ಗೋವಾದಲ್ಲೊಂದು ಆಲ್ಕೋಹಾಲ್ ಮ್ಯೂಸಿಯಂ!
"ಆಲ್ ಎಬೌಟ್ ಆಲ್ಕೋಹಾಲ್'ನಲ್ಲಿ ಫೆನಿಯದ್ದೇ ಕಥೆ; ಪಾರಂಪರಿಕ ಮದ್ಯದ ಮೂಲದ ಬಗ್ಗೆ ಮಾಹಿತಿ
Team Udayavani, Aug 22, 2021, 11:00 PM IST
ಪಣಜಿ: ಪ್ರವಾಸಿ ರಾಜ್ಯ ಗೋವಾದಲ್ಲಿ ಮೊದಲ ಆಲ್ಕೋ ಹಾಲ್ ಮ್ಯೂಸಿಯಂ ತೆರೆಯಲಾಗಿದೆ. ಸ್ಥಳೀಯ ವಿಶೇಷ ಮದ್ಯವೆನಿಸಿಕೊಂಡಿರುವ ಫೆನಿಯ ಪ್ರಸಿದ್ಧತೆಯನ್ನು ದೇಶ ವಿದೇಶಕ್ಕೆ ಹರಡಿಸುವ ಉದ್ದೇಶದೊಂದಿಗೆ ಈ ಮ್ಯೂಸಿಯಂ ತೆರೆಯಲಾಗಿದೆ.
ಉದ್ಯಮಿ ನಂದನ್ ಕುಡ್ಚಡ್ಕರ್ “ಆಲ್ ಎಬೌಟ್ ಆಲ್ಕೋ ಹಾಲ್’ ಹೆಸರಿನ ಮ್ಯೂಸಿಯಂ ತೆರೆದಿದ್ದಾರೆ. ಕಾಂಡೋಲಿಮ್ ಬೀಚ್ ಗ್ರಾಮದ ಬಳಿ ಈ ಮ್ಯೂಸಿಯಂ ಇದೆ. ಇದರಲ್ಲಿ ವಿಶೇಷವಾಗಿ ಫೆನಿಗೆ ಸಂಬಂಧಪಟ್ಟ ಸಾಮಗ್ರಿಗಳನ್ನು ಪ್ರದರ್ಶಿಸಲಾಗುವುದು. ಹಿಂದಿನ ಕಾಲದಲ್ಲಿ ಫೆನಿಯನ್ನು ಸಂಗ್ರಹಿಸುಡುತ್ತಿದ್ದ ಬೃಹದಾಕಾರದ ಹೂಜಿಗಳು, ಫೆನಿಗೆ ಸಂಬಂಧಿಸಿದ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ. ಈ ಮ್ಯೂಸಿಯಂ ಮೂಲಕ ಗೋವಾದ ಪರಂಪರೆ ಮತ್ತು ಫೆನಿಯ ಮೂಲ, ಅದು ಬ್ರೆಜಿಲ್‌ನಿಂದ ಗೋವಾಕ್ಕೆ ಬಂದಿದ್ದು ಹೇಗೆ ಎಂಬೆಲ್ಲ ಮಾಹಿತಿಯನ್ನೂ ಜನರಿಗೆ ತಿಳಿಸಿಕೊಡುವುದಾಗಿ ನಂದನ್ ಹೇಳಿದ್ದಾರೆ.
ಇದನ್ನೂ ಓದಿ:ಭಾರತೀಯರಿನ್ನು ಯುಎಇಗೆ ಪ್ರವಾಸ ಹೋಗಬಹುದು
ಫೆನಿ ಗೋವಾದಲ್ಲೇ ತಯಾಗುತ್ತಿರುವ ಮದ್ಯ. ಅದನ್ನು ರಾಜ್ಯದ ಪಾರಂಪರಿಕ ಮದ್ಯ ಎಂದು ಸರ್ಕಾರ 2016ರಲ್ಲಿ ಗುರುತಿಸಿದೆ. 1700ರ ಸಮಯದಲ್ಲಿ ಪೋರ್ಚುಗೀಸರು ಬ್ರೆಜಿಲ್‌ನಿಂದ ಗೇರು ಬೀಜವನ್ನು ತಂದು ಗೋವಾದಲ್ಲಿ ಅದರ ಬೆಳೆ ಆರಂಭಿಸಿದರು. ನಂತರ ಗೇರು ಹಣ್ಣು ಗಳಿಂದಲೇ ಫೆನಿ ಮದ್ಯ ತಯಾರಿಸಲಾರಂಭಿಸಲಾಯಿತು. ಗೇರು ರಸವನ್ನು ಎರಡು ಬಾರಿ ಡಿಸ್ಟಿಲ್ ಮಾಡಿ ಅದಕ್ಕೆ ಕೆಲ ಸಾಮಾಗ್ರಿಗಳನ್ನು ಸೇರಿಸಿ ಫೆನಿ ತಯಾರಿಸಲಾಗುತ್ತದೆ. ಗೋವಾದ ಜನರು ಅತಿ ಹೆಚ್ಚು ಬಳಸುವ ಮದ್ಯದಲ್ಲಿ ಇದು ಮೊದಲಿದೆ. ಅದಕ್ಕೆಂದೇ ವಿಶೇಷ ಬಾರ್ ಗಳೂ ಅಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.