![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 14, 2023, 6:43 PM IST
ಪಣಜಿ: ಅಲೋಪತಿ ಚಿಕಿತ್ಸೆಯು ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸದಿದ್ದರೆ, ಅಂತಹ ಜನರು ಚಿಕಿತ್ಸೆಗಾಗಿ ಆಯುಷ್ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಬಹುದು ಹೊಸದಾಗಿ ಉದ್ಘಾಟನೆಗೊಂಡ ಆಯುಷ್ ಆರೋಗ್ಯ ಸೇವಾ ಕೇಂದ್ರ ‘ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ ಅತುರಸ್ಯ ವಿಕಾರಪ್ರಶಮನಂ ಚ’, ಅಂದರೆ ಆಯುಷ್ ಕೇಂದ್ರವು ಔಷಧಿಯ ತಡೆಗಟ್ಟುವ ಮತ್ತು ಚಿಕಿತ್ಸಕ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದಾರೆ.
ಅವರು ಪಣಜಿ ಸಮೀಪದ ರಾಯಬಂದರಿನಲ್ಲಿ ಆಯುಷ್ ಆರೋಗ್ಯ ಸೇವೆಗಳನ್ನು ಮುಖ್ಯಮಂತ್ರಿ ಪ್ರಮೋದ ಸಾವಂತ್ ಉದ್ಘಾಟಿಸಿದರು. ಇದು ಯುನಾನಿ ಕ್ಲಿನಿಕ್, ಕ್ಲಿನಿಕಲ್ ರಿಸರ್ಚ್, ಸಿದ್ಧ ಕ್ಲಿನಿಕಲ್ ರಿಸರ್ಚ್ ಸೆಂಟರ್, ಕ್ಲಿನಿಕಲ್ ರಿಸರ್ಚ್ ಸೆಂಟರ್ ಆಫ್ ಹೋಮಿಯೋಪತಿ ಮತ್ತು ಆಯುರ್ವೇದ ರಿಸರ್ಚ್ ಒಳಗೊಂಡಿದೆ.
“ಗೋವಾ ರಾಜ್ಯದಲ್ಲಿ ಈ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದ್ದಕ್ಕಾಗಿ ನಾನು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಗೋವಾ ಆಯುಷ್ ಹೆಲ್ತ್‍ಕೇರ್ ಹಬ್ ಆಗುವತ್ತ ಸಾಗುತ್ತಿದೆ. ಈ ಸಂಸ್ಥೆಗಳೊಂದಿಗೆ, ಗೋವಾ ಭಾರತದಲ್ಲಿ ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರವಾಗಲು ಒಂದು ಹೆಜ್ಜೆ ಮುಂದಿಟ್ಟಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದರು
ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಸೋನ್ವಾಲ್, ಕೇಂದ್ರ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಮತ್ತು ರಾಜ್ಯ ಆರೋಗ್ಯ ಸಚಿವ ವಿಶ್ವಜೀತ್ ರಾಣೆ ಉಪಸ್ಥಿತರಿದ್ದರು. ಆರೋಗ್ಯ ಸೇವೆ ಅಗತ್ಯವಿರುವ ಸಾರ್ವಜನಿಕರಿಗೆ ಒಪಿಡಿ, ಕ್ಲಿನಿಕ್ ಮತ್ತು ಪಂಚಕರ್ಮಗಳನ್ನು ಒದಗಿಸಲಾಗಿದೆ. ಖನಿಜ ಮತ್ತು ಸಮುದ್ರ ಔಷಧಗಳ ಮೇಲೆ ಕೇಂದ್ರೀಕರಿಸುವ ಸಂಶೋಧನೆಗಾಗಿ ಪ್ರಯೋಗಾಲಯಗಳು, ವಸ್ತುಸಂಗ್ರಹಾಲಯಗಳು ಮತ್ತು ಗ್ರಂಥಾಲಯಗಳನ್ನು ಸಹ ಈ ಆಸ್ಪತ್ರೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.