ಮಂಗಳೂರಿನ ಆಕಾಶಭವನ ಶರಣ್, ಪಿಂಕಿ ನವಾಜ್ ವಿರುದ್ಧ ಗೂಂಡಾ ಕಾಯ್ದೆ ಜಾರಿ
Team Udayavani, Feb 10, 2022, 7:35 PM IST
ಆಕಾಶಭವನ ಶರಣ್, ಪಿಂಕಿ ನವಾಜ್
ಮಂಗಳೂರು : ಕುಖ್ಯಾತ ರೌಡಿ ಶೀಟರ್ ಗಳಾದ ಆಕಾಶಭವನ ಶರಣ್ ಮತ್ತು ಪಿಂಕಿ ನವಾಜ್ ವಿರುದ್ಧ ಪೊಲೀಸರು ಗೂಂಡಾ ಕಾಯ್ದೆ ಜಾರಿ ಮಾಡಿದ್ದು, ಈ ಬಗ್ಗೆ ಗುರುವಾರ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಅವರು ತಿಳಿಸಿದ್ದಾರೆ.
ಆಕಾಶಭವನ್ ಶರಣ್, ಕಳ್ಳಭಟ್ಟಿ ಸಾರಾಯಿ ವ್ಯವಹಾರ, ಅನೈತಿಕ ವ್ಯವಹಾರ ಗೂಂಡಾಗಿರಿ ಮತ್ತು ರೂಢಿಗತ ಅಪರಾಧಿಯಾಗಿದ್ದು ಈತನನ್ನು ಸಮಾಜ ವಿದ್ರೋಹಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗತರುವ ಚಟುವಟಿಕೆಗಳಿಂದ ತಡೆಗಟ್ಟಬೇಕಾದರೆ ಬಂಧನದಲ್ಲಿಡಲು ಆಜ್ಞೆ ಮಾಡುವುದು ಅತ್ಯಾವಶ್ಯಕವೆಂದು ಮನದಟ್ಟಾಗಿರುತ್ತದೆ . ಆದುದರಿಂದ, ಕರ್ನಾಟಕ ಕಳ್ಳಭಟ್ಟಿ , ಸಾರಾಯಿ ವ್ಯವಹಾರಗಳ ಜೂಜುಕೋರರ ಮಾಧಕವಸ್ತು , ಅಪರಾಧಿಗಳ , ವೀಡಿಯೋ ಅಥವಾ ಅನೈತಿಕ ವ್ಯವಹಾರ ಅಪರಾಧಿಗಳ ಗೂಂಡಾಗಳ 1985 ಆಡಿಯೋ ಪೈರೇಟ್ ಅಧಿನಿಯಮ ಅಧಿಕಾರವನ್ನು ಉಪಯೋಗಿಸಿ ಮೈಸೂರಿನ ಜೈಲಿನಲ್ಲಿರುವ ಆತನನ್ನು ವಿಜಯಪುರ ಕೇಂದ್ರ ಕಾರಾಗ್ರಹದಲ್ಲಿ ಬಂಧಿಸಿಡಬೇಕೆಂದು ಆಜ್ಞೆ ಮಾಡಲಾಗಿದೆ.
2008 ರಿಂದ 2020 ರ ವರೆಗೆ 20 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಾಗಿವೆ. ಕೊಲೆ,ಕೊಲೆ ಪ್ರಯತ್ನ, ರೇಪ್,ಪೊಲೀಸ್ ಮೇಲೆ ಹಲ್ಲೆ, ಇತ್ತೀಚೆಗೆ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಉಡುಪಿಯಲ್ಲಿ ಪೋಕ್ಸೋ ಕಾಯಿದೆಯಲ್ಲಿ ಪ್ರಕರಣಗಳು ದಾಖಲಾಗಿವೆ.
2017 ರಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ಪಿಂಕಿ , ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಜಾಮೀನಿನ ಮೇಲೆ ಹೊರಬಂದ ಕೂಡಲೇ ಆತನನ್ನು ಬಂಧಿಸಲಾಗಿದೆ.ಪಿಂಕಿಯನ್ನು ಮಂಗಳೂರು ಕಾರಾಗೃಹ ದಲ್ಲಿಡಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.