Goa: 37 ನೇ ರಾಷ್ಟ್ರೀಯ ಕ್ರೀಡಾಕೂಟ- ಆಟಗಾರರಿಗಾಗಿ ವಿಶೇಷ ಪ್ಯಾಕೇಜ್
ಕ್ರೀಡಾಪಟುಗಳಿಗೆ ಸಮತೋಲಿತ ಆಹಾರ ಸಿಗುವಂತೆ ಮಾಡಲು ಸಾವಿರಾರು ಕೈಗಳ ಶ್ರಮ
Team Udayavani, Nov 4, 2023, 4:33 PM IST
ಪಣಜಿ: ಗೋವಾದಲ್ಲಿ ನಡೆಯುತ್ತಿರುವ 37 ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ದೇಶಾದ್ಯಂತದ 10,000 ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದಾರೆ ಮತ್ತು ಈ ಸ್ಪರ್ಧೆಯ ಆಟಗಾರರಿಗಾಗಿ ಸಂಘಟಕರು ವಿಶೇಷ ಪ್ಯಾಕೇಜ್ ಅನ್ನು ಸಿದ್ಧಪಡಿಸಿದ್ದಾರೆ. ಕ್ರೀಡಾಪಟುಗಳಿಗೆ ಸಮತೋಲಿತ ಆಹಾರ ಸಿಗುವಂತೆ ಮಾಡಲು ಸಾವಿರಾರು ಕೈಗಳು ಹಗಲಿರುಳು ಶ್ರಮಿಸುತ್ತಿವೆ.
ರಾಷ್ಟ್ರೀಯ ಕ್ರೀಡಾ ಸ್ಫರ್ಧೆಯಲ್ಲಿ ಪಾಲ್ಗೊಂಡಿರುವ ಕ್ರೀಡಾ ಪಟುಗಳಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ‘ಬಿಸಿ ಚಹಾ’ ಮತ್ತು ಎರಡು ಹೊತ್ತು ಊಟವನ್ನು ನೀಡಲಾಗುತ್ತಿದೆ. ಕ್ರೀಡಾ ಪಟುಗಳಿಗೆ ಅಡುಗೆ ಮಾಡಲು 900 ಕೆಜಿ ಪನೀರ್, 750 ಕೆಜಿ ಚಿಕನ್ ಮತ್ತು 800 ಕೆಜಿ ಮೀನು, 1000 ಲೀಟರ್ ಹಾಲು, 15000 ಬಾಳೆಹಣ್ಣು, 1,250 ಕೆಜಿ ಸೇಬು ಮತ್ತು ಇತರ ತರಕಾರಿಗಳನ್ನು ಅಡುಗೆಗೆ ಬಳಸಲಾಗುತ್ತದೆ.ಪ್ರಮುಖವಾಗಿ, ಎಂದು ಕುಕ್‍ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು, ಎಲ್ಲಾ ತರಕಾರಿಗಳನ್ನು ಗೋವಾ ರಾಜ್ಯದ ಸ್ಥಳೀಯ ರೈತರ ಮುಖಾಂತರ ಪಡೆಯಲಾಗಿದೆ ಮತ್ತು ನೇರವಾಗಿ 42 ರೈತರು ಸರಬರಾಜು ಮಾಡುತ್ತಾರೆ ಎಂಬ ಮಾಹಿತಿ ನೀಡಿದರು.
ಇದನ್ನೂ ಓದಿ: World Cup 2023; ಪಾಕ್ ವಿರುದ್ಧದ ಶತಕದೊಂದಿಗೆ ಸಚಿನ್ ದಾಖಲೆ ಮುರಿದ ರಚಿನ್
ಶುಚಿತ್ವ ಮತ್ತು ‘ಬಯೋಡಿಗ್ರೇಡಬಲ್’ ಪ್ಲೇಟ್‍ಗಳು: ಕ್ರೀಡಾಪಟುಗಳಿಗೆ ಆಹಾರಕ್ರಮವು ತುಂಬಾ ಮುಖ್ಯವಾಗಿದೆ. ಆದ್ದರಿಂದ, ಗೋವಾ ಸರ್ಕಾರವು ಆಟಗಾರರ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಪ್ರತಿ ದಿನವೂ ವಿಭಿನ್ನ ‘ಮೆನು’ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಎಲ್ಲ ರಾಜ್ಯಗಳ ಆಹಾರ ಸಂಸ್ಕøತಿಯೂ ಸೇರಿದೆ. ಇದಲ್ಲದೇ ಸ್ವಚ್ಛತೆಗೆ ವಿಶೇಷ ಒತ್ತು ನೀಡಲಾಗುತ್ತಿದೆ.
ಕ್ರೀಡಾಪಟುಗಳು, ತಾಂತ್ರಿಕ ಅಧಿಕಾರಿಗಳು ಮತ್ತು ಗಣ್ಯರ ಊಟಕ್ಕೆ ‘ಪರಿಸರ ಸ್ನೇಹಿ ಪ್ಲೇಟ್’ (ಡಿಗ್ರೇಡಬಲ್) ಬಳಸಲಾಗುತ್ತಿದೆ. ಅವು ಆರೋಗ್ಯಕ್ಕೆ ಹಾನಿಕಾರಕವಲ್ಲ, ಸಾಂಕ್ರಾಮಿಕವೂ ಅಲ್ಲ.
ಅಕ್ಟೋಬರ್ 26 ರಿಂದ ಗೋವಾದಲ್ಲಿ ನಡೆಯುತ್ತಿರುವ 37 ನೇಯ ರಾಷ್ಟ್ರೀಯ ಕ್ರೀಡಾ ಸ್ಫರ್ಧೆ ನೊವೆಂಬರ್ 9 ರಂದು ಸಮಾರೋಪ ಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.