ಘಾನ: ಲಾಕ್‌ಡೌನ್ ಸಡಿಲಿಕೆಗೆ ಮಿಶ್ರ ಅಭಿಪ್ರಾಯ
Team Udayavani, May 4, 2020, 1:31 PM IST
ಘಾನ: ಇದೀಗ ವಿಶ್ವೆದೆಲ್ಲೆಡೆ ಲಾಕ್‌ಡೌನ್ ಸಡಿಲಿಕೆಯದ್ದೇ ಘೋಷಣೆ. ಕಳೆದ 2 ತಿಂಗಳುಗಳಿಂದ ಸ್ತಬ್ಧವಾಗಿದ್ದ ಹಲವಾರು ರಾಷ್ಟ್ರಗಳು ಸಹಜ ಸ್ಥಿತಿಗೆ ತೆರೆದುಕೊಳ್ಳುತ್ತಿವೆ. ಈಗ ಘಾನಾದ ಸರದಿ.
ದೇಶದ ಎರಡು ಪ್ರಮುಖ ನಗರಗಳಾದ ಅಕ್ರಾ ಮತ್ತು ಕುಮಾಸಿಗಳಲ್ಲಿ ಮೂರು ವಾರಗಳ ಲಾಕ್‌ಡೌನ್ ಸಂಪೂರ್ಣವಾಗಿ ತೆರವುಗೊಂಡಿದ್ದು, ಕ್ರಮೇಣ ವಾಗಿ ಜನರು ಸಹಜ ಸ್ಥಿತಿಯತ್ತ ಮರಳುತ್ತಿದ್ದಾರೆ.
ಆದಾಯವಿಲ್ಲದೇ ಕಂಗೆಟ್ಟಿದ್ದ ಜನರು
ಆದಾಯವಿಲ್ಲದೇ ಕಂಗೆಟ್ಟಿದ್ದ ಬಡವರ್ಗದವರಲ್ಲಿ ಲಾಕ್‌ಡೌನ್ ನಿಯಮಗಳ ವಿನಾಯಿತಿಯಿಂದ ಆಶಾಕಿರಣ ಮೂಡಿದ್ದು, ಸ್ಥಗಿತಗೊಂಡಿದ್ದ ಮಾರುಕಟ್ಟೆಗಳು ಮತ್ತು ವಾಣಿಜ್ಯ ಪ್ರದೇಶಗಳು ಮತ್ತೆ ಕಾರ್ಯಾಚರಣೆ ಪ್ರಾರಂಭಿಸಿವೆ. ಕ್ರಮೇಣವಾಗಿ ಅಂಗಡಿ-ಮುಗ್ಗಟ್ಟುಗಳು, ಸಣ್ಣ ಉದ್ಯಮಗಳು, ಮಳಿಗೆಗಳು ಹಾಗೂ ಬ್ಯಾಂಕುಗಳು ಮತ್ತೆ ತೆರೆಯಲ್ಪಟ್ಟಿವೆ. ಪರಿಣಾಮ ನಗರದ ಕೆಲವು ಪ್ರದೇಶಗಳಲ್ಲಿ ವಾಹನ ದಟ್ಟಣೆಯಾಗಿದ್ದು, ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ.
ಏಕಾಏಕಿ ನಿರ್ಬಂಧಗಳನ್ನು ತೆರವುಗೊಳಿಸಿರುವ ಸರಕಾರದ ನಿರ್ಧಾರಕ್ಕೆ ಕೆಲವರು ಸಂತೋಷಪಟ್ಟರೆ, ಹಲವರು ಸೋಂಕು ಹರಡುವಿಕೆ ಭೀತಿಯನ್ನು ವ್ಯಕ್ತಪಡಿಸಿದ್ದಾರೆ.
ಸರಕಾರದ ನಿರ್ಧಾರ ಸ್ವಾಗತಾರ್ಹ
ಸುಮಾರು ಶೇ.90ರಷ್ಟು ಘಾನಾದ ಜನರು ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸೋಂಕಿನ ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಲಾಕ್‌ಡೌನ್ ನಿಯಮಗಳು ಅವರ ಜೀವನ ಶೈಲಿಯ ಮೇಲೆ ದುಷ್ಪರಿಣಾಮ ಬೀರಿತು. ಜೀವನ ನಿರ್ವಹಣೆಗಾಗಿ ಹಣಕಾಸು ಇಲ್ಲದೇ ಸಂಕಷ್ಟಕ್ಕೀಡಾಗಿದ್ದರು. ಆದರೆ ಸದ್ಯ ಸರಕಾರ ತೆಗೆದುಕೊಂಡಿರುವ ನಿರ್ಧಾರದಿಂದ ಅವರ ಜೀವನ ತಕ್ಕಮಟ್ಟಿಗೆ ಸರಿ ಹೋಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಘಾನ ಸರಕಾರವು ಮೂರು ತಿಂಗಳ ಕಾಲ ವಿದ್ಯುತ್ ವೆಚ್ಚದ ದರದಲ್ಲಿ ಅರ್ಧದಷ್ಟು ಮೊತ್ತವನ್ನು ಕಡಿತಗೊಳಿಸಿದ್ದು, ನೀರಿನ ಬಿಲ್‌ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಜತೆಗೆ ಬಡವರ್ಗದವರಿಗೆ ಲಾಕ್‌ಡೌನ್ ಬಿಸಿ ತಟ್ಟ ಬರದೆಂದು ಆಹಾರ ವಿತರಣೆ ಮಾಡಿದೆ ಎನ್ನಲಾಗುತ್ತಿದೆ.
ಆದರೆ ಲಾಕ್‌ಡೌನ್ ಸಡಿಲಿಕೆಯಾದ ದಿನದಿಂದ ಸೋಂಕು ಪ್ರಕರಣಗಳು 2 ಸಾವಿರ ಗಡಿ ದಾಟಿದ್ದು, ಬಲಿಯಾದವರ ಸಂಕ್ಯೆ 17ಕ್ಕೆ ಹೇರಿದೆ ಎಂದು ಕೆಲವರು ಸರಕಾರದ ನಡೆಯನ್ನು ದೂಷಿಸಿದ್ದಾರೆ.
ಜತೆಗೆ ಸರಕಾರ ಘೋಷಿಸಿರುವ ಕೆಲ ಯೋಜನೆಗಳು ಹಾಗೂ ಅದರ ಸೌಲಭ್ಯಗಳು ಎಲ್ಲ ಸ್ತರದವರಿಗೂ ಸಿಗುತ್ತಿಲ್ಲ ಎಂಬ ದೂರೂ ವ್ಯಕ್ತವಾಗಿದೆ. ಪಶ್ಚಿಮ ಆಫ್ರಿಕಾದ ದೇಶದ ಕಾರ್ಪೊರೇಟ್ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.