Government: ಗಟ್ಟಿತನ ಇದ್ದುದರಿಂದಲೇ ಜಾತಿಗಣತಿ ವರದಿ ಸ್ವೀಕಾರ- ತಂಗಡಗಿ
ವರದಿಯ ಸಾಧಕ-ಬಾಧಕ ಚರ್ಚಿಸಿ ಸಂಪುಟದ ಮುಂದೆ ಮಂಡನೆ: ಸಚಿವ
Team Udayavani, Jul 2, 2024, 10:08 PM IST
ಬೆಂಗಳೂರು: ಜಾತಿ ಜನಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಶಿಫಾರಸುಗಳ ವರದಿಯನ್ನು ನಮಗೆ ಗಟ್ಟಿತನ ಇರುವುದರಿಂದಲೇ ಸ್ವೀಕಾರ ಮಾಡಿದ್ದೇವೆ. ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ಆಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, “ಈ ಹಿಂದೆ ಯಾವ ಸರ್ಕಾರವೂ ವರದಿಯನ್ನು ಸ್ವೀಕರಿಸುವ ಸಾಹಸಕ್ಕೆ ಮುಂದಾಗಲಿಲ್ಲ. ಸಿಎಂ ಸಿದ್ದರಾಮಯ್ಯ ಈ ನಿಟ್ಟಿನಲ್ಲಿ ಬದ್ಧತೆ ಪ್ರದರ್ಶಿಸಿದರು. ಗಟ್ಟಿತನ ಇರುವುದರಿಂದಲೇ ವರದಿ ಸ್ವೀಕರಿಸಿದ್ದೇವೆ. ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ಆಗಿದೆ. ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು’ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.