Russia: ಎಂಟು ಮಕ್ಕಳ ಪಡೆಯಿರಿ- ರಷ್ಯಾ ಮಹಿಳೆಯರಿಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರೆ
Team Udayavani, Dec 1, 2023, 9:33 PM IST
ಮಾಸ್ಕೋ: “ರಷ್ಯಾದ ಮಹಿಳೆಯರು ಎಂಟು ಮಕ್ಕಳನ್ನು ಪಡೆಯುವ ಬಗ್ಗೆ ಆಲೋಚಿಸಬೇಕು’ – ಹೀಗೆಂದು ಆ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರೆ ನೀಡಿದ್ದಾರೆ.
ಎರಡು ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್ ಜತೆಗಿನ ಕಾಳಗದಲ್ಲಿ 3 ಲಕ್ಷ ಮಂದಿ ಅಸುನೀಗಿರುವುದು, 1990ರಿಂದ ಸತತವಾಗಿ ಇಳಿಮುಖವಾಗುತ್ತಿರುವ ಜನನ ಪ್ರಮಾಣ ರಷ್ಯಾ ಅಧ್ಯಕ್ಷರನ್ನು ಕಂಗೆಡಿಸಿದೆ. ಅದಕ್ಕೆ ಪೂರಕವಾಗಿ ಪುಟಿನ್ ಈ ಮಾತುಗಳನ್ನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜತೆಗೆ 8.20 ಲಕ್ಷದಿಂದ 9.20 ಲಕ್ಷ ಮಂದಿ ದೇಶ ಬಿಟ್ಟು ಪರಾರಿಯಾಗಿರುವ ವರದಿಗಳೂ ಇವೆ.
ಇದರಿಂದ ಆತಂಕ್ಕೆ ಒಳಗಾಗಿರುವ ಅವರು ಸ್ತ್ರೀಯರು ಕನಿಷ್ಠ 8 ಮಕ್ಕಳನ್ನಾದರೂ ಹೆರಬೇಕು. ಮುಂದಿನ ದಶಕಗಳಲ್ಲಿ ರಷ್ಯಾದ ಜನಸಂಖ್ಯೆಯನ್ನು ವೃದ್ಧಿಸುವುದೇ ನಮ್ಮ ಗುರಿ ಎಂದಿದ್ದಾರೆ! ನಮ್ಮ ಹಲವು ಜನಾಂಗಗಳು ಈಗಲೂ 4ರಿಂದ 8 ಮಕ್ಕಳನ್ನು ಹೆರುವ ಕ್ರಮವನ್ನು ಉಳಿಸಿಕೊಂಡು ಬಂದಿವೆ. ನಮ್ಮ ಹಿಂದಿನ ಎಷ್ಟೋ ಅಜ್ಜಿ, ಮುತ್ತಜ್ಜಿಯರು 7,8 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೆರುತ್ತಿದ್ದರು. ಅದನ್ನು ಮತ್ತೆ ಪುನಃಸ್ಥಾಪಿಸಬೇಕಿದೆ ಎಂದು ವಿಶ್ವ ರಷ್ಯಾ ಜನಸಮಿತಿ ಸಭೆಯಲ್ಲಿ ಹೇಳಿದ್ದಾರೆ. ಅವರು ಆನ್‌ಲೈನ್ ಮೂಲಕ ಮಾಸ್ಕೋದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದರು.
ದೊಡ್ಡ ಕುಟುಂಬಗಳು ಮತ್ತೆ ನಮ್ಮ ಸಹಜ ಜೀವನಕ್ರಮವಾಗಬೇಕು. ಕುಟುಂಬಗಳು ದೇಶ ಮತ್ತು ಸಮಾಜದ ಅಡಿಪಾಯ ಮಾತ್ರವಲ್ಲ, ಇದೊಂದು ಆಧ್ಯಾತ್ಮಿಕ ಲಕ್ಷಣ, ಸ್ಫೂರ್ತಿಯ ಮೂಲವೂ ಹೌದು. ರಷ್ಯಾ ಸಂತತಿಯನ್ನು ಕಾಪಾಡಿಕೊಳ್ಳುವುದು, ಬೆಳೆಸುವುದು ನಮ್ಮ ಗುರಿ. ಅದೇ ಸಾವಿರಾರು ವರ್ಷಗಳ, ಶಾಶ್ವತ ರಷ್ಯಾ ಪ್ರಪಂಚದ ಗುರಿ ಎಂದು ಪುಟಿನ್ ಹೇಳಿದ್ದಾರೆ.
ಆನೆಗಳ ಸುರಕ್ಷತೆಗೆ ಗಜರಾಜ್ ಎಐ
ಆರೋಗ್ಯ, ತಂತ್ರಜ್ಞಾನ, ರಕ್ಷಣಾ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ಎಐ ಇದೀಗ ವನ್ಯಜೀವಿಗಳ ರಕ್ಷಣೆಗೂ ಸಹಾಯಕಾರಿಯಾಗಲು ಬಳಕೆಯಾಗುತ್ತಿದೆ. ರೈಲುಗಳಿಗೆ ಅಡ್ಡಲಾಗಿ ಬಂದು ಅಪಘಾತಕ್ಕೀಡಾಗಿ ಸಾಯುತ್ತಿರುವ ಆನೆಗಳನ್ನು ರಕ್ಷಿಸಲು ಕೃತಕಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಅದುವೇ “ಗಜರಾಜ್ ಎಐ’. 181 ಕೋಟಿ ರೂ.ವೆಚ್ಚದಲ್ಲಿ 700 ಕಿ.ಮೀ. ರೈಲ್ವೆ ಮಾರ್ಗದಲ್ಲಿ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಅಳವಡಿಸಿ ಆ ಮೂಲಕ ಈ ಎಐ ಆಧಾರಿಯ ತಂತ್ರಜ್ಞಾನದ ಬಳಕೆ ಮಾಡಲಾಗುತ್ತದೆ. ರೈಲ್ವೆ ಟ್ರ್ಯಾಕ್‌ಗಳ ಮೇಲೆ ಆನೆಗಳು ಹೆಜ್ಜೆ ಇಟ್ಟಾಗ ಉಂಟಾಗುವ ಕಂಪನಗಳನ್ನು 200 ಮೀಟರ್ ದೂರದಿಂದಲೇ ಈ ತಂತ್ರಜ್ಞಾನ ಗ್ರಹಿಸಲಿದ್ದು, ತಕ್ಷಣವೇ ಆನೆಗಳ ಇರುವಿಕೆ ಬಗ್ಗೆ ರೈಲಿನ ಲೋಕೋಪೈಲಟ್, ಸ್ಟೇಷನ್ ಮಾಸ್ಟರ್ ಮತ್ತು ತಂತ್ರಜ್ಞಾನ ನಿರ್ವಾಹಕರಿಗೆ ಅಲಾರಂ ನೀಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.