ಮೂರೂವರೆ ತಿಂಗಳಲ್ಲಿ 21 ಕೆ.ಜಿ.ಗೂ ಅಧಿಕ ಜಪ್ತಿ;
ಮಂಗಳೂರು ವಿಮಾನ ನಿಲ್ದಾಣ ಚಿನ್ನ ಸ್ಮಗ್ಲರ್‌ಗಳ ರಹದಾರಿ
Team Udayavani, Sep 29, 2021, 6:20 AM IST
ಮಂಗಳೂರು: ಕೋವಿಡ್ ಎರಡನೇ ಅಲೆ, ಲಾಕ್‌ಡೌನ್ ಬಳಿಕ ದುಬಾೖ-ಮಂಗಳೂರು ನಡುವೆ ನೇರ ವಿಮಾನ ಯಾನ ಪುನರಾರಂಭಗೊಂಡ ಅನಂತರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ ಪ್ರಕರಣ ಮತ್ತೆ ಹೆಚ್ಚಾಗಿದೆ.
ಸುಮಾರು ಒಂದು ತಿಂಗಳ ಅವಧಿಯಲ್ಲಿ ವಿಮಾನ ನಿಲ್ದಾಣದಲ್ಲಿ ಒಂದೂವರೆ ಕೆ.ಜಿ.ಗೂ ಅಧಿಕ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದ್ದು, ಒಂದು ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಲ್ಲಿ ಹೆಚ್ಚಿನವರು ಕಾಸರಗೋಡಿನವರು. ಆಟಿಕೆ, ಶೂ, ಅಡುಗೆ ಸಾಮಗ್ರಿ, ಹೇರ್‌ಬ್ಯಾಂಡ್, ಗುದದ್ವಾರ, ಬಟ್ಟೆ ಮೊದಲಾದವುಗಳಲ್ಲಿ ಬಚ್ಚಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಅಕ್ರಮಕ್ಕೆ ಆಫರ್ !
ದುಬಾೖ ಮತ್ತು ಭಾರತದಲ್ಲಿರುವ ಕೆಲವು ಮಂದಿ ಸ್ಮಗ್ಲರ್‌ಗಳು ಅಕ್ರಮವಾಗಿ ಚಿನ್ನವನ್ನು ಸಾಗಿಸಲು ಕೆಲವು ಪ್ರಯಾಣಿಕರನ್ನು ಬಳಸುತ್ತಿರುವ ಬಗ್ಗೆಯೂ ಅಧಿಕಾರಿಗಳು ಬಲವಾದ ಸಂಶಯ ವ್ಯಕ್ತಪಡಿಸಿದ್ದಾರೆ. ಇಂತಹ ಸ್ಮಗ್ಲರ್‌ಗಳು ಅಕ್ರಮ ಚಿನ್ನ ಸಾಗಾಟ ಮಾಡುವ ಪ್ರಯಾಣಿಕರಿಗೆ ಉಚಿತ ವಿಮಾನಯಾನ ಟಿಕೆಟ್, ಹಣದ ಆಫರ್ ನೀಡುತ್ತಾರೆ ಎನ್ನಲಾಗಿದೆ. ಇನ್ನು ಕೆಲವು ಮಂದಿ ಸ್ವತಃ ಅವರಾಗಿಯೇ ಚಿನ್ನದ ಆಸೆಗೆ ಬಿದ್ದು ಕಸ್ಟಮ್ಸ್ ಇಲಾಖೆಯ ಕೈಗೆ ಸಿಕ್ಕಿಬಿದ್ದು ಅಪಾಯ ತಂದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಬೂಸ್ಟರ್ ಡೋಸ್ ಪಡೆದುಕೊಂಡ ಅಧ್ಯಕ್ಷ ಬೈಡೆನ್
2 ತಂಡಗಳಿಂದ ತಪಾಸಣೆ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯ ಒಟ್ಟು 20 ಅಧಿಕಾರಿ, ಸಿಬಂದಿಯನ್ನೊಳಗೊಂಡ 2 ತಂಡಗಳು ತಪಾಸಣೆ ನಡೆಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಅಕ್ರಮ ಚಿನ್ನ ಸಾಗಾಟಗಾರರು ಚಿನ್ನವನ್ನು ಬಚ್ಚಿಟ್ಟುಕೊಳ್ಳಲು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅದನ್ನು ಕೂಡ ಇಲಾಖೆ ಪತ್ತೆ ಹಚ್ಚುತ್ತಿದೆ. ಅಕ್ರಮವಾಗಿ ಸಾಗಿಸಿದ ಚಿನ್ನದ ಮೌಲ್ಯ 20 ಲ.ರೂ.ಗಳಿಗಿಂತ ಅಧಿಕವಿದ್ದರೆ ಆರೋಪಿಗಳನ್ನು ಬಂಧಿಸಲಾಗುತ್ತದೆ. ಅದಕ್ಕಿಂತ ಕಡಿಮೆ ಇದ್ದರೆ ಪ್ರಕರಣ ದಾಖಲಿಸಿ ದಂಡ ವಿಧಿಸಿ ತನಿಖೆ ನಡೆಸಲಾಗುತ್ತದೆ. – ಇಮಾಮುದ್ದೀನ್ ಅಹಮ್ಮದ್,
ಕಸ್ಟಮ್ಸ್ ಆಯುಕ್ತರು, ಮಂಗಳೂರು
12 ಮಂದಿಯ ಬಂಧನ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಹಿಂದಿನ ಎಲ್ಲ ವರ್ಷಗಳಿಗಿಂತಲೂ ಈ ವರ್ಷ ಅತ್ಯಧಿಕ ಪ್ರಮಾಣದಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. 2021ರ ಜನವರಿಯಿಂದ ಎ. 19ರ ವರೆಗೆ ಕೇವಲ ಮೂರೂವರೆ ತಿಂಗಳಲ್ಲಿ 21 ಕೆ.ಜಿ.ಗೂ ಅಧಿಕ ತೂಕದ ಹಾಗೂ 10 ಕೋ.ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ವರ್ಷ ಇದುವರೆಗೆ 12 ಮಂದಿಯನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.