Goa: ಗೋಬಿ ಮಂಚೂರಿಯನ್- ವಡಾಪಾವ್ ಬ್ಯಾನ್ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್!
ಸೋಷಿಯಲ್ ಮೀಡಿಯಾ ಚರ್ಚೆಗೆ ಎಡೆಮಾಡಿದ ಮ್ಹಾಪ್ಸಾ ಪುರಸಭೆಯ ಈ ನಿರ್ಧಾರ
Team Udayavani, Feb 7, 2024, 6:57 PM IST
ಪಣಜಿ: ಮ್ಹಪ್ಸಾ ಪುರಸಭೆಯು ಗೋಬಿ ಮಂಚೂರಿಯನ್ ಮಾರಾಟವನ್ನು ನಿಷೇಧಿಸಿದೆ. ದೇವ್ ಬೋಡ್ಗೇಶ್ವರ ಜಾತ್ರೆಯಲ್ಲಿ ಉಂಟಾದ ಮಲಿನತೆಯ ಸಮಸ್ಯೆಯಿಂದಾಗಿ ಕಾರ್ಪೊರೇಟರ್ ತಾರಕ್ ಅರೋಲ್ಕರ್ ಅವರು ಮಂಚೂರಿಯನ್ ಮಾರಾಟವನ್ನು ನಿಷೇಧಿಸುವಂತೆ ಒತ್ತಾಯಿಸಿದರು. ಎಲ್ಲಾ ಕಾರ್ಪೊರೇಟರ್ಗಳು ಈ ಬೇಡಿಕೆಯನ್ನು ಬೆಂಬಲಿಸಿದರು. ಹಾಗಾಗಿ ಅಂತಿಮವಾಗಿ ಪಾಲಿಕೆ ನಿಷೇಧದ ಬೇಡಿಕೆಯನ್ನು ಒಪ್ಪಿಕೊಂಡಿತು. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಮ್ಹಾಪ್ಸಾ ಪುರಸಭೆಯ ಈ ನಿರ್ಧಾರದಿಂದಾಗಿ ಕೆಲವರು ಈ ನಿರ್ಧಾರವನ್ನು ಸ್ವಾಗತಿಸಿದ್ದರೆ, ಕೆಲವರು ಅದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ `X’ ನಲ್ಲಿ, ವ್ಯಕ್ತಿಯೊಬ್ಬರು ಗೋವಾದ ಬೀಚ್ನಲ್ಲಿ ಸಸ್ಯಾಹಾರಿಯೊಬ್ಬರು ಗೋಬಿ ಮಂಚೂರಿಯನ್ಗಾಗಿ ಹುಡುಕುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕೆಲವರು ಪುರಸಭೆಯ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಪುರಸಭೆಯ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ‘ಕೆಲವರು ಆರೋಗ್ಯದ ಹೆಸರಿನಲ್ಲಿ ವಿಷಕಾರಿ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಾರೆ ಆದರೆ ರುಚಿಕರವಾದ, ಹೊಳೆಯುವ ಮಂಚೂರಿಯನ್ ಅನ್ನು ಸವಿಯಲು ಸಾಧ್ಯವಿಲ್ಲ. ಜಂಕ್ ಫುಡ್ ತಿನ್ನುವುದನ್ನು ನಿಲ್ಲಿಸುವ ಬದಲು ನಾವು ಗೋವಾವನ್ನು ಬಹಿಷ್ಕರಿಸುತ್ತೇವೆ’ ಎಂದು ಬಳಕೆದಾರರು ಬರೆದಿದ್ದಾರೆ.
ಸಂಜಯ್ ಹೆಗ್ಡೆ ಎಂಬ ವ್ಯಕ್ತಿ ಮ್ಹಾಪ್ಷಾದಲ್ಲಿ ಗೋಬಿ ಮಂಚೂರಿಯನ್ ಮಾರಾಟವನ್ನು ನಿಷೇಧಿಸಿದ್ದು, ವಡಾ ಪಾವ್ ಅನ್ನು ನಿಷೇಧಿಸಿದರೆ ಏನಾಗುತ್ತದೆ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.
ಗೋಬಿ ಮಂಚೂರಿಯನ್ಗೆ ಕೆಂಪು ಬಣ್ಣವನ್ನು ನೀಡಲು ಸಿಂಥಟಿಕ್ ಬಣ್ಣವನ್ನು ಬಳಸಲಾಗುತ್ತದೆ. ಆದರೆ ಈ ಬಣ್ಣ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಅದಕ್ಕಾಗಿಯೇ ಮ್ಹಪ್ಸಾ ಪುರಸಭೆಯು ಮಂಚೂರಿಯನ್ ಮಾರಾಟವನ್ನು ನಿಷೇಧಿಸಲು ನಿರ್ಧರಿಸಿದೆ. ಮಂಚೂರಿಯನ್ ಗರಿಗರಿಯಾಗಲು ಕೆಲವು ರೀತಿಯ ಪುಡಿ ಮತ್ತು ಜೋಳದ ಪಿಷ್ಟವನ್ನು ಹಿಟ್ಟಿನಲ್ಲಿ ಬಳಸಲಾಗುತ್ತದೆ. ಕೆಲವೆಡೆ ವಾಷಿಂಗ್ ಪೌಡರ್ ಬಳಸುತ್ತಾರೆ ಎಂದೂ ಎಫ್ ಡಿಎ ಅಧಿಕಾರಿಗಳು ಹೇಳಿದ್ದಾರೆ.
#GobiManchurian; ಜನಪ್ರಿಯ ಖಾದ್ಯ ಗೋಬಿ ಮಂಚೂರಿಯನ್ ನಿಷೇಧಿಸಿದ ಭಾರತದ ಈ ನಗರ
— Udayavani (@udayavani_web) February 5, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್ಗೆ ನೋಟಿಸ್
Madikeri: ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.