ಶತಮಾನೋತ್ತರ ಶಾಲೆಯಲ್ಲಿದೆ ಹಲವು ಕೊರತೆಗಳು

ಶಿರೂರು ಸ.ಮಾ.ಹಿ.ಪ್ರಾ. ಶಾಲೆ

Team Udayavani, Oct 2, 2021, 5:46 AM IST

ಶತಮಾನೋತ್ತರ ಶಾಲೆಯಲ್ಲಿದೆ ಹಲವು ಕೊರತೆಗಳು

ಬೈಂದೂರು: ಶಿರೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು 1898ರಲ್ಲಿ ಆರಂಭಗೊಂಡಿತು. ಅತ್ಯಾಕರ್ಷಕ ವಿನ್ಯಾಸದ ಒಳಾಂಗಣ, ಮಳೆ ನೀರು ಶೇಖರಣೆ ವ್ಯವಸ್ಥೆಗಳಿಂದ ಶಿರೂರು ಶಾಲೆಯು ಇತರ ಶಾಲೆಗಳಿಗೂ ಮಾದರಿಯಾಗಿದೆ.

ಮಾದರಿ ಶಾಲೆ
ಶಾಲೆಯಲ್ಲಿ ಸುವರ್ಣ ಜಲ ಯೋಜನೆ, ಮಳೆ ನೀರು ಸಂಗ್ರ ಹಣೆ ಘಟಕ ನಿರ್ಮಿಸಲಾಗಿದೆ. ವಾಹನದ ವ್ಯವಸ್ಥೆ, ಉತ್ತಮ ಪೀಠೊಪಕರಣ, ಆಕರ್ಷಕ ಗೋಡೆ ಚಿತ್ತಾರ, ಸುಂದರ ಪ್ರಾಂಗಣ, ಸ್ಮಾರ್ಟ್‌ ಕ್ಲಾಸ್‌, ಶೌಚಾಲಯ, ಎಜುಸ್ಯಾಟ್‌, ಕಲಿಕಾ ಸಾಮಗ್ರಿಗಳ ಜತೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.

ಶಾಲೆಗೆ ವಾಹನದ ವ್ಯವಸ್ಥೆ
ಈ ಶಾಲೆಗೆ ಶಿರೂರು ಕರಾವಳಿ ಮೇಲ್ಪಂಕ್ತಿಯವರೆಗಿನ ವಿದ್ಯಾರ್ಥಿಗಳು ಬರುವುದರಿಂದ ಶಿಕ್ಷಕರ ಮುತುವರ್ಜಿ ಹಾಗೂ ಶಿಕ್ಷಣಾಭಿಮಾನಿಗಳ ಪ್ರೋತ್ಸಾಹದಿಂದ 20 ಲಕ್ಷ ರೂ. ವೆಚ್ಚ ದಲ್ಲಿ ವಾಹನ ಖರೀದಿಸಲಾಗಿದೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ
ಕಳೆದ ವರ್ಷ 1ರಿಂದ 8ರ ವರೆಗೆ 232 ಮತ್ತು ಎಲ್‌ ಕೆಜಿಯಲ್ಲಿ 50 ವಿದ್ಯಾರ್ಥಿಗಳಿದ್ದರು.2020-21ನೇ ಸಾಲಿನಲ್ಲಿ ಒಂದನೇ ತರಗತಿಯಲ್ಲಿ 36 ವಿದ್ಯಾರ್ಥಿಗಳು, ಎರಡನೇ ತರಗತಿಯಲ್ಲಿ 33 ವಿದ್ಯಾರ್ಥಿ ಗಳಿದ್ದಾರೆ. ಈ ವರ್ಷ 1ನೇ ತರಗತಿಯಲ್ಲಿ 59, 2ನೇ ತರಗತಿಯಲ್ಲಿ 45, 3ನೇ ತರಗತಿಯಲ್ಲಿ 40, 4ನೇ ತರಗತಿಯಲ್ಲಿ 33, 5 ನೇ ತರಗತಿಯಲ್ಲಿ 24, 6ನೇ ತರಗತಿಯಲ್ಲಿ 44, 7ನೇ ತರಗತಿ ಯಲ್ಲಿ 42, 8ನೇ ತರಗತಿಯಲ್ಲಿ 10 ವಿದ್ಯಾಥಿಗಳಿದ್ದಾರೆ. ಶಾಲೆ ಯಲ್ಲಿ 10ನೇ ತರಗತಿ ಯವರೆಗೆ ಶಿಕ್ಷಣ ನೀಡುತ್ತಿದ್ದು ಒಟ್ಟು 370 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ:ವಿಜಯಪುರದಲ್ಲಿ ಲಘು ಭೂಕಂಪ : ಭಯಪಡುವ ಅಗತ್ಯವಿಲ್ಲ

ಬೇಡಿಕೆ
ಶಾಲೆಯಲ್ಲಿ ಆರು ತರಗತಿ ಕೋಣೆಗಳ ಕೊರತೆ ಇದೆ. ಪ್ರಯೋಗಾಲಯ, ಗ್ರಂಥಾಲಯ ಬೇಡಿಕೆ ಇದೆ. ಮಕ್ಕಳಿಗೆ ಬಾಲವನ, ಒಳಾಂಗಣ ಕ್ರೀಡಾಂಗಣದ ಅಗತ್ಯವಿದೆ.

ಓರ್ವ ಶಿಕ್ಷಕರ ಕೊರತೆ
ಈ ಶಾಲೆಗೆ ಒಟ್ಟು ಹತ್ತು ಶಿಕ್ಷಕರ ಆವಶ್ಯಕತೆ ಇದ್ದು, ಪ್ರಸ್ತುತ ಎಂಟು ಖಾಯಂ ಹಾಗೂ ಒಬ್ಬರು ನಿಯೋಜಿತ ಅಧ್ಯಾಪಕರಿದ್ದಾರೆ. ಓರ್ವ ಶಿಕ್ಷಕರ ಕೊರತೆ ಇದೆ.

ತರಗತಿ ಕೋಣೆಗಳು ಅಗತ್ಯ
ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ವಿದ್ಯಾರ್ಥಿಗಳನ್ನು ಆಕರ್ಷಿಸುವಂತಹ ಗುಣಮಟ್ಟದ ಶಿಕ್ಷಣ ಮತ್ತು ಶೈಕ್ಷಣಿಕ ಸೇವೆ ನೀಡಲಾಗುತ್ತಿದೆ. ಪ್ರಸ್ತುತ ಶಾಲೆಗೆ ತರಗತಿ ಕೋಣೆಗಳು ಅಗತ್ಯವಿದ್ದು ಅದನ್ನು ಒದಗಿಸಲು ಇಲಾಖೆ ಕ್ರಮ ವಹಿಸಬೇಕಿದೆ.
-ರ‌ವೀಂದ್ರ ಶೆಟ್ಟಿ ಹೊಸ್ಮನೆ, ಅಧ್ಯಕ್ಷರು ಹಳೆ ವಿದ್ಯಾರ್ಥಿಗಳ ಸಂಘ

ಗುಣಮಟ್ಟ ಹೆಚ್ಚಳ
ಶಿಕ್ಷಕರು, ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ, ಎಸ್‌.ಎಂ.ಡಿ.ಸಿ. ಮತ್ತು ಪಾಲಕರು ಎಲ್ಲ ಕಾರ್ಯಕ್ರಮಗಳಿಗೂ ಸೂಕ್ತ ಸಲಹೆ ಹಾಗೂ ಪ್ರೋತ್ಸಾಹ ನೀಡಿರುವುದರಿಂದ ಶಾಲೆಯ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗಿದೆ. ಪ್ರಸ್ತುತ ಅಗತ್ಯ ಕೊಠಡಿಗಳು ಮಂಜೂರಾಗಬೇಕಿದೆ.
-ಶಂಕರ ಶಿರೂರು, ಮುಖ್ಯೋಪಾಧ್ಯಾಯರು

ಅನುದಾನ ಅಗತ್ಯ
ಶಾಲೆಯು ಹೆತ್ತ ವರು ಹಾಗೂ ಶಿಕ್ಷಣಾಭಿಮಾನಿಗಳ ಸಹಕಾರದಲ್ಲಿ ಉತ್ತಮ ಶೈಕ್ಷಣಿಕ ವ್ಯವಸ್ಥೆ ಹೊಂದಿದೆ. ಸರಕಾರ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದರೆ ಶಾಲೆಗೆ ಅನುಕೂಲವಾಗುತ್ತದೆ.
-ಚಂದ್ರ ಶೇಖರ ಮೇಸ್ತ, ಎಸ್‌.ಡಿ.ಎಂ.ಸಿ. ಅಧ್ಯಕ್ಷ

– ಅರುಣ ಕುಮಾರ್‌ ಶಿರೂರು

ಟಾಪ್ ನ್ಯೂಸ್

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.