ವಾಯವ್ಯ ಸಾರಿಗೆ ನೌಕರರಿಗೆ ಧಮಾಕಾ

ಶಿಸ್ತು-ಗೈರು ಹಾಜರಿ ತಗಾದೆಗಳಿಗೆ ಮುಕ್ತಿ ; 15 ದಿನಗಳಲ್ಲಿ 5869 ಪ್ರಕರಣ ಇತ್ಯರ್ಥ

Team Udayavani, Jun 15, 2022, 10:03 AM IST

1

ಹುಬ್ಬಳ್ಳಿ: ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ವಾಯವ್ಯ ಸಾರಿಗೆ ಸಂಸ್ಥೆ ನೌಕರರ ಮೇಲಿನ ಶಿಸ್ತು ಹಾಗೂ ಗೈರು ಹಾಜರಿ ಪ್ರಕರಣಗಳಿಗೆ ಏಕಕಾಲಕ್ಕೆ ಮುಕ್ತಿ ನೀಡಿದ್ದು, 15 ದಿನಗಳಲ್ಲಿ 5869 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಏಕಕಾಲಕ್ಕೆ ಇಷ್ಟೊಂದು ಪ್ರಕರಣಗಳನ್ನು ಏಕರೂಪದ ಕಡಿಮೆ ದಂಡ ವಿಧಿಸಿ ಇತ್ಯರ್ಥಗೊಳಿಸಿದ್ದು ಸಾರಿಗೆ ಸಂಸ್ಥೆ ಇತಿಹಾಸದಲ್ಲಿ ಮೊದಲು ಎನ್ನಲಾಗಿದೆ.

ಸಂಸ್ಥೆಯ ನೌಕರರ ಮಾನಸಿಕ ಆತ್ಮಸ್ಥೈರ್ಯ ಹೆಚ್ಚಿಸಿ ಆಡಳಿತ ವರ್ಗ ಹಾಗೂ ನೌಕರರ ನಡುವಿನ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಬಾಕಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನಿರ್ಧರಿಸಲಾಗಿತ್ತು. ಅದರಂತೆ ಹಲವಾರು ವರ್ಷಗಳಿಂದ ವಿವಿಧ ಕಾರಣಗಳಿಂದ ವಿಭಾಗ ಹಾಗೂ ಘಟಕ ಮಟ್ಟದಲ್ಲಿ ಬಾಕಿ ಉಳಿದಿದ್ದ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಪ್ರಮುಖವಾಗಿ ಸಂಸ್ಥೆಯ ನೌಕರರಲ್ಲಿ ದೊಡ್ಡ ಪಿಡುಗಾಗಿರುವ ಗೈರು ಹಾಜರಿಯ-3777 ಹಾಗೂ ಶಿಸ್ತು ಪ್ರಕರಣ-2092 ಸೇರಿ ಒಟ್ಟು 5869 ಪ್ರಕರಣಗಳನ್ನು ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ ಬಗೆಹರಿಸಲಾಗಿದೆ. ತರಬೇತಿ, ಪರೀಕ್ಷಾರ್ಥ, ಕಾಯಂ ನೌಕರರಿಗೆ ಈ ಸೌಲಭ್ಯ ದೊರೆತಿದೆ.

ಸೇವಾ ವಜಾ ಪ್ರಕರಣಗಳಿಗೂ ಮುಕ್ತಿ: ಸಂಸ್ಥೆಯ ವ್ಯಾಪ್ತಿಯ 9 ವಿಭಾಗಗಳು ಹಾಗೂ 54 ಘಟಕ, ಪ್ರಾದೇಶಿಕ ಕಾರ್ಯಾಗಾರ ಸೇರಿ ಚಾಲಕ, ನಿರ್ವಾಹಕರು, ತಾಂತ್ರಿಕ, ಆಡಳಿತ ಸಿಬ್ಬಂದಿ ಸೇರಿ (ಅಧಿಕಾರಿಗಳನ್ನು ಹೊರತುಪಡಿಸಿ) ಗೈರು ಹಾಜರಿ ಪ್ರಕರಣಗಳಲ್ಲಿ ವಿಭಾಗ ಮಟ್ಟದಲ್ಲಿ 2870, ಘಟಕ ವ್ಯಾಪ್ತಿಯಲ್ಲಿ 1210 ಸೇರಿ 4080 ಪ್ರಕರಣಗಳಿದ್ದವು. ಶಿಸ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಭಾಗ ಮಟ್ಟದಲ್ಲಿ 2345 ಹಾಗೂ ಘಟಕ ವ್ಯಾಪ್ತಿಯಲ್ಲಿ 433 ಸೇರಿದಂತೆ ಒಟ್ಟು 2778 ಪ್ರಕರಣಗಳಿದ್ದವು. ಇವುಗಳಲ್ಲಿ ಬಹುತೇಕ ಪ್ರಕರಣಗಳಲ್ಲಿ ನೌಕರರನ್ನು ಅಮಾನತು, ವಜಾಗೊಳಿಸಬಹುದಾಗಿತ್ತು. ಆದರೆ ನೌಕರರು ಹಾಗೂ ಸಂಸ್ಥೆಯ ಹಿತ ದೃಷ್ಟಿಯಿಂದ ಅತ್ಯಂತ ಕಡಿಮೆ ದಂಡ ವಿಧಿಸಿ ನೌಕರರಿಗೆ ಉತ್ತೇಜನ ನೀಡಲಾಗಿದೆ.

ಅತ್ಯಂತ ಕಡಿಮೆ ದಂಡದ ಶಿಕ್ಷೆ: ಹಲವಾರು ವರ್ಷಗಳಿಂದ ವಿವಿಧ ಕಾರಣಗಳಿಗಾಗಿ ಕೆಲ ಪ್ರಕರಣಗಳಿಗೆ ಮುಕ್ತಿ ಕಂಡಿರಲಿಲ್ಲ. ಹೀಗಾಗಿ 6 ತಿಂಗಳಿಗಿಂತ ಕಡಿಮೆ ಅವಧಿಯ ಗೈರು ಹಾಜರಿ ಪ್ರಕರಣಗಳಿಗೆ 500 ರೂ. ಮೀರದಂತೆ, 6-9 ತಿಂಗಳ ಗೈರಿದ್ದರೆ 1500 ರೂ. ದಂಡ ವಿಧಿಸಿ ಆ ಅವಧಿಯನ್ನು ಗೈರು ಹಾಜರಿ ಎಂದು ಇತ್ಯರ್ಥಪಡಿಸಲಾಗಿದೆ. ನಿಯಮ-22ರಲ್ಲಿ ಶಿಸ್ತು ಪ್ರಕರಣಗಳನ್ನು ಘಟಕ ವ್ಯಾಪ್ತಿಯಲ್ಲಿ 100 ರೂ., ವಿಭಾಗ ಮಟ್ಟದಲ್ಲಿ 500 ರೂ. ಮೀರದಂತೆ ಏಕ ರೂಪದ ದಂಡ ವಿಧಿಸಿ ಪ್ರಕರಣಗಳನ್ನು ಕೈ ಬಿಡಲಾಗಿದೆ.

ಉಳಿದವಕ್ಕೂ ಕಾಲಮಿತಿ ನಿಗದಿ: ನ್ಯಾಯಾಲಯದಲ್ಲಿರುವ ಹಾಗೂ ಇಲಾಖೆ ವಿಚಾರಣೆ ಗಂಭೀರ ಸ್ವರೂಪದ ಪ್ರಕರಣಗಳು ಸೇರಿದಂತೆ ಗೈರು ಹಾಜರಿ-303 ಹಾಗೂ ಶಿಸ್ತು-703 ಪ್ರಕರಣಗಳು ಬಾಕಿ ಉಳಿದಿವೆ. ಕೋರ್ಟ್‌ನಲ್ಲಿರುವ ಪ್ರಕರಣಗಳನ್ನು ಹೊರತುಪಡಿಸಿ ಸಂಸ್ಥೆಯ ನಿಯಮ-23ರ ಅಡಿಯ ಪ್ರಕರಣಗಳನ್ನು ವಿಚಾರಣೆ ಕೈಗೊಂಡು ನಿಯಮಾವಳಿ ಪ್ರಕಾರ ದಂಡ ವಿಧಿಸಿ ಜುಲೈ ಅಂತ್ಯದೊಳಗೆ ಬಗೆಹರಿಸಲು ಗಡುವು ನೀಡಲಾಗಿದೆ. ಈ ಕ್ರಮದಿಂದಾಗಿ ಈ ಪ್ರಕರಣಗಳ ಮೇಲೆ “ವ್ಯವಹಾರ’ ಕುದುರಿಸುವ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ದೊಡ್ಡ ಹಿನ್ನಡೆಯಾಗಿದೆ.

ಇತ್ಯರ್ಥಕ್ಕೂ ಕಾಲಮಿತಿ ಗಡುವು:

ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಶಿಸ್ತು ಪ್ರಕರಣಗಳನ್ನು ಬಾಕಿ ಉಳಿಸುವುದು, ಉದ್ದೇಶ ಪೂರ್ವಕವಾಗಿ ವಿಳಂಬ ಹಿಂದಿನಿಂದಲೂ ನಡೆದು ಬಂದ ಕೆಟ್ಟ ಸಂಪ್ರದಾಯ. ಪ್ರಕರಣದ ಹೆಸರಲ್ಲಿ ಪರೀಕ್ಷಾರ್ಥ ಹಾಗೂ ತರಬೇತಿ ಮುಂದೂಡುವುದು, ಬಡ್ತಿಗೆ ಕೊಕ್ಕೆ ಹಾಕುವಂತಹ ಇಂತಹ ಕೆಲಸಗಳು ವ್ಯವಸ್ಥಿತವಾಗಿ ನಡೆಯುತ್ತಿದ್ದವು. ಕೆಲವೊಮ್ಮೆ ಸಣ್ಣ ತಪ್ಪಿಗೂ ದೊಡ್ಡ ಬೆಲೆ ತೆರುವಂತಹ ಪರಿಸ್ಥಿತಿ ನೌಕರರು ಹಾಗೂ ಅಧಿಕಾರಿಗಳು ಅನುಭವಿಸುತ್ತಿದ್ದರು. ಇದೀಗ ಈ ಕೆಟ್ಟ ಚಾಳಿಗೆ ತಿಲಾಂಜಲಿ ನೀಡಲು ಪ್ರಕರಣವನ್ನು 6 ತಿಂಗಳೊಳಗೆ ಇತ್ಯರ್ಥಗೊಳಿಸಲು ಕಾಲಮಿತಿ ವಿಧಿಸಲಾಗಿದೆ. ಉಲ್ಲಂಘಿಸಿದರೆ ಸಂಬಂಧಿಸಿದ ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಸ್‌.ಭರತ ಆದೇಶಿಸಿದ್ದಾರೆ.

ಅಧಿಕಾರಿಗಳಿಗೆ ಏಕಿಲ್ಲ?

ಸಂಸ್ಥೆಯ ನೌಕರರಿಗೆ ನೀಡಿರುವ ಈ ಅವಕಾಶ ಅಧಿಕಾರಿಗಳಿಗೆ ದೊರೆತಿಲ್ಲ. ಅಧಿಕಾರಿಗಳಲ್ಲಿಯೂ ಕೂಡ ನಿರ್ವಹಣೆ, ಮೇಲುಸ್ತುವಾರಿ ವೈಫಲ್ಯದ ಹೆಸರಲ್ಲಿ ಹಲವು ಪ್ರಕರಣಗಳಿವೆ. ಘಟಕ ವ್ಯವಸ್ಥಾಪಕರ ಮೇಲಂತೂ ಅತೀ ಹೆಚ್ಚು. ಸಣ್ಣ ಪ್ರಕರಣ ಇಟ್ಟುಕೊಂಡು ಇಂದಿಗೂ ಕೆಲ ಅಧಿಕಾರಿಗಳಿಗೆ ಬಡ್ತಿ ನೀಡದ ಆರೋಪಗಳು ಕೂಡ ಇವೆ. ನೌಕರರ ಆತ್ಮಸ್ಥೈರ್ಯ ಹೆಚ್ಚಿಸಲು ಕೈಗೊಂಡಿರುವ ಈ ಕಾರ್ಯ ಅತ್ಯುತ್ತಮವಾಗಿದ್ದು, ಇದರಂತೆ ಅಧಿಕಾರಿಗಳ ಮೇಲೆ ಪ್ರಕರಣಗಳ ಅಧಿಕಾರಿಗಳ ಮೇಲಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂಬುವುದು ಅಧಿಕಾರಿಗಳ ಬೇಡಿಕೆಯಾಗಿದೆ.

ನೌಕರರ ಆತ್ಮಸ್ಥೈರ್ಯ ಹೆಚ್ಚಿಸುವ ಕಾರಣಕ್ಕೆ ಏಕಕಾಲಕ್ಕೆ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಯಾವುದೇ ಶಿಸ್ತು ಪ್ರಕರಣಗಳನ್ನು 6 ತಿಂಗಳ ಕಾಲಮಿತಿಯಲ್ಲಿ ಬಗೆಹರಿಸಲು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಸರ್ಕಾರದಲ್ಲಿ ಪ್ರಕರಣ ಪೂರ್ಣಗೊಳಿಸಲು 9 ತಿಂಗಳಿದ್ದು, ನಮ್ಮಲ್ಲಿ ಆರು ತಿಂಗಳ ಕಾಲಮಿತಿ ಹಾಕಿಕೊಳ್ಳಲಾಗಿದೆ. ಗೈರು ಹಾಜರಿ ಪ್ರಕರಣಗಳನ್ನು ಕೂಡ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗುವುದು. -ಎಸ್‌.ಭರತ, ವ್ಯವಸ್ಥಾಪಕ ನಿರ್ದೇಶಕ, ವಾಕರಸಾ ಸಂಸ್ಥೆ        

„ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

1-man-mohan

Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ

CBI

ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌

Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌

ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

state-news

Negotiation: ಹೆಬ್ಬಾಳ್ಕರ್‌-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

2

Kasaragod: ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Untitled-1

Kasaragod Crime News: ಮೂವರು ಮಕ್ಕಳ ಸಹಿತ ತಾಯಿ ನಾಪತ್ತೆ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.