ನಗರದಲ್ಲೊಂದು ಅಪ್ಪಟ ಬೈಹುಲ್ಲಿನ ಮಾಡು !
Team Udayavani, Jun 12, 2020, 5:52 AM IST
ಉಡುಪಿ: ಸುಮಾರು ನಾಲ್ಕೈದು ದಶಕಗಳ ಹಿಂದೆ ಹಳ್ಳಿಗಳಲ್ಲಿ ಬೈಹುಲ್ಲಿನ ಮಾಡು ಸಹಜವಾಗಿತ್ತು. ಇದು ಬಡತನದ ಸಂಕೇತವೂ ಆಗಿ ಬಡತನ ನಿವಾರಣೆ ಕ್ರಮಗಳಲ್ಲಿ ಇದರ ಬದಲು ಹೆಂಚಿನ ಮನೆಗಳುಬರತೊಡಗಿದವು. ಈಗ ಹೆಂಚಿನ ಮನೆಯೂ ಹೋಗಿ ಎಲ್ಲೆಡೆ ಕಾಂಕ್ರೀಟ್ ಮನೆಗಳು ಕಂಡುಬರುತ್ತಿವೆ. ಇದು ಸಿರಿವಂತಿಕೆ, ಅಂತಸ್ತಿನ ಸಂಕೇತ ವಾಗಿದೆ. ಆದರೆ ಇದೇ ವೇಳೆ ಸ್ಟಾರ್ ಹೊಟೇಲ್, ರೆಸಾರ್ಟ್‌ಗಳಲ್ಲಿ “ಹಟ್’ ಹೆಸರಿನ ಬೈಹುಲ್ಲಿನ ಗುಡಿಸಲು ಪ್ರತಿಷ್ಠೆಯ ಸಂಕೇತವಾದವು.
ಈ ಎರಡೂ ವೈರುಧ್ಯಗಳ ನಡುವೆ ನಗರ- ಗ್ರಾಮಾಂತರವೆಂಬ ಭೇದವಿಲ್ಲದೆ ಬೈಹುಲ್ಲು ಹಾಕಿದ ಛಾವಣಿ ಕಂಡು ಬರುತ್ತಿಲ್ಲ. ಸುಮಾರು 30 ವರ್ಷಗಳ ಹಿಂದೆ ಶ್ರೀಕೃಷ್ಣಮಠದಲ್ಲಿ ಸರೋವರಕ್ಕೆ ಇಳಿಯುವ ಹಾಸುಗಲ್ಲುಗಳ ಮೇಲ್ಭಾಗ ಬೈಹುಲ್ಲಿನ ಛಾವಣಿಯನ್ನು ಮಳೆಗಾಲದಲ್ಲಿ ನಿರ್ಮಿಸುತ್ತಿದ್ದರು. ಈಗ ಮತ್ತೆ ಅದನ್ನು ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಿರ್ಮಿಸಿದ್ದಾರೆ.
ಬೈಹುಲ್ಲಿನ ಛಾವಣಿ ನಿರ್ಮಿಸುವುದು ಅಷ್ಟು ಸುಲಭದ ಕೆಲಸವಲ್ಲ. ಮೂರ್‍ನಾಲ್ಕು ದಶಕಗಳಿಂದ ಈ ಕಸುಬೇ ನಿಂತು ಹೋದ ಕಾರಣ ಈ ಕೆಲಸ ಬಹಳ ಕಡಿಮೆ ಜನರಿಗೆ ಮಾತ್ರ ಗೊತ್ತಿದೆ. ಭತ್ತದ ಕೃಷಿಯಲ್ಲಿ ಫಸಲನ್ನು ಹಿಂದೆ ಕೈಯಲ್ಲಿ ಕೊಯ್ಯುತ್ತಿದ್ದರು. ಈಗ ಯಂತ್ರಗಳೇ ತುಂಡರಿಸುತ್ತಿ¤ವೆ. ಛಾವಣಿ ಮಾಡುವುದಾದರೆ ಕೈಯಲ್ಲಿ ಕೊಯ್ದ ಹುಲ್ಲು ಬೇಕು. ಛಾವಣಿ ಕೆಳ ಭಾಗಕ್ಕೆ ತೆಂಗಿನ ಗರಿಗಳಿಂದ ತಯಾರಿಸುವ ಮಡಲು ಬೇಕು. ಮಡಲು ನೇಯುವವರು ಯಾರೂ ಇಲ್ಲ. ಹೀಗೆ ಕೆಲಸದವರನ್ನು ಕುಂಜಾರಿನಿಂದಲೂ ಮಡಲನ್ನು ಅಲೆವೂರಿನಿಂದಲೂ ಹುಲ್ಲನ್ನು ಇನ್ನೆಲ್ಲಿಂದಲೋ ತರಿಸಿ ಹರಸಾಹಸಪಟ್ಟು ಬೈಹುಲ್ಲಿನ ಛಾವಣಿ ನಿರ್ಮಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.