G-20: ಜಾಗತಿಕ ಜೈವಿಕ ಇಂಧನ ಮೈತ್ರಿ ಇಂದೇ ಘೋಷಣೆ?
- ಜಿ20 ಅಧ್ಯಕ್ಷತೆಯಲ್ಲಿ ಭಾರತದ ಮಹತ್ವದ ಹೆಜ್ಜೆ
Team Udayavani, Sep 8, 2023, 8:55 PM IST
ನವದೆಹಲಿ: ಶನಿವಾರದಿಂದ ಆರಂಭವಾಗಲಿರುವ ಜಿ20 ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಾಗತಿಕ ಜೈವಿಕ ಇಂಧನ ಮೈತ್ರಿ(ಜಿಬಿಎ)ಯನ್ನು ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೈವಿಕ ಇಂಧನಗಳ ಬೇಡಿಕೆಯನ್ನು ಮತ್ತು ತಂತ್ರಜ್ಞಾನ ವಿನಿಮಯವನ್ನು ಉತ್ತೇಜಿಸುವುದು, ಆ ಮೂಲಕ ವ್ಯಾಪಾರ ವೃದ್ಧಿ ಕೂಡ ಈ ಮೈತ್ರಿಯ ಉದ್ದೇಶವಾಗಿದೆ. ಅಲ್ಲದೆ, ತೈಲಕ್ಕಾಗಿ ಇತರೆ ದೇಶಗಳನ್ನು ಅವಲಂಬಿಸಿರುವ ಭಾರತದಂಥ ದೇಶಗಳ ಆಮದು ಅವಲಂಬನೆಯನ್ನು ಮತ್ತು ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸುವ ನಿಟ್ಟಿನಲ್ಲೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.
ಚೀನಾ, ರಷ್ಯಾ, ಸೌದಿ ವಿರೋಧ:
ಭಾರತದ ಪರಿಕಲ್ಪನೆಯ ಈ ಮೈತ್ರಿಗೆ ಅಮೆರಿಕ ಮತ್ತು ಬ್ರೆಜಿಲ್ ಸ್ಥಾಪಕ ಸದಸ್ಯರಾಗಿರುತ್ತಾರೆ. ಇತರೆ 19 ದೇಶಗಳು ಕೂಡ ಈ ಮೈತ್ರಿ ಬಗ್ಗೆ ಆಸಕ್ತಿ ವಹಿಸಿದ್ದು, ಜಿ20 ವ್ಯಾಪ್ತಿಗೆ ಬರದ ಕೆಲವು ದೇಶಗಳು ಕೂಡ ಬೆಂಬಲ ಸೂಚಿಸಿವೆ. ಆದರೆ, ಚೀನಾ ಹಾಗೂ ತೈಲ ಸಮೃದ್ಧ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ರಷ್ಯಾ ಈ ಮೈತ್ರಿಯಿಂದ ದೂರವುಳಿಯಲು ನಿರ್ಧರಿಸಿವೆ.
ಜೈವಿಕ ಇಂಧನದ ಸುತ್ತ…
ಜಿ20 ರಾಷ್ಟ್ರಗಳ ಸಮ್ಮೇಳನದ ಮೊದಲ ದಿನವೇ ಜಾಗತಿಕ ಜೈವಿಕ ಇಂಧನ ಮೈತ್ರಿ (ಜಿಬಿಎ) ಘೋಷಣೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹವಾಮಾನ ಬದಲಾವಣೆ ವಿರುದ್ಧ ಭಾರತದ ಹೋರಾಟಕ್ಕೆ ಇದು ಶಕ್ತಿ ತುಂಬಲಿದೆ. ಜೈವಿಕ ಇಂಧನಕ್ಕೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿರುವುದೇಕೆ, ಈ ಇಂಧನದಿಂದಾಗುವ ಲಾಭವೇನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಏನಿದು ಜೈವಿಕ ಇಂಧನ?
ಸಸ್ಯಗಳು, ಧಾನ್ಯಗಳು, ಕೃಷಿ ತ್ಯಾಜ್ಯ, ಆಲ್ಗೆ, ಪ್ರಾಣಿಗಳು ಮತ್ತು ಆಹಾರದ ತ್ಯಾಜ್ಯಗಳಿಂದ ಪಡೆಯಲಾಗುವ ದಹನಶೀಲ ದ್ರವ ಅಥವಾ ಅನಿಲವನ್ನು ಜೈವಿಕ ಇಂಧನಗಳು ಎನ್ನುತ್ತಾರೆ.
ಮೊದಲು ಪರಿಚಯವಾಗಿದ್ದು
1890ರಲ್ಲಿ ಪ್ಯಾರಿಸ್ ನಿವಾಸಿ ರುಡಾಲ್ಫ್ ಡೀಸೆಲ್ ಎಂಬವರು ಒಂದು ಎಂಜಿನ್ ಅನ್ನು ಅಭಿವೃದ್ಧಿಪಡಿಸಿದರು. ಕೃಷಿ ಬಳಕೆಗೆಂದು ಅಭಿವೃದ್ಧಿಪಡಿಸಲಾದ ಈ ಆಂತರಿಕ ದಹನಕಾರಿ ಎಂಜಿನ್ ಸಸ್ಯಜನ್ಯ ತೈಲದಿಂದ ಕಾರ್ಯನಿರ್ವಹಿಸುತ್ತಿತ್ತು.
ಸಾಮಾನ್ಯ ಜೈವಿಕ ಇಂಧನಗಳು ಯಾವುವು?
ಜೈವಿಕ ಡೀಸೆಲ್, ಎಥನಾಲ್, ಬಯೋಗ್ಯಾಸ್ ಮತ್ತು ಸಂಕ್ಷೇಪಿತ ಬಯೋಗ್ಯಾಸ್.
ಜೈವಿಕ ಇಂಧನ ಉತ್ಪಾದನೆ ಹೇಗೆ?
ಕಚ್ಚಾ ಸಾಮಗ್ರಿಗೆ ಅನುಗುಣವಾಗಿ ವಿಶೇಷ ಸಂಸ್ಕರಣಾಗಾರಗಳನ್ನು ಈ ರೀತಿ ವಿಂಗಡಿಸಲಾಗಿದೆ: ಮೊದಲ ತಲೆಮಾರಿನ(1ಜಿ) ಘಟಕಗಳು ಕಬ್ಬು ಬೆಳೆ ಮತ್ತು ಧಾನ್ಯಗಳ ಪಿಷ್ಟವನ್ನು ಸಂಸ್ಕರಿಸುತ್ತವೆ. ಖಾದ್ಯೆàತರ ಸಸ್ಯಗಳು, ಕೃಷಿ ತ್ಯಾಜ್ಯಗಳನ್ನು 2ನೇ ತಲೆಮಾರಿನ ಘಟಕಗಳು(2ಜಿ) ಸಂಸ್ಕರಿಸುತ್ತವೆ. ಮೂರನೇ ತಲೆಮಾರಿನ ಘಟಕಗಳು(3ಜಿ) ಆಲ್ಗೆ ಮತ್ತು ಸೂಕ್ಷ್ಮಜೀವಿಗಳಿಂದ ಜೈವಿನ ಇಂಧನವನ್ನು ತಯಾರಿಸುತ್ತವೆ.
ಬಳಕೆ ಯಾಕೆ ಮುಖ್ಯ?
ಇಂಧನದ ಸುಸ್ಥಿರ ಮೂಲಗಳು ಜಗತ್ತಿನ ಎಲ್ಲ ಪ್ರದೇಶಗಳಲ್ಲೂ ಲಭ್ಯವಿರುತ್ತವೆ. ಅಲ್ಲದೇ, ಜೈವಿಕ ಇಂಧನಗಳು ವಾಹನಗಳ ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸುತ್ತವೆ, ರೈತರ ಆದಾಯ ಹೆಚ್ಚಿಸುತ್ತವೆ ಮತ್ತು ಭಾರತದಂಥ ದೇಶಗಳು ಆಮದು ಮಾಡಿದ ತೈಲವನ್ನೇ ನೆಚ್ಚಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ಜಗತ್ತಿನ ಪ್ರಮುಖ ಜೈವಿಕ ಇಂಧನ ಉತ್ಪಾದಕರು
– 2022ರ ಟಾಪ್ ಎಥನಾಲ್ ಉತ್ಪಾದಕರು: ಅಮೆರಿಕ (57.5 ಶತಕೋಟಿ ಲೀ.) ಮತ್ತು ಬ್ರೆಜಿಲ್ (35.6 ಶತಕೋಟಿ ಲೀ.)
– ಟಾಪ್ ಬಯೋಡೀಸೆಲ್ ಉತ್ಪಾದಕರು: ಯುರೋಪ್(17.7 ಶತಕೋಟಿ ಲೀ.), ಅಮೆರಿಕ (14.5 ಶತಕೋಟಿ ಲೀ.), ಇಂಡೋನೇಷ್ಯಾ (9.3 ಶತಕೋಟಿ ಲೀ.)
ಭಾರತದ ಉತ್ಪಾದನೆ
2022ರಲ್ಲಿ ಭಾರತವು ಸುಮಾರು 3 ಶತಕೋಟಿ ಲೀ. ಎಥನಾಲ್ ಉತ್ಪಾದಿಸಿದೆ. ಅಮೆರಿಕ, ಯುರೋಪ್, ಬ್ರೆಜಿಲ್ ಅನ್ನು ಹೊರತುಪಡಿಸಿದರೆ ಜಗತ್ತಿನ ಒಟ್ಟಾರೆ ಉತ್ಪಾದನೆಯ ಶೇ.16ರಷ್ಟು.
ಭಾರತದಲ್ಲಿ ಬಳಸಲಾಗುತ್ತಿರುವ ಜೈವಿಕ ಇಂಧನಗಳು
ಎಥನಾಲ್, ಜೈವಿಕ ಡೀಸೆಲ್, ಸಂಕ್ಷೇಪಿತ ಜೈವಿಕ ಅನಿಲ, ಜೈವಿಕ-ವೈಮಾನಿಕ ಇಂಧನ ಇತ್ಯಾದಿ.
ಭಾರತದಲ್ಲಿ ಜೈವಿಕ ಇಂಧನ ಕಾರ್ಯಕ್ರಮ ಆರಂಭವಾಗಿದ್ದು ಯಾವಾಗ?
ರಾಷ್ಟ್ರೀಯ ಜೈವಿಕ ಇಂಧನ ನೀತಿ ಮೊದಲು ಜಾರಿಯಾಗಿದ್ದು 2009ರಲ್ಲಿ. ಇದನ್ನು 2022ರಲ್ಲಿ ಪರಿಷ್ಕರಿಸಲಾಯಿತು. ಪೆಟ್ರೋಲ್ ಜತೆ ಶೇ.20 ಎಥನಾಲ್ ಮಿಶ್ರಗೊಳಿಸುವ ಗುರಿಯನ್ನು 2025ರವರೆಗೆ ವಿಸ್ತರಿಸುವ ನಿಟ್ಟಿನಲ್ಲಿ ಈ ಪರಿಷ್ಕರಣೆ ನಡೆಯಿತು. 2023-24ರ ವೇಳೆಗೆ ವರ್ಷಕ್ಕೆ 15 ದಶಲಕ್ಷ ಟನ್ ಅನಿಲ ಉತ್ಪಾದನೆಗಾಗಿ 5 ಸಾವಿರ ಸಿಬಿಜಿ(ಸಂಕ್ಷೇಪಿತ ಜೈವಿಕ ಅನಿಲ) ಸ್ಥಾವರ ನಿರ್ಮಿಸುವ ಯೋಜನೆಯನ್ನು 2018ರಲ್ಲಿ ಅನಾವರಣಗೊಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.