ಪಾಕ್ ಪ್ರವಾಸ ನಿರ್ಧರಿಸುವುದು ನಾವಲ್ಲ,ಸರಕಾರ: ರೋಜರ್ ಬಿನ್ನಿ
Team Udayavani, Oct 21, 2022, 7:00 AM IST
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಪಾಕಿಸ್ಥಾನ ಪ್ರವಾಸವನ್ನು ನಿರ್ಧರಿಸುವುದು ಬಿಸಿಸಿಐ ಅಲ್ಲ, ಅದು ಕೇಂದ್ರ ಸರಕಾರ ಎಂಬುದಾಗಿ ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
2023ರ ಏಷ್ಯಾ ಕಪ್ ಪಂದ್ಯಾವಳಿ ಯಲ್ಲಿ ಪಾಲ್ಗೊಳ್ಳಲು ಭಾರತ ತಂಡ ಪಾಕಿ ಸ್ಥಾನಕ್ಕೆ ಬಾರದೇ ಹೋದರೆ ನಮ್ಮ ತಂಡ ವಿಶ್ವಕಪ್ ಆಡಲು ಭಾರತಕ್ಕೆ ತೆರಳದು ಎಂಬುದಾಗಿ ಪಿಸಿಬಿ ಹೇಳಿಕೆಯೊಂದನ್ನು ನೀಡಿತ್ತು. ಇದಕ್ಕೆ ಪ್ರತಿಕ್ರಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಭಾರತ ತಂಡ ಏಷ್ಯಾ ಕಪ್ ಆಡಲು ಪಾಕಿಸ್ಥಾನಕ್ಕೆ ತೆರಳದು; ಇದನ್ನು ತಟಸ್ಥ ತಾಣದಲ್ಲಿ ನಡೆಸುವುದಾದರೆ ಮಾತ್ರ ಭಾರತ ಆಡಲಿದೆ’ ಎಂದಿದ್ದರು. ಇದೀಗ ಬಿಸಿಸಿಐ ಅಧ್ಯಕ್ಷರು ಪ್ರತಿಕ್ರಿಯೆ ನೀಡಿದ್ದಾರೆ.
“ಕ್ರಿಕೆಟ್ ತಂಡವೊಂದು ದೇಶ ದಿಂದ ಹೊರಹೋಗಹಲು ಅಥವಾ ನಮ್ಮ ದೇಶಕ್ಕೆ ಬರಲು ಮೊದಲು ಬೇಕಿರುವುದು ಸರಕಾರದ ಸಮ್ಮತಿ. ಇಲ್ಲಿ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಒಮ್ಮೆ ಸರಕಾರ ಅನುಮತಿ ನೀಡಿದರೆ ಕ್ರಿಕೆಟ್ ಮಂಡಳಿ ಮುಂದಿನ ಹೆಜ್ಜೆ ಇಡಲಿದೆ. ಮುಂದಿನ ವರ್ಷದ ಪಾಕ್ ಪ್ರವಾಸ ಕುರಿತಂತೆ ನಾವಿನ್ನೂ ಸರಕಾರದೊಂದಿಗೆ ಚರ್ಚಿ ಸಿಲ್ಲ’ ಎಂದು 1983ರ ವಿಶ್ವಕಪ್ ಹೀರೋ ರೋಜರ್ ಬಿನ್ನಿ ಹೇಳಿದರು.
ಪಾಕಿಸ್ಥಾನ ಆತಿಥ್ಯದ ಏಷ್ಯಾ ಕಪ್ 2023ರ ಸೆಪ್ಟಂಬರ್‌ನಲ್ಲಿ ನಡೆಯಲಿದೆ. ಅನಂತರ ಭಾರತದಲ್ಲಿ ಏಕದಿನ ವಿಶ್ವಕಪ್ ಏರ್ಪಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.