ಅತೀ ದೊಡ್ಡ ಇಕ್ತ್ಯೋಸರ್ ಅಸ್ಥಿಪಂಜರ
18 ಕೋಟಿ ವರ್ಷಗಳಷ್ಟು ಹಿಂದಿನ ಸೀ ಡ್ರ್ಯಾಗನ್ ಮೀನು ಪತ್ತೆ
Team Udayavani, Jan 12, 2022, 7:10 AM IST
ಲಂಡನ್: ಸಮುದ್ರ ತಳವೆನ್ನುವುದು ಬೇರೆಯದ್ದೇ ಪ್ರಪಂಚ. ಅಲ್ಲಿ ಅಗಣ್ಯ ಜಲಚರಗಳು ಜೀವಿಸುತ್ತಿವೆ. ಅದೇ ರೀತಿ ಶತಮಾನಗಳ ಹಿಂದೆಯೇ ಜೀವಿಸಿ, ನಶಿಸಿ ಹೋದ ಜಲಚರವಾದ ಇಕ್ತ್ಯೋಸರ್ ನ ಅತೀ ದೊಡ್ಡ ಅಸ್ಥಿ ಪಂಜರವೊಂದು ಈಗ ಯು.ಕೆ.ಯಲ್ಲಿ ಪತ್ತೆಯಾಗಿದೆ.
ಯು.ಕೆ.ಯ ರುಟ್ಲ್ಯಾಂಡ್ ಜಲ ಸಂರಕ್ಷಣ ಪ್ರದೇಶದಲ್ಲಿ ಇದು ಪತ್ತೆಯಾಗಿದೆ. ಅಲ್ಲಿನ ಜಲ ಸಂರಕ್ಷಣೆ ತಂಡದ ಮುಖ್ಯಸ್ಥರಾಗಿರುವ ಜೋ ಡೇವಿಸ್ ಅವರಿಗೆ ಸಮುದ್ರದ ತಟದಲ್ಲಿ ಏನೋ ಉಬ್ಬು-ತಂಗು ಕಂಡಿದೆ. ಈ ಹಿಂದೆಯೇ ಈ ರೀತಿ ವೇಲ್ ಮತ್ತು ಡಾಲ್ಫಿನ್‌ಗಳ ಅಸ್ಥಿಪಂಜರ ಪತ್ತೆ ಹಚ್ಚಿದ್ದ ಅವರಿಗೆ ಈ ಉಬ್ಬು-ತಗ್ಗಿನಲ್ಲೂ ಯಾವುದೋ ಪಳೆಯುಳಿಕೆ ಇರುವ ಅನುಮಾನ ಬಂದಿದೆ. ಜಲ ಸಂರಕ್ಷಣ ಅಧಿಕಾರಿಯಾದ ಪಾಲ್ ಜತೆಗೂಡಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇಕ್ತ್ಯೋಸರ್ ನ ಅಸ್ಥಿಗಳು ಕಾಣಿಸಿದ್ದಾಗಿ ಹೇಳಲಾಗಿದೆ.
ಅಂದ ಹಾಗೆ ಈ ಹಿಂದೆಯೂ ಅಮೆರಿಕದ ಕೆಲವೆಡೆ ಇಕ್ತ್ಯೋಸರ್ ನ ಅಸ್ಥಿಪಂಜರಗಳು ಸಿಕ್ಕಿವೆ. ಆದರೆ ಇಷ್ಟು ಪೂರ್ಣ ಪ್ರಮಾಣದಲ್ಲಿ ಹಾಗೂ ಇಷ್ಟು ದೊಡ್ಡ ಇಕ್ತ್ಯೋಸರ್ ನ ಅಸ್ಥಿಪಂಜರ ಇದೇ ಮೊದಲು ಸಿಕ್ಕಿದ್ದಾಗಿ ತಿಳಿಸಲಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿಂದು 14,473 ಕೋವಿಡ್ ಪ್ರಕರಣ ಪತ್ತೆ, 5 ಸಾವು: ಪಾಸಿಟಿವಿಟಿ ದರ ಶೇ.10.30
18 ಕೋಟಿ ವರ್ಷ ಹಳೆಯದ್ದು: ಇಕ್ತ್ಯೋಸರ್ ಸುಮಾರು 25 ಕೋಟಿ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದು 9 ಕೋಟಿ ವರ್ಷಗಳ ಹಿಂದೆಯೇ ನಶಿಸಿಹೋಗಿವೆ. ಇಕ್ತ್ಯೋಸರ್ ಗಳು ಉದ್ದನೆ ಮೂತಿ ಹೊಂದಿದ್ದರಿಂದಾಗಿ ಅವುಗಳನ್ನು ಸೀ ಡ್ರ್ಯಾಗನ್ ಎಂದೂ ಕರೆಯಲಾಗುತ್ತಿತ್ತು. ಈಗ ಪತ್ತೆಯಾಗಿ ರುವ ಈ ಅಸ್ಥಿಪಂಜರ ಸುಮಾರು 18 ಕೋಟಿ ವರ್ಷಗಳಷ್ಟು ಹಳೆಯದು ಎಂದು ಶಾಸ್ತ್ರಜ್ಞರು ಅಂದಾಜಿಸಿದ್ದಾರೆ. 10 ಮೀಟರ್‌ಗಳಷ್ಟು ಉದ್ದವಿರುವ ಅಸ್ಥಿಪಂಜರದ ತಲೆ ಭಾಗವೇ ಸುಮಾರು ಒಂದು ಟನ್ ತೂಕವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.