Politics: ರೈತರ ಮೇಲೆ ಕಾಳಜಿ ಇಲ್ಲದ ಸರಕಾರ: ಕೋಟ ಶ್ರೀನಿವಾಸ್ ಪೂಜಾರಿ ಆಕ್ರೋಶ
Team Udayavani, Jan 25, 2024, 6:10 PM IST
ಉಡು ಪಿ: ಬರ ಪರಿಹಾರ ವಿಷಯದಲ್ಲಿ ರಾಜ್ಯ ಕಾಂಗ್ರೆೆಸ್ ಸರಕಾರ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರಕಾರವು ಕೇಂದ್ರ ಸರಕಾರದ ವಿರುದ್ದ ಟೀಕೆ ಮಾಡುತ್ತ ಕಾಲಹರಣ ಮಾಡುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ್ದ ಯುಪಿಎ ಸರಕಾರವು ಎನ್‌ಡಿಆರ್‌ಎಫ್ ಮೂಲಕ ರಾಜ್ಯಕ್ಕೆೆ ಪರಿಹಾರ ನೀಡಿದ್ದು 3,233 ಕೋ. ರೂ. 2014ರ ಅನಂತರ ಎನ್‌ಡಿಎ ಸರಕಾರ ಎನ್‌ಡಿಆರ್‌ಎಫ್ ಮೂಲಕ 11,603 ಕೋ. ರೂ. ಪರಿಹಾರ ಮೊತ್ತವನ್ನು ನೀಡಿ ರಾಜ್ಯದ ಜನತೆಯ ಸಂಕಷ್ಟಕ್ಕೆೆ ಸ್ಪಂದಿಸಿದೆ. ರಾಜ್ಯದ ಎಸ್‌ಡಿಆರ್‌ಎಫ್‌ಗೆ ಯುಪಿಎ ನೀಡಿದ್ದು 812 ಕೋ. ರೂ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ 2,557 ಕೋ. ರೂ. ಪರಿಹಾರ ನೀಡಿದೆ. ಕೇಂದ್ರ ಸರಕಾರವು ರಾಜ್ಯದ ಜನರು, ರೈತರ ಹಿತವನ್ನು ಕಾಪಾಡಿರುವುದು ಇಲಾಖೆಯ ಈ ಅಂಶಗಳೇ ಹೇಳುತ್ತಿವೆ. ಆದರೆ ರಾಜ್ಯ ಸರಕಾರ ಅಲ್ಪಸಂಖ್ಯಾತರಿಗೆ 10 ಸಾವಿರ ಕೋ. ರೂ ಅನುದಾನ ಮೀಸಲಿಡುವ ಹೇಳಿಕೆ ನೀಡಿ ರಾಜ್ಯ ರೈತರನ್ನು ನಿರ್ಲಕ್ಷ್ಯ ಮಾಡುತ್ತಾರೆ. ಬರ ಪರಿಹಾರಕ್ಕೆೆ ಕೇಂದ್ರ ಸರಕಾರವನ್ನು ಟೀಕಿಸುತ್ತ ಜವಾಬ್ಧಾರಿ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವ ಕಾಂಗ್ರೆೆಸ್ ಸರಕಾರವು ಆಡಳಿತ ವ್ಯವಸ್ಥೆೆಯ ಸಾಕಷ್ಟು ಲೋಪ ಒಳಗೊಂಡಿದೆ ಎಂದರು.
ಶೆಟ್ಟರ್ ಆಗಮನದಿಂದ ಸಂತೋಷ, ಸಮಾಧಾನವಾಗಿದೆ
ನಮ್ಮ ಪಕ್ಷದ ಸಿದ್ದಾಂತದ ಜೊತೆ ಸುದೀರ್ಘಕಾಲ ಗುರುತಿಸಿಕೊಂಡಿದ್ದ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರಳುತ್ತಾರೆ ಎಂಬ ನಿರೀಕ್ಷೆೆ ಇತ್ತು. ಶೆಟ್ಟರ್‌ರಂತಹ ಸೈದ್ಧಾಂತಿಕ ಹಿನ್ನೆೆಲೆಯವರಿಗೆ ಬೇರೆ ಪಕ್ಷ ಒಗ್ಗುವುದಿಲ್ಲ. ಪಕ್ಷದ ಶಕ್ತಿ ವೃದ್ಧಿಯಾಗುತ್ತದೆ ನಮ್ಮ ವಿಶ್ವಾಸ ಹೆಚ್ಚಾಗಿದೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ಶೆಟ್ಟರ್ ಮರು ಸೇರ್ಪಡೆಯಿಂದ ಮತ್ತಷ್ಟು ನಾಯಕರು ಬಿಜೆಪಿಗೆ ಮರಳುತ್ತಾರೆ. ಜನಸಂಘ ಕಾಲದಿಂದಲೂ ಬಿಜೆಪಿಯನ್ನು ಕಟ್ಟಿದವರು ಅವರ ಮರು ಆಗಮನದಿಂದ ಸಮಾಧಾನ, ಸಂತೋಷವಾಗಿದೆ. ಶೆಟ್ಟರ್ ಪಕ್ಷಕ್ಕೆೆ ಮರಳಿದ ಕ್ರೆೆಡಿಟ್ ಪಕ್ಷಕ್ಕೆೆ ಸಲ್ಲುತ್ತದೆ. ಸಣ್ಣಪುಟ್ಟ ಮುನಿಸಿದ್ದರೂ ಸಿದ್ಧಾಂತಕ್ಕೆೆ ಬದ್ಧತೆ ಇದೆ ಎಂಬುದಕ್ಕೆೆ ಶೆಟ್ಟರ್ ಸಾಕ್ಷಿ ಎಂದು ಬಣ್ಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ
Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ
Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್ ಶೆಟ್ಟಿ
Ajekar Case: ನ್ಯಾಯಾಂಗ ಬಂಧನ ವಿಸ್ತರಣೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
MUST WATCH
ಹೊಸ ಸೇರ್ಪಡೆ
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.