ಹೋಟೆಲ್‌ನಲ್ಲಿ ಗೊತ್ತಾಯ್ತು ವ್ಯವಹಾರದ ಒಳ ಗುಟ್ಟು…
Team Udayavani, Apr 21, 2020, 12:12 PM IST
ಸಾಂದರ್ಭಿಕ ಚಿತ್ರ
ನನ್ನ ಮಗನೇ, ನಿನಗೇ ಓದು ಬರಲ್ವೋ… ಹೀಗಂತ ನಮ್ಮ ತಂದೆ ಬಯ್ಯೋರು. ಅದು ಬರೀ ಬೈಗುಳ ಅಂದುಕೊಂಡಿದ್ದೆ. ಕೊನೆಗೆ, ಶಾಪದ ರೀತೀನೇ ನನ್ನ ಸುತ್ತೋಕೆ ಶುರು ಮಾಡ್ತು ನೋಡಿ, ಆಗ ಶಾಲೆಯಲ್ಲಿ ಕನ್ನಡ ಬಿಟ್ಟರೆ, ಬೇರೇನೂ ತಲೆಗೆ ಹತ್ತುತ್ತಿರಲಿಲ್ಲ. ಮೂರನೇ ಕ್ಲಾಸಲ್ಲಿ ಮಗ್ಗಿ ಹೇಳಿಕೊಡೋರು. ಅದೊಂಥರ, ಸೀದು ಹೋಗಿರೋ ಕಡ್ಲೆ ಬೀಜದ ಥರ ಕಾಡೋದು. ಒಂದು ಸಲ
ತಿಂದರೆ, ಹತ್ತು ನಿಮಿಷ ಬಾ ಯಲ್ಲಿ ಕಹಿಕಹಿ ಇರುತ್ತಲ್ಲ ಹಾಗೆ! ನಮ್ಮ ಮೇಷ್ಟ್ರು, ಜೀವನದಲ್ಲಿ ಏನಾಗ್ತಿಯಯ್ನಾ ಅಂತ ಕೇಳಿದಾಗೆಲ್ಲ, “ಇನ್‌ಸ್ಪೆಕ್ಟರ್ ಆಗ್ತೀನೆ ಸಾರ್’ ಅಂತಿದ್ದೆ. ಆದರೂ, ನಿಜಕ್ಕೂ ನಾನು ಅಂಥಾ ಪೋಸ್ಟ್ ಗೆ ಹೋಗ್ತಿನಾ? ಓದೋಕೆ, ಬರೆಯೋಕೆ ಬರೋಲ್ಲ ಅಂತೆಲ್ಲ, ಒಳಮನಸ್ಸು ಹಂಗಿಸೋದು.
ನಾಲ್ಕನೇ ಕ್ಲಾಸ್ ತನಕ ಹಾಗೂ ಹೀಗೂ ಹೋದೆ. ಆಮೇಲೆ ಆಗಲಿಲ್ಲ. ಅಪ್ಪನ ಜೊತೆ ಹೋಟೆಲ್‌ಗೆ ಹೋಗೋದು, ಅವರು ಬೋಂಡಾ ಹಾಕುತ್ತಿದ್ದರೆ ಪಕ್ಕದಲ್ಲಿ ನಿಂತಿರೋದು, ಆಮೇಲಾಮೇಲೆ ಬೋಂಡಾ ಸಪ್ಲೈ ಮಾಡೋಕೆಲ್ಲ ಶುರುಮಾಡಿದೆ. ಅಪ್ಪನಿಗೆ ಹುಷಾರಿಲ್ಲ ಅಂದಾಗ, ನಾನೇ ಸ್ವಲ್ಪ ಸ್ವಲ್ಪ ಜವಾಬ್ದಾರಿ ತಗೊಳ್ಳುತ್ತಿದ್ದೆ. ಕ್ರಮೇಣ, ತಿಂಡಿಗಳನ್ನು ಮಾಡಲು ಕಲಿತೆ. ಜೀವನದಲ್ಲಿ
ಇನ್‌ಸ್ಪೆಕ್ಟರ್ ಆಗಬೇಕು ಅನ್ನೋ ಕನಸು, ಮರೆತು ಹೋಗುತ್ತಾ ಬಂತು. ಕೈಗೊಂದಷ್ಟು ದುಡ್ಡು ಸಿಗುತ್ತಿದ್ದುದರಿಂದ, ಬೇರೆ ಕಡೆ ಗಮನ ಹರಿಯಲಿಲ್ಲ. ಅಪ್ಪನ ಮರಣದ ನಂತರ, ಮೂವರು ತಮ್ಮಂದಿರನ್ನು ಸಂಬಾಳಿಸಿಕೊಂಡೇ, ಹೋಟೆಲ್ ಜವಾಬ್ದಾರಿಯನ್ನೂ ಹೊತ್ತುಕೊಂಡೆ. ಆ ಹೊತ್ತಿಗೆ, ಓದುವ ಹುಮ್ಮಸ್ಸು ಇರಲಿಲ್ಲ. ವಯಸ್ಸು ಆಗುತ್ತಾ ಬಂತು. ಹಣದ ಲೆಕ್ಕಾಚಾರಕ್ಕೆ, ನನ್ನ ಹೋಟೆಲ್ಲೇ ಬ್ಯುಸಿನೆಸ್ ಗುರು. ವ್ಯವಹಾರದ ಒಳಗುಟ್ಟುಗಳು ಅರ್ಥವಾದದ್ದು ಹೋಟೆಲ್‌ನಲ್ಲಿಯೇ.
ನಾನಂತೂ ತೂಕ ಹಾಕಿ ತಿಂಡಿ ಕೊಡುತ್ತಿರಲಿಲ್ಲ. ಒಂದು ಅಳತೆ ಇರಬೇಕು, ಅದು ಇತ್ತಾದರೂ, ಅದಕ್ಕಿಂತ ಹೆಚ್ಚಾಗಿಯೇ ಕೊಡುತ್ತಿದ್ದೆ. ಕಾರಣ, ನನ್ನ ಗಿರಾಕಿಗಳು ಗೆಳೆಯರು, ನಮ್ಮ ಊರಿನವರೇ ಆಗಿ ದ್ದರು. ಅವರು ಹೊಟ್ಟೆ ತುಂಬಾ ತಿಂದರೆ ತಪ್ಪೇನು? ನಮ್ಮವರೇ ಅಲ್ವೇ ಅನ್ನೋದು ನನ್ನ ಬಾವನೆ. ನಿಜ ಹೇಳಬೇಕೆಂದರೆ, ಹೋಟೆಲ್ ಬ್ಯುಸಿನೆಸ್ ಮಾಡೋರಿಗೆ ಈ ರೀತಿ ಮೈಂಡ್‌ಸೆಟ್ ಇರಬಾರದು. ಲಾಭದ ಪ್ರಮಾಣ ಇಳಿಕೆಯಾಗುತ್ತದೆ ಅಂತ ತಿಳಿಯುವ ಹೊತ್ತಿಗೆ ಬಹಳ ನಿಧಾನವಾಗಿತ್ತು. ನನಗೆ ಸಿಕ್ಕಾಪಟ್ಟೆ ಲಾಭ ಬರುತ್ತಿರಲಿಲ್ಲ. ಅದಕ್ಕೆ ಕಾರಣ, ಈ ಮನೋಭಾವ. ಏನೇ ಆದರೂ, ಮನಸ್ಸು ಹೇಳಿದಂತೆ ಕೇಳುತ್ತಿದ್ದೆ. ಈ ಹೋಟೆಲ…, ಬದುಕು ನಡೆಸಲು ನೆರವಾಗಿದೆ. ಇಲ್ಲಿ ಸಂಪಾದಿಸಿದ ಹಣದಿಂದಲೇ ಮನೆ ಕಟ್ಟಿಸಿದೆ. ಮಗನ ಮದುವೆ ಮಾಡಿದೆ. ತೀರಾ ಲಾಭ ಅಲ್ಲದೇ ಇದ್ದರೂ, ನಷ್ಟವಂತೂ ಆಗಿಲ್ಲ. ಅಂದಮೇಲೆ, ಇದಕ್ಕಿಂತ ಒಳ್ಳೆಯ ಪ್ರೊಫೆಷನ್ ಬೇಕಾ?
ಪಿ. ವಾಸು, ಚಿತ್ರದುರ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.