ಚಿರತೆ ಪುನರ್ವಸತಿ ಕೇಂದ್ರ ತೆರೆಯಲು ಸರ್ಕಾರ ಕ್ರಮ
Team Udayavani, Feb 22, 2023, 5:40 AM IST
ವಿಧಾನಸಭೆ: ನಾಗರಿಕ ಪ್ರಪಂಚಕ್ಕೆ ತೊಂದರೆ ನೀಡುವ ಚಿರತೆಗಳನ್ನು ಹಿಡಿದು ಪುನರ್ವಸತಿ ಕೇಂದ್ರ ಅಥವಾ ಪ್ರತ್ಯೇಕ ಅಭಯಾರಣ್ಯ ತೆರೆಯಲು ಕ್ರಮಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ವಿಧಾನಸಭೆಗೆ ತಿಳಿಸಿದೆ.
ಮಂಡ್ಯ ಜಿಲ್ಲೆಯಲ್ಲಿ ಚಿರತೆ ದಾಳಿ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸದನಕ್ಕೆ ಈ ಉತ್ತರ ನೀಡಿದ್ದಾರೆ.
ಸರ್ಕಾರ ನೀಡಿರುವ ಮಾಹಿತಿ ಪ್ರಕಾರವೇ 2021-22ರಲ್ಲಿ ಮಂಡ್ಯ ಜಿಲ್ಲೆಯೊಂದರಲ್ಲೇ ಚಿರತೆ ದಾಳಿಯಿಂದ 410 ಜಾನುವಾರು ಹತ್ಯೆಯಾದ ಪ್ರಕರಣ ದಾಖಲಾಗಿದೆ. ಚಿರತೆಗಳು ಕಬ್ಬಿನ ಗದ್ದೆಯಲ್ಲಿ ಮರಿ ಹಾಕುತ್ತಿದ್ದು ರೈತರ ಮೇಲೆ ದಾಳಿ ಮಾಡುತ್ತಿವೆ.
ಜಾನುವಾರುಗಳನ್ನು ಕೊಲ್ಲುತ್ತಿವೆ. ಚಿರತೆ ಕಾಣಿಸಿಕೊಳ್ಳುತ್ತಿದ್ದು ಅರಣ್ಯ ಇಲಾಖೆಯವರನ್ನು ಕಳಿಸಿ ಎಂದು ಜನರಿಂದ ಪ್ರತಿ ದಿನ 6-7 ಕರೆಗಳು ಬರುತ್ತಿವೆ ಎಂದು ಶ್ರೀಕಂಠಯ್ಯ ಕಳವಳ ವ್ಯಕ್ತಪಡಿಸಿದಾಗ, 60 ಸಿಬ್ಬಂದಿ ಇರುವ ಚಿರತೆ ಟಾಸ್ಕ್ ಫೋರ್ಸ್ ಮಾಡಿದ್ದು, 19 ಚಿರತೆಗಳನ್ನು ಮಂಡ್ಯ ಭಾಗದಲ್ಲಿ ಈಗಾಗಲೇ ಹಿಡಿಯಲಾಗಿದೆ. ಚಿರತೆ ಮೇಲೆ ಏಕಾಏಕಿ ಗುಂಡು ಹಾರಿಸಲು ಸಾಧ್ಯವಿಲ್ಲ. ಹೀಗಾಗಿ ಹಿಡಿದು, ಅಭಯಾರಣ್ಯ, ಪುನರ್ ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಪಿಲಿಕುಳದಲ್ಲಿ ನ. 17ರಂದು ಕಂಬಳ ಆಯೋಜನೆ ಇಲ್ಲ
Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ
Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ
JDS protest: ಎಚ್‌ಡಿಕೆ ಕರಿಯ: ಜಮೀರ್ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ
Congress: “40 ಪರ್ಸೆಂಟ್ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.