ರುಚಿಕರವಾದ ಅಡುಗೆ…ಶುಂಠಿ ತಂಬುಳಿ, ಶುಂಠಿ ಬರ್ಫಿ ಮಾಡೋದು ಹೇಗೆ?
ಶ್ರೀರಾಮ್ ನಾಯಕ್, May 28, 2020, 8:07 PM IST
ಶುಂಠಿಯ ರುಚಿ ಎಷ್ಟು ತೀಕ್ಷ್ಣವೋ ಪರಿಮಳವೂ ಅಷ್ಟೇ ಆಕರ್ಷಕ. ಆರೋಗ್ಯ ದೃಷ್ಟಿಯಿಂದ ಅಲ್ಲದೆ ಅಡುಗೆಯ ರುಚಿಯಲ್ಲೂ ವಿಶೇಷ ಸ್ಥಾನ ಪಡೆದ ಶುಂಠಿಯು ಬರೀ ಆಯುರ್ವೇದ ವೈದ್ಯರು ಮಾತ್ರವಲ್ಲ ಇಂದು ಅಲೋಪತಿ ವೈದ್ಯ ಪದ್ಧತಿಯಲ್ಲಿ ತನ್ನ ಛಾಪನ್ನು ಮೂಡಿಸಿದೆ. ಕ್ಯಾಲ್ಸಿಯಂ ಅಂಶ ಜಾಸ್ತಿ ಇರುವುದರಿಂದ ಬಾಣಂತಿಯರಿಗೂ ಇದು ತುಂಬಾನೇ ಒಳ್ಳೆಯದು. ಎಲ್ಲೆಂದರಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಶೀತಬಾಧೆ ಸರ್ವೆ ಸಾಮಾನ್ಯ ಇದನ್ನು ತಡೆಗಟ್ಟಲು ಹಾಗೂ ನಿವಾರಣೆಗೆ ದಿನನಿತ್ಯದ ಆಹಾರದಲ್ಲಿ ಅಡುಗೆಯ ಮೂಲಕ ಶುಂಠಿ ಬಳಕೆ ಒಳ್ಳೆಯದು. ಸಿಹಿತಿಂಡಿಯಲ್ಲೂ ಶುಂಠಿಯನ್ನು ಬಳಸುವುದು ನಮ್ಮ ಅಡುಗೆಯ ವಿಶೇಷತೆ. ಆದ್ದರಿಂದ ಶುಂಠಿ ಪ್ರಧಾನವಾಗಿರುವ ಕೆಲವೊಂದು ರುಚಿಕರವಾದ ಅಡುಗೆಯನ್ನು ನೀವೂ ಮನೆಯಲ್ಲೇ ಮಾಡಿ ನೋಡಿ ಸವಿಯಿರಿ.
ಶುಂಠಿ ತಂಬುಳಿ
ತುಂಬುಳಿ ನಮ್ಮ ದಿನನಿತ್ಯದ ಅಡುಗೆಗಳಲ್ಲಿ ಒಂದು. ಊಟದ ಮೊದಲಿಗೆ ಸ್ವಲ್ಪ ಅನ್ನದ ಜೊತೆಯಲ್ಲಿ ಸವಿದರೆ ಆರೋಗ್ಯಕ್ಕೆ ಒಳ್ಳೆಯದು .ಮನೆಯಲ್ಲಿ ಇರುವ ಸಾಮಗ್ರಿಗಳೊಂದಿಗೆ ಈ ತಂಬುಳಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು
ತೆಂಗಿನ ಕಾಯಿ ತುರಿ 1 ಕಪ್, ಹಸಿ ಶುಂಠಿ 1 ಸಣ್ಣ ತುಂಡು, ಮೊಸರು 1 ಕಪ್,ಜೀರಿಗೆ ಸ್ವಲ್ಪ, ಕರಿಬೇವು ಸೊಪ್ಪು 2ರಿಂದ 4, ಸಾಸಿವೆ ಸ್ವಲ್ಪ, ರುಚಿಗೆ ಉಪ್ಪು.
ತಯಾರಿಸುವ ವಿಧಾನ
ತೆಂಗಿನ ತುರಿ,ಶುಂಠಿಯನ್ನು ಸಣ್ಣಗೆ ರುಬ್ಬಿರಿ. ತದನಂತರ ಮೊಸರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಕರಿಬೇವು, ಜೀರಿಗೆ, ಸಾಸಿವೆ ಒಗ್ಗರಣೆ ಕೊಟ್ಟರೆ ರುಚಿಯಾದ ಆರೋಗ್ಯಕರ ಶುಂಠಿ ತಂಬುಳಿ ಅನ್ನದ ಜೊತೆ ಸವಿಯಲು ಸಿದ್ಧ.
ಶುಂಠಿ ಬರ್ಫಿ
ಬೇಕಾಗುವ ಸಾಮಗ್ರಿಗಳು
ಮೈದಾ ಅಥವಾ ಗೋಧಿ ಹಿಟ್ಟು 1 ಕಪ್, ತುಪ್ಪ 1/2 ಕಪ್,ಶುಂಠಿ ರಸ ಸ್ವಲ್ಪ, ಹಾಲಿನ ಕೆನೆ 1/4 ಕಪ್,ಸಕ್ಕರೆ 2 ಕಪ್
ತಯಾರಿಸುವ ವಿಧಾನ
ಮೈದಾ ಅಥವಾ ಗೋಧಿಯನ್ನು ತುಪ್ಪದಲ್ಲಿ ಪರಿಮಳ ಬರುವವರೆಗೆ ಹುರಿಯಿರಿ. ಸಕ್ಕರೆ ನೂಲು ಪಾಕ ಮಾಡಿಟ್ಟು ಕೊಳ್ಳಿ. ಅದಕ್ಕೆ ಶುಂಠಿ ರಸ, ಹಾಲಿನ ಕೆನೆ, ಹುರಿದಿಟ್ಟ ಮೈದಾ/ಗೋಧಿ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿ. ಬಾಣಲೆಯಿಂದ ತಳಬಿಡುತ್ತಾ ಬರುವಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಆರಿದ ಮೇಲೆ ಕತ್ತರಿಸಿ ಸವಿಯಿರಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.