪ್ರಯತ್ನದಿಂದಲೂ ಯಶಸ್ಸು ಖಂಡಿತ ಎಂದು ಹೇಳಲಾಗುವುದಿಲ್ಲ, ನಿನಗಿನ್ನು ಮಕ್ಕಳು ಚಿಕ್ಕವರು, ಭಗವದ್ಗೀತೆಯನ್ನು ಓದುತ್ತಾ ಉಳಿದ ಜೀವನವನ್ನು ಕಳೆ ಎಂದು. ವೈದ್ಯರು ಕೈಬಿಟ್ಟಾಗ ಆಕೆ ಭಗವದ್ಗೀತೆಯನ್ನು ಕೈಗೆತ್ತಿಕೊಂಡಳು. ದಿನನಿತ್ಯದ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಂಡ ಆಕೆಗೆ ಭಗವದ್ಗೀತೆಯಿಂದಾಗಿ ಕರ್ಮಯೋಗದ ಅರಿವಾಯಿತು.

ತಸ್ಮಾದಸಕ್ತಃ ಸತತಂ ಕಾರ್ಯಟ ಕರ್ಮ ಸಮಾಚಾರ
ಅಸಕೊ¤ ಹಯಚರನ್‌ ಕರ್ಮ ಪರಮಾಪನೊತಿ ಪುರುಷಃ
ಎಂಬ ಶ್ಲೋಕದ ಭಾವಾರ್ಥದಂತೆ ಆಸಕ್ತಿ ರಹಿತನಾಗಿ ಸದಾಕಾಲ ಕರ್ತವ್ಯ ಕರ್ಮ ನಿರ್ವಹಿಸು, ನೀನು ಪರಮಾತ್ಮನನ್ನು ಪಡೆಯುತ್ತಿಯಾ ಎಂಬುದರಿಂದ ಪ್ರಭಾವಿತಳಾಗಿ ಎಲ್ಲ ಚಿಂತೆಗಳನ್ನು ಕೊಡವಿ ಮೇಲೆದ್ದು ಚಿಕಿತ್ಸೆಯ ಕುರಿತು ಅನೇಕ ಕಡೆ ವಿಚಾರಿಸಿ ದೂರದ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಲಭಿಸಿ ಈಗ ಆರೋಗ್ಯವಂತ ಜೀವನ ನಡೆಸುತ್ತಿದ್ದಾಳೆ. ಈಗ ಬದುಕು ತ್ತಿರುವ ಪ್ರತಿಯೊಂದು ದಿನವೂ ತನಗೆ ಸಿಕ್ಕ ಬೋನಸ್‌ ದಿನ ಎಂದು ಆಕೆ ಅನುಕ್ಷಣವು ನೆನೆಸಿಕೊಳ್ಳುತ್ತಾಳೆ. ಕೆಲವೊಮ್ಮೆ ಖನ್ನಳಾದಾಗ, ಹತಾಶಳಾದಾಗ ಗೀತೆಯ ಮೊರೆ ಹೋಗುತ್ತಾಳೆ. ಗೀತೆಯಿಂದಾಗಿಯೇ ತನಗೆ ಇರುವ ಸಮಸ್ಯೆಯ ಕುರಿತು ಕೊರಗುವುದನ್ನು ಬಿಟ್ಟು ಅದನ್ನು ಸ್ವೀಕರಿಸಿ ಧೈರ್ಯದಿಂದ ಬದುಕಲು ತಿಳಿದಿದೆ ಎನ್ನುತ್ತಾಳೆ.

ಗೀತೆಯು ಅನೇಕ ಮಹಾನ್‌ ವ್ಯಕ್ತಿಗಳ ಮೇಲೆ ಪ್ರಭಾವ ಬೀರಿದೆ. ಗೀತೆಯ ಸ್ವಾರ್ಥರಹಿತ ಸೇವೆಯೆಂಬ ತತ್ವ ಗಾಂಧೀಜಿಯ ಮೇಲೆ ತುಂಬಾ ಪ್ರಭಾವ ಬೀರಿತ್ತು. ಯಾವಾಗ ನಾನು ನಿರಾಸೆಯಲ್ಲಿ ಮುಳುಗಿರುತ್ತೇನೋ ನನಗೆ ಯಾವ ಆಶಾಕಿರಣವೂ ಕಾಣುವುದಿಲ್ಲವೋ ಆಗ ನಾನು ಭಗವದ್ಗೀತೆಯ ಮೊರೆ ಹೋಗುತ್ತೇನೆ ಮತ್ತು ಅಲ್ಲಿ ನನಗೆ ಸಮಾಧಾನ ನೀಡುವಂತಹ ಶ್ಲೋಕ ಸಿಗುತ್ತದೆ, ನನ್ನ ಮುಖದಲ್ಲಿ ನಗು ಮೂಡಿಸಿ ನನ್ನನ್ನು ಉಲ್ಲಸಿತನನ್ನಾಗಿ ಮಾಡುತ್ತದೆ ಎಂದು ಹೇಳಿದ್ದರು ಗಾಂಧೀಜಿ.
ಗೀತೆಯ ಬಗ್ಗೆ ತಿಳಿಯಲು ಸಂಸ್ಕೃತ ಜ್ಞಾನವೇ ಬೇಕೆಂದಿಲ್ಲ. ಭಾರತವೇ ಏಕೆ ಅನೇಕ ರಾಷ್ಟ್ರಗಳ ಹೆಚ್ಚಿನ ಎಲ್ಲ ಭಾಷೆಗಳಿಗೆ ಭಗವದ್ಗೀತೆ ಅನುವಾದಗೊಂಡಿದೆ.

ಇಂದಿನ ಆಧುನಿಕ ಜೀವನಶೈಲಿಯಲ್ಲಿ ಭಗವದ್ಗೀತೆ ಕಂಠಪಾಠ ಮಾಡುವುದು ಅಥವಾ ದಿನನಿತ್ಯ ಓದುವುದು ಕಷ್ಟಸಾಧ್ಯ. ಆದರೆ ಸಮಯ ಹೊಂದಿಸಿಕೊಂಡು, ಹೇಗೆ ನಾವು ಟಿವಿಯಲ್ಲಿ ಯಾವ್ಯಾವ ಚಾನೆಲ್‌ನಲ್ಲಿ ಏನೇನಿದೆ ಎಂದು ನೋಡುತ್ತೇವೋ ಅದೇ ರೀತಿ ಗೀತೆಯ ಪುಟ ತಿರುಗಿಸಿ ಶ್ಲೋಕ ಮತ್ತು ಅದರ ಭಾವಾರ್ಥ ಓದಿ ಮನನ ಮಾಡಿಕೊಂಡರೆ ನಮ್ಮ ಎಷ್ಟೋ ಸಮಸ್ಯೆಗಳಿಗೆ ಸಮಾಧಾನ ಸಿಗುವುದರಲ್ಲಿ ಸಂಶಯವಿಲ್ಲ.

ಬಂಧುರಾತ್ಮಾತ್ಮನಸ್ತಸ್ಯ ಯೇನಾತ್ಮೈ ವಾತ್ಮ ನಾ
ಅನಾತ್ಮನಸ್ತು ಶತ್ರುತ್ವೇ
ವರ್ತೆತಾತ್ಮೈವ ಶತ್ರುವತ್‌(7-6)
ಎಂಬ ಗೀತೆಯ ಶ್ಲೋಕದಂತೆ ಯಾರು ಮನಸ್ಸನ್ನು ಗೆದ್ದಿದ್ದಾನೋ ಅವನಿಗೆ ಮನಸ್ಸು ಬಂಧುವಾಗುತ್ತದೆ. ಅದರೆ ಹಾಗೇ ಮಾಡದಿರುವವನಿಗೆ ಅವನ ಮನಸ್ಸೇ ಅತ್ಯಂತ ದೊಡ್ಡ ಶತ್ರುವಾಗುತ್ತದೆ. ನಾವೆಲ್ಲರೂ ಗೀತೆಯ ಸಾರವನ್ನು ಗ್ರಹಿಸಿ ಮನೋ ನಿಗ್ರಹ ಸಾಧಿಸಿ ನೆಮ್ಮದಿಯ ಬದುಕು ಬಾಳ್ಳೋಣ.

– ಶಾಂತಲಾ ಎನ್‌. ಹೆಗ್ಡೆ, ಸಾಲಿಗ್ರಾಮ

ಟಾಪ್ ನ್ಯೂಸ್

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.