ಅವಿಭಜಿತ ದ.ಕ.ದಲ್ಲಿ ಸರಕಾರಿ ಮನೆ ನಿರ್ಮಾಣ ಕಡಿಮೆ
| ಹಕ್ಕುಪತ್ರ ನೀಡಿಕೆ, ನಿಯಮ ಸಡಿಲವಾದರೆ ಸೂರಿಲ್ಲದವರಿಗೆ ಅನುಕೂಲ
Team Udayavani, Jul 29, 2023, 11:30 PM IST
ಉಡುಪಿ: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಸ್ವಂತ ಮನೆ ಹೊಂದಿರದವರ ಬಳಿ ನಿವೇಶನವೂ ಇಲ್ಲದೆ ರಾಜ್ಯ ಸರಕಾರದ ವಿವಿಧ ವಸತಿ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಕಂದಾಯ ಇಲಾಖೆಯಿಂದ 94ಸಿಸಿ ಅಡಿಯಲ್ಲಿ ನಿವೇಶನ ಹಂಚಿಕೆ ಮಾಡಿದರೆ ಮನೆ ಮಂಜೂರು ಮಾಡಬಹುದಾಗಿದ್ದರೂ ನಿವೇಶನ ಹಂಚಿಕೆಗೆ ಸರಕಾರಿ ಜಮೀನಿನ ಕೊರತೆಯಿದೆ. ಹೀಗಾಗಿ ಸ್ವಂತ ಸೂರು ಹೊಂದುವ ಕರಾವಳಿಯ ವಸತಿ ರಹಿತರ ಕನಸು ನನಸಾಗುತ್ತಿಲ್ಲ.
ಇದಕ್ಕೆ ಕಾರಣವೂ ಇದೆ. ಕರಾವಳಿಯಲ್ಲಿ ಸರಕಾರಿ ಭೂಮಿ ಕಡಿಮೆಯಿದೆ. ಸರಕಾರಿ ಭೂಮಿಯಲ್ಲಿ ವಾಸ ಮಾಡಿಕೊಂಡಿರುವವರಿಗೆ ಮನೆ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ಹಕ್ಕು ಪತ್ರ ವಿತರಣೆ ಮಾಡುತ್ತಿಲ್ಲ. ಗ್ರಾಮೀಣ ಹಾಗೂ ನಗರ ಪ್ರದೇಶಕ್ಕೆ ಅನ್ವಯವಾಗುವಂತೆ 94ಸಿ/94ಸಿಸಿ ಅರ್ಜಿ ಇತ್ಯರ್ಥ ವೇಗ ಪಡೆದರೆ ಇನ್ನಷ್ಟು ಕುಟುಂಬಗಳಿಗೆ ಮನೆಯೂ ಸಿಗಲಿದೆ. ಹಾಗೆಯೇ ಗ್ರಾಮೀಣ ಭಾಗದಲ್ಲಿ ಈ ಯೋಜನೆಯಡಿ ವಸತಿ ಸಮುತ್ಛಯಗಳನ್ನು ನಿರ್ಮಿಸಲು ಸರಕಾರ ಅನುಮತಿ ನೀಡುವ ಸಂಬಂಧ ಕಂದಾಯ/ ವಸತಿ ಯೋಜನೆ ನಿಯಮ ಸಡಿಲಿಕೆ ಮಾಡಿದಲ್ಲಿ ಅನೇಕ ಕುಟುಂಬಕ್ಕೆ ಸೂರು ದೊರೆಯಲಿದೆ.
ಬಸವ ವಸತಿ, ಡಾ| ಅಂಬೇಡ್ಕರ್ ವಸತಿ, ದೇವರಾಜ ಅರಸು ವಸತಿ, ವಾಜಪೇಯಿ ವಸತಿ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಗಳಡಿ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4.42 ಲಕ್ಷ ಮನೆ ನಿರ್ಮಾಣವಾಗಿದ್ದರೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸಿಕ್ಕಿದ್ದು 12 ಸಾವಿರ ಮನೆ ಮಾತ್ರ.
2020-21, 2021-22 ಹಾಗೂ 2022-23ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ 1,702, ಬೆಂಗಳೂರು ಗ್ರಾಮಾಂತರದಲ್ಲಿ 5,098, ಉಡುಪಿ ಯಲ್ಲಿ 5,471 ಹಾಗೂ ದ.ಕ.ದಲ್ಲಿ 7,218 ಮನೆ ನಿರ್ಮಾಣ ಮಾಡಲಾಗಿದೆ.
ಆದರೆ ತುಮಕೂರಿನಲ್ಲಿ 25,803, ವಿಜಯಪುರದಲ್ಲಿ 28,353, ಮೈಸೂರಿನಲ್ಲಿ 22,504, ಕಲಬುರಗಿಯಲ್ಲಿ 23,587 ಮನೆಗಳು ನಿರ್ಮಾಣವಾಗಿದೆ.
ನಿವೇಶನ ಹಂಚಿಕೆಯೂ ಕಡಿಮೆ
ಮುಖ್ಯಮಂತ್ರಿಗಳ ಗ್ರಾಮೀಣ ಹಾಗೂ ನಗರ ನಿವೇಶನ ಯೋಜನೆಯಡಿಯಲ್ಲಿ ಮೂರು ವರ್ಷಗಳಲ್ಲಿ 26,382 ನಿವೇಶನ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಚಿಕ್ಕಬಳ್ಳಾಪುರದಲ್ಲಿ 11 ಸಾವಿರ, ದಾವಣಗೆರೆಯಲ್ಲಿ 3 ಸಾವಿರ, ಗದಗದಲ್ಲಿ 2 ಸಾವಿರ ಹಾಗೂ ಧಾರವಾಡದಲ್ಲಿ 1,200 ನಿವೇಶ ಹಂಚಿಕೆ ಮಾಡಲಾಗಿದೆ. ದ.ಕ. ಜಿಲ್ಲೆಗೆ ಕೇವಲ 352 ಹಾಗೂ ಉಡುಪಿಗೆ 153 ನಿವೇಶನ ಹಂಚಿಕೆ ಮಾಡಲಾಗಿದೆ.
ಮತ್ಸ್ಯಾಶ್ರಯ ಯೋಜನೆ
ಮತ್ಸ್ಯಾಶ್ರಯ ಯೋಜನೆಯಡಿಯಲ್ಲಿ 2022-23ನೇ ಸಾಲಿನಲ್ಲಿ ಉಡುಪಿಗೆ 720 ಹಾಗೂ ದ.ಕ.ಕ್ಕೆ 450 ಮನೆ ಹಂಚಿಕೆಯಾಗಿತ್ತು. ಆದರೆ ವಿವಿಧ ತಾಂತ್ರಿಕ ಸಮಸ್ಯೆಯಿಂದ ಹಂಚಿಕೆಯಾಗಿರುವ ಮನೆಗಳಲ್ಲಿ ನಿರ್ಮಾಣವಾಗಿರುವುದು ಭಾರೀ ಕಡಿಮೆ. ಅದಕ್ಕಿಂತ ಹಿಂದಿನ ಮೂರು ವರ್ಷಗಳಲ್ಲಿ ಈ ಯೋಜನೆಯಡಿ ಮನೆ ಹಂಚಿಕೆಯಾಗಿಲ್ಲ.
ಬಸವ ವಸತಿ ಯೋಜನೆ, ಡಾ| ಅಂಬೇಡ್ಕರ್ ವಸತಿ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಮನೆಗಳ ಲಭ್ಯತೆಯಿದೆ. ಆದರೆ ಮನೆ ಇಲ್ಲದವರಲ್ಲಿ ಸ್ವಂತ ಜಮೀನು ಇಲ್ಲದೆ ಇರುವುದರಿಂದ ಅವರಿಗೆ ಮನೆ ಹಂಚಿಕೆ ಮಾಡಲು ಬರುವುದಿಲ್ಲ. ಕಂದಾಯ ಇಲಾಖೆಯಿಂದ 94ಸಿಸಿ ಅಡಿಯಲ್ಲಿ ನಿವೇಶನ ಹಂಚಿಕೆ ಮಾಡಿದರೆ ತತ್‌ಕ್ಷಣವೇ ಮನೆ ನೀಡಬಹುದು. ಆದರೆ ನಿವೇಶನ ಹಂಚಿಕೆಗೆ ಸರಕಾರಿ ಜಾಗದ ಕೊರತೆಯಿದೆ. ಗ್ರಾಮೀಣ ಭಾಗದಲ್ಲಿ ಬಹುಮಹಡಿ ವಸತಿ ಸಮುತ್ಛಯ ನಿರ್ಮಾಣಕ್ಕೆ ಸರಕಾರ ಅನುಮತಿ ನೀಡುವುದಿಲ್ಲ.
– ಪ್ರಸನ್ನ ಎಚ್., ಉಡುಪಿ ಜಿ.ಪಂ. ಸಿಇಒಇ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.