ಸರಕಾರಿ ಜಾಗ ಕಬಳಿಕೆ ದೂರು; ಬೇಲಿ ತೆರವು ಮಾಡಿದ ಅಧಿಕಾರಿಗಳು
Team Udayavani, Aug 12, 2023, 12:48 AM IST
ಸವಣೂರು: ಸರ್ವೆ ಗ್ರಾಮದ ಸೊರಕೆ ಸಮೀಪದ ಕರ್ಮಿನಡ್ಕ ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರು ಸರಕಾರಿ ಜಾಗ ಕಬಳಿಸಲು ಅಕ್ರಮವಾಗಿ ಬೇಲಿ ಹಾಕಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಗ್ರಾಮ ಆಡಳಿತಾಧಿಕಾರಿ ಮತ್ತು ಕೆಸಿಡಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೇಲಿ ತೆರವುಗೊಳಿಸಿ ತಂತಿ ಹಾಗೂ ಕಂಬವನ್ನು ಜಪ್ತಿ ಮಾಡಿದ ಘಟನೆ ಆ. 10ರಂದು ನಡೆದಿದೆ.
ಕರ್ಮಿನಡ್ಕದಲ್ಲಿರುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮಕ್ಕೆ ಸೇರಿದ ಜಾಗವನ್ನು ಕಬಳಿಸಲು ಯಾರೋ ಬೇಲಿ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕೆಸಿಡಿಸಿ ಕಿರಿಯ ಕ್ಷೇತ್ರ ಸಹಾಯಕ ಶರತ್ ಪಿ.ಎನ್. ಹಾಗೂ ಸಿಬಂದಿ ಮತ್ತು ಗ್ರಾಮ ಸಹಾಯಕ ಉಮೇಶ್ ಕಾವಡಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಈ ವೇಳೆ ಸುಮಾರು 2 ಎಕರೆಯಷ್ಟು ಜಾಗವನ್ನು ಕಬಳಿಸಲು ಯತ್ನಿಸಲಾಗಿತ್ತು ಎನ್ನುವ ಮಾಹಿತಿ ತಿಳಿದು ಬಂದಿತ್ತು.
ಬೇಲಿ ಹಾಕಲು ಅಳವಡಿಸಿದ್ದ 17 ಕಂಬ ಹಾಗೂ ತಂತಿಯನ್ನು ಕೆಸಿಡಿಸಿ ಅಧಿಕಾರಿ ಮತ್ತು ಸಿಬಂದಿ ವರ್ಗದವರು ಜಪ್ತಿ ಮಾಡಿಕೊಂಡೊಯ್ದಿದ್ದಾರೆ. ಅಧಿಕಾರಿಗಳು ಭೇಟಿ ನೀಡುವ ವೇಳೆ ಮುಂಡೂರು ಗ್ರಾ.ಪಂ ಸದಸ್ಯ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ ಸ್ಥಳದಲ್ಲಿದ್ದು ಸಹಕಾರ ನೀಡಿದರು.
ಕರ್ಮಿನಡ್ಕದಲ್ಲಿ ಕೆಸಿಡಿಸಿ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಣಕ್ಕೆ ಮುಂದಾಗಿರುವ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ನಾವು ಕಂಬ ಮತ್ತು ತಂತಿಯನ್ನು ಸೀಝ್ ಮಾಡಿದ್ದೇವೆ. ತನಿಖೆ ನಡೆಸುತ್ತೇವೆ.ಕೆಸಿಡಿಸಿಗೆ ಸೇರಿದ ಜಾಗವನ್ನು ಯಾರೇ ಕಬಳಿಸಲು ಮುಂದಾದರೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೆಸಿಡಿಸಿ ಕಿರಿಯ ಕ್ಷೇತ್ರ ಸಹಾಯಕ ಶರತ್ ಪಿ.ಎನ್. ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.