ನವ್ಯ ಸಾಹಿತ್ಯದ ಹರಿಕಾರ ಮೊಗೇರಿ ಗೋಪಾಲಕೃಷ್ಣ ಅಡಿಗ
Team Udayavani, Nov 1, 2020, 5:00 AM IST
ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಕರಾವಳಿಯ ಹಿರಿಯ ಸಾಹಿತಿಗಳನ್ನು ಸ್ಮರಿಸುವ ಪ್ರಯತ್ನವಿದು. “ಕನ್ನಡ ಕಟ್ಟಿದ ಹಿರಿಯರು’ ಸರಣಿ ಇಂದಿನಿಂದ ಪ್ರಕಟವಾಗುವುದು.
ಕುಂದಾಪುರ: ಕನ್ನಡ ಸಾರಸ್ವತ ಲೋಕದಲ್ಲಿ “ನವ್ಯ ಸಾಹಿತ್ಯದ ಹರಿಕಾರ’ ಎಂದೇ ಹೆಸರಾದವರು ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗರು.
1918ರ ಫೆ. 18ರಂದು ಬೈಂದೂರು ತಾಲೂಕಿನ ಕೆರ್ಗಾಲು ಗ್ರಾಮದ ಮೊಗೇರಿಯಲ್ಲಿ ಅಡಿಗರು ಜನಿಸಿದರು. ಹುಟ್ಟೂರಿ ನಲ್ಲಿ ಪ್ರಾಥಮಿಕ ಶಿಕ್ಷಣ, ಬೈಂದೂರಿನಲ್ಲಿ ಪ್ರೌಢಶಿಕ್ಷಣ ಪೂರೈಸಿ, ಉನ್ನತ ವ್ಯಾಸಂಗಕ್ಕೆ ಮೈಸೂರಿಗೆ ತೆರಳಿ ಪದವಿ, ಸ್ನಾತಕೋತ್ತರ ಪಡೆದರು. ಆಗಲೇ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡರು. ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ
ಸಲ್ಲಿಸುವ ಜತೆಗೆ ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡರು.
1964ರಲ್ಲಿ ಸಾಗರದ ಲಾಲ್ ಬಹಾದ್ದೂರ್ ಕಾಲೇಜು, ಉಡುಪಿಯ ಪಿಪಿಸಿ ಕಾಲೇಜಿನ ಪ್ರಾಂಶುಪಾಲರಾಗಿ
ಸೇವೆ ಸಲ್ಲಿಸಿದ್ದರು. 1971ರಲ್ಲಿ ಜನಸಂಘದ ಅಭ್ಯರ್ಥಿಯಾಗಿ ಲೋಕಸಭೆಗೆ ಬೆಂಗಳೂರಿನಿಂದ ಸ್ಪರ್ಧಿ ಸಿದ್ದರು.
ನವ್ಯದ ಆದಿಕವಿ
ಕನ್ನಡ ಕಾವ್ಯ ಕ್ಷೇತ್ರದಲ್ಲಿ ನವ್ಯ ಎಂಬ ಹೊಸ ಸಂಪ್ರದಾಯ ಬೆಳೆಸಿದವರು ಅಡಿಗರು. ಕಥೆ, ಕಾದಂಬರಿ, ನಾಟಕ, ವಿಮರ್ಶೆ ಮುಂತಾದ ಸಾಹಿತ್ಯ ಪ್ರಕಾರಗಳಿಗೆ ಹೊಸ ರೂಪು ಕೊಟ್ಟವರು. ಹೊಸ ಸಂವೇದನೆ ಮತ್ತು ಹೊಸ ಅಭಿವ್ಯಕ್ತಿಯನ್ನು ಪ್ರತಿಪಾದಿಸಿದ್ದ ಅಡಿಗರು ಹೊಸ ತಲೆಮಾರಿನವರ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದರು. “ಸಾಕ್ಷಿ’ ಎಂಬ ಪತ್ರಿಕೆಯನ್ನು ಮುನ್ನಡೆಸಿದ್ದರು, ಸ್ವಾತಂತ್ರÂ ಹೋರಾಟಗಾರ, ಕವಿ, ಪ್ರಾಧ್ಯಾಪಕ, ಸಾಹಿತ್ಯ ಸಂಘಟಕ, ಹೋರಾಟಗಾರ, ರಾಜಕಾರಣಿ -ಹೀಗೆ ಬಹುಮುಖೀಯಾಗಿ ಗುರುತಿಸಿಕೊಂಡಿದ್ದರು.
1974ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಪ್ರಶಸ್ತಿಗೆ ಆಗ್ರಹ
ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ದಿಸೆ ತೋರಿದ ಅಡಿಗರಿಗೆ ಸರಕಾರದಿಂದ ಸಿಗಬೇಕಾಗಿದ್ದ ಗೌರವ ಸಿಕ್ಕಿಲ್ಲ ಎನ್ನುವ ಕೊರಗಿದೆ. ಅವರ ಹೆಸರಿನಲ್ಲಿ ಪ್ರಶಸ್ತಿ ಯೊಂದನ್ನು ಸ್ಥಾಪಿಸ ಬೇಕು ಎಂಬ ಆಗ್ರಹವಿದೆ. 2018ರಲ್ಲಿ ಅವರ ಜನ್ಮ ಶತಮಾನೋತ್ಸವವನ್ನು ಕೂಡ ಕಸಾಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಚರಿಸಲು ಮುಂದಾಗದಿರುವುದು ದುರಂತ.
ಹುಟ್ಟೂರಿನಲ್ಲಿ ಸ್ಮಾರಕವಿಲ್ಲ
ಇವರ ಹೆಸರಲ್ಲಿ ಹುಟ್ಟೂರು ಮೊಗೇರಿ ಯಲ್ಲಿಯೇ ಸ್ಮಾರಕ ನಿರ್ಮಿಸಬೇಕು ಎನ್ನುವ ಬೇಡಿಕೆ ಇದೆ. ಅದಕ್ಕಾಗಿ ಕೆರ್ಗಾಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾಗ ಗುರುತಿಸಿದ್ದು, ಶಾಸಕರ ನೇತೃತ್ವದಲ್ಲಿ ಥೀಂ ಪಾರ್ಕ್‌ಗೆ ಪ್ರಯತ್ನಗಳು ನಡೆಯುತ್ತಿವೆೆ. ಕೆರ್ಗಾಲಿನಲ್ಲಿ ಅವರ ಸ್ಮಾರಕ ವಾಚ ನಾಲಯವಿದೆ. ಬೆಂಗಳೂರಿನ ಕರೀಸಂದ್ರದಲ್ಲಿ ಅಡಿಗರ ಹೆಸರಲ್ಲಿ ಕಿರು ಉದ್ಯಾನವನವಿದೆ.
ಸಾಹಿತ್ಯ ಸಾಧನೆ
1946ರಲ್ಲಿ ಪ್ರಕಟಗೊಂಡ “ಭಾವತರಂಗ’ ಅವರ ಮೊದಲ ಕವನ ಸಂಕಲನ. ಭೂಮಿಗೀತ, ವರ್ಧಮಾನ, ಕಟ್ಟುವೆವು ನಾವು, ನಡೆದು ಬಂದ ದಾರಿ, ಚೆಂಡೆಮದ್ದಳೆ ಸೇರಿದಂತೆ 11 ಕವನ ಸಂಕಲನಗಳು, ಆಕಾಶದೀಪ, ಅನಾಥೆ ಎಂಬ ಕಾದಂಬರಿಗಳು, ಮಣ್ಣಿನ ವಾಸನೆ, ವಿಚಾರ ಪಥ, ಕನ್ನಡದ ಅಭಿಮಾನದಂತಹ ಅನೇಕ ವೈಚಾರಿಕ ಲೇಖನಗಳು ಅವರ ಸಾಹಿತ್ಯ ಕೃಷಿಯ ಫಲ.
ಸಾಹಿತ್ಯ ಸೇವೆಗಾಗಿ ಅಡಿಗರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕೇರಳದ ಪ್ರತಿಷ್ಠಿತ ಕುಮಾರ್ ಸಮ್ಮಾನ್, ಮಧ್ಯಪ್ರದೇಶ ಸರಕಾರದ ಕಬೀರ್ ಸಮ್ಮಾನ್ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.