![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jul 4, 2020, 6:20 AM IST
ಉಡುಪಿ: ಜಿಲ್ಲೆಯ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಶುಕ್ರವಾರ ಬೆಳಗ್ಗೆಯಿಂದ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಉಡುಪಿಯಲ್ಲಿ ಬೆಳಗ್ಗಿನಿಂದಲೇ ದಟ್ಟ ಮೋಡದ ಛಾಯೆ, ಮಳೆ ಕಂಡುಬಂದಿದ್ದು, ಮಧ್ಯಾಹ್ನದ ವರೆಗೆ ತುಂತುರು ಮಳೆ ಸುರಿದಿದೆ. ಅಪರಾಹ್ನ 3 ಗಂಟೆ ಬಳಿಕ ಮಳೆ ತೀವ್ರಗೊಂಡಿದ್ದು ಮತ್ತೆ ಜನ ಜೀವನ ಅಸ್ತವ್ಯಸ್ತಗೊಂಡಿತು.
ಕಾರ್ಕಳ ತಾಲೂಕಿನ ಬೆಳ್ಮಣ್‌ನಲ್ಲಿ ಧಾರಾಕಾರ ಮಳೆಯಾಗಿದ್ದು, ಮುಂಡ್ಕೂರಿ ನಲ್ಲಿ ರಸ್ತೆಯಲ್ಲೇ ನೀರು ಹರಿಯಿತು.
ಬ್ರಹ್ಮಾವರ ತಾಲೂಕಿನ ಐರೋಡಿ ಗ್ರಾಮದ ಕೆರೆಲ್ ಡೆಸಾ ಮನೆ ಗೋಡೆ ಕುಸಿದು ಬಿದ್ದು ಸುಮಾರು 1,00,000 ರೂ. ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರ ತಾಲೂಕಿನಲ್ಲಿ ಬಸ್ರೂರು, ಸಿದ್ಧಾಪುರ, ಹೊಸಂಗಡಿ, ಯಡಮೊಗೆ, ಹಳ್ಳಿಹೊಳಿ, ಆಜ್ರಿ, ಅಂಪಾರು, ಶಂಕರ ನಾರಾಯಣ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಮಡಾಮಕ್ಕಿ, ಹಂಗವಳ್ಳಿ,ಅಮಾಸೆಬೈಲು, ಉಳ್ಳೂರು74 ಮೊದಲಾದ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ ಉಡುಪಿ ಜಿಲ್ಲೆಯಲ್ಲಿ ಜೂ. 4 ಮತ್ತು 6ರಂದು ಆರೆಂಜ್ ಅಲರ್ಟ್, ಜು. 7ರಂದು ಯಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಮುಂದಿನ ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆ ಯಾಗುವ ಸಾಧ್ಯತೆ ಇದೆ.
ಕೃಷಿ ಚಟುವಟಿಕೆ ಚುರುಕು
ಕೋವಿಡ್ ಭೀತಿಯಿಂದ ಲಾಕ್‌ಡೌನ್ ಆದ ಜಿಲ್ಲೆ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇದೀಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದು ರೈತರು ಹರ್ಷ ಚಿತ್ತದಿಂದ ಜಮೀನಿನತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಗಳು ಚರುಕುಗೊಳ್ಳುತ್ತಿದೆ. ಬ್ರಹ್ಮಾವರ, ಚಾಂತಾರು, ಬಾರಕೂರು, ಉಪ್ಪೂರು, ನಿಟ್ಟೂರು ಸೇರಿದಂತೆ ಹಲವೆಡೆ ಕೃಷಿ ಚಟುವಟಿಕೆ ಭರದಿಂದ ಆರಂಭ ವಾಗಿದ್ದು, ಜಿಲ್ಲೆಯ ವಿವಿಧ ಪ್ರದೇಶದಲ್ಲಿ ನೇಜಿ ಕೆಲಸ ಪ್ರಾರಂಭವಾಗಿದೆ.
ನಗರದ ವಿವಿಧೆಡೆ ಮರ ಬಿದ್ದುದ ರಿಂದ ವಿದ್ಯುತ್ ತಂತಿ ಗಳು ತುಂಡಾಗಿದ್ದು ಹಲವೆಡೆ ವಿದ್ಯುತ್ ವ್ಯತ್ಯಯವಾಗಿದೆ. ಜು. 1ರಿಂದ ಜು.2ವರೆಗೆ ಒಟ್ಟು 9 ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. 6 ಟ್ರಾನ್ಸ್‌ಫಾರ್ಮರ್‌ಗಳು ಕೆಟ್ಟು ಹೋಗಿವೆ. ಮೆಸ್ಕಾಂಗೆ ಸುಮಾರು 3.55 ಲ. ರೂ. ನಷ್ಟವಾಗಿದೆ. ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಿದೆ.
You seem to have an Ad Blocker on.
To continue reading, please turn it off or whitelist Udayavani.