ಜಾರ್ಜಿಯಾದಲ್ಲಿ ಸೆಲೂನ್, ಜಿಮ್ ಓಪನ್
Team Udayavani, Apr 26, 2020, 6:45 PM IST
ವೇಕ್ರಾಸ್: ಸತತ ನಾಲ್ಕು ವಾರಗಳ ಬಳಿಕ ಜಾರ್ಜಿಯಾ ತನ್ನ ವ್ಯವಹಾರದ ಬಾಗಿಲು ತೆರೆಯಲು ಮುಂದಾಗಿವೆ. ಅಂಗಡಿಗಳು ಶಾಪಿಂಗ್ ಮಾಲ್‌ಗಳನ್ನು ಯಥಾಸ್ಥಿತಿಗೆ ತರಲು ಸರಕಾರ ಮುಂದಾಗಿದೆ. ರಾಜ್ಯದ ವೇಕ್ರಾಸ್ ನಗರದಲ್ಲೂ ವ್ಯಾಪಾರ ವಹಿವಾಟು ಆರಂಭಗೊಂಡಿದೆ. ಆರ್ಥಿಕವಾಗಿ ಜನರು ಮತ್ತಷ್ಟು ಕುಗ್ಗುವುದನ್ನು ತಪ್ಪಿಸಲು ಮುಂದಾಗಿರುವ ಸರಕಾರ ವ್ಯವಹಾರಗಳನ್ನು ಮತ್ತೆ ಸಹಜ ಸ್ಥಿತಿಗೆ ತರಲು ಪ್ರಯತ್ನಿಸುತ್ತಿದೆ.
ಶುಕ್ರವಾರ ಮೊದಲ ದಿನ ಟ್ಯಾಟೂ ಪಾರ್ಲರ್‌ಗಳು, ಜಿಮ್‌ಗಳು ಮತ್ತು ಸೆಲೂನ್‌ಗಳನ್ನು ಮತ್ತೆ ತೆರೆಯಲು ಅನುಮತಿ ನೀಡಲಾಗಿತ್ತು. ಲಾಕ್‌ಡೌನ್ ತೆರವುಗೊಳಿಸಲಾಗಿದೆ. ಆದರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆಯೂ ಜಾರಿಯಲ್ಲಿದೆ. ನೌಕರರ ತಾಪಮಾನವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗುತ್ತದೆ. ಸೆಲೂನ್‌ಗಳು ತೆರೆಯುವ ಮೊದಲೇ ಕೆಲವು ಶಾಪ್ ಗಳ ಎದುರು ಕ್ಯೂಗಳು ಕಂಡುಬರುತ್ತಿವೆ. ಇತರ ಯಾವುದೇ ಅಂಗಡಿಗಳನ್ನು ಪುನರಾರಂಭಿಸಲಾಗಿಲ್ಲ.
ಇಲ್ಲಿನ ನಗರದ 18 ಕ್ಷೌರಿಕರು ತಮ್ಮ ಸೆಲೂನ್‌ಗಳನ್ನು ತೆರೆದಿದ್ದರು. ಜತೆಗೆ ತಮ್ಮ ಶಾಪ್‌ನಲ್ಲಿ ಮಾಸ್ಕ್ಗಳನ್ನು ಇಟ್ಟಿದ್ದರು. ಬರುವ ಗ್ರಾಹಕರಲ್ಲಿ ರೋಗ ಲಕ್ಷಣಗಳು ಇದೆಯೇ ಎಂಬುದನ್ನು ಕೇಳಿ ತಿಳಿದುಕೊಳ್ಳಲಾಗುತ್ತದೆ. ಜಿಮ್ ಕೇಂದ್ರಗಳನ್ನು ತೆರೆಯಲಾಗಿದ್ದು, ಮಾಸ್ಕ್ ಬಳಸಲಾಗುತ್ತಿ¤ದೆ. ಸ್ಯಾನಿಟೈಸರ್‌ಗಳನ್ನು ಜಿಮ್‌ನಲ್ಲಿ ಬಳಸುವ ಯಂತ್ರಗಳಿಗೆ ಮತ್ತು ಉಪಕರಣಗಳಿಗೆ ಸಿಂಪಡಿಸಲಾಗಿದೆ. ದೇಶದಲ್ಲಿ ಅತೀ ಹೆಚ್ಚು ಮಂದಿಯನ್ನು ಪರೀಕ್ಷೆ ಮಾಡಿದ ರಾಜ್ಯಗಳ ಪೈಕಿ ಜಾರ್ಜಿಯಾವೂ ಮುಂದಿದೆ. ಆದರೆ ಮತ್ತೂಂದೆಡೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ.
ಅನೇಕ ವ್ಯವಹಾರಗಳನ್ನು ಎಂದಿಗೂ ಮುಚ್ಚಲಾಗಿಲ್ಲವಾದರೂ, ಉಳಿದ ಉದ್ಯಮವನ್ನು ಪುನರಾರಂಭಿಸಲಾಗುವುದು. ಈ ಮೂಲಕ ತಮ್ಮ ರಾಜ್ಯವನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಲಾಗುವುದು ಎಂದು ಗವರ್ನರ್ ಹೇಳಿ¨ªಾರೆ. ಜಾರ್ಜಿಯಾ ಕಾರ್ಮಿಕ ಇಲಾಖೆ ಮಾಹಿತಿಯ ಪ್ರಕಾರ 1.1 ಮಿಲಿಯನ್ ಕಾರ್ಮಿಕರು (ರಾಜ್ಯದ ಐದನೇ ಒಂದು ಭಾಗದಷ್ಟು ಕಾರ್ಮಿಕರು) ಕೋವಿಡ್-19 ಬಳಿಕ ನಿರುದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಆದರೆ ಇದರ ಬೆನ್ನಿಗೇ ಸರಕಾರದ ನಿಲುವುಗಳ ವಿರುದ್ಧ ಟೀಕೆಯೂ ವ್ಯಕ್ತವಾಗುತ್ತಿದೆ. ಜಾರ್ಜಿಯಾದಲ್ಲಿ ಸರಕಾರ ಪ್ರಯೋಗ ನಡೆಸುವ ಮೂಲಕ ಜನರ ಜೀವಗಳ ಜತೆ ಆಟವಾಡುತ್ತಿದೆ ಎಂದು ಕೆಲವರು ದೂರಿದ್ದಾರೆ. 19,000ಕ್ಕೂ ಹೆಚ್ಚು ಜಾರ್ಜಿಯನ್ನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಈ ಸಂಖ್ಯೆಗಳು ಹೆಚ್ಚುತ್ತಲೇ ಇವೆ. ರಾಜ್ಯಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳುವುದು ರಾಜ್ಯಪಾಲರ ಅಧಿಕಾರ. ಆದರೆ ಬಹುತೇಕ ವ್ಯಾಪಾರಿಗಳು ಅಂಗಡಿಗಳನ್ನು ತೆರೆಯಲು ಮುಂದಾಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.