ಪುಣ್ಯದ ಕಾರ್ಯವಿದು


Team Udayavani, Apr 16, 2020, 6:24 PM IST

ಪುಣ್ಯದ ಕಾರ್ಯವಿದು

ಲಾಕ್‌ಡೌನ್‌ ಘೋಷಣೆಯಾದ 4 ದಿನದ ಬಳಿಕ ಕಾರ್ಕಳದ ತಂಡವೊಂದು ವಿಶಿಷ್ಟ ರೀತಿಯಲ್ಲಿ ತನ್ನ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದು ಇದೀಗ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಕಾರ್ಕಳ ನಗರದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲುವಂತಾಗಬಾರದು. ತಿನ್ನುವ ಅನ್ನಕ್ಕಾಗಿ ಪರಿತಪಿಸುವಂತಾಗಬಾರದೆಂಬ ಕಾಳಜಿಯೊಂದಿಗೆ ಪ್ರತಿಫ‌ಲಾಪೇಕ್ಷೆ ಇಲ್ಲದೇ ಪಡುತಿರುಪತಿ ಕ್ರಿಕೆಟರ್ ತಂಡವು ನಿತ್ಯ ನೂರಾರು ಮಂದಿಗೆ ಊಟ-ಉಪಾಹಾರ ನೀಡುವ ಮೂಲಕ ಸಾರ್ಥಕ್ಯ ಕಾಣುತ್ತಿದೆ.

ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಣವನ್ನೇ ಪಣವಾಗಿಟ್ಟು ಅನನ್ಯ ಸೇವೆಗೈಯುತ್ತಿರುವ ಪೊಲೀಸರು, ಗೃಹ ರಕ್ಷಕ ದಳ, ಸರಕಾರಿ ಆಸ್ಪತ್ರೆ, ಕಂದಾಯ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತರು, ಪುರಸಭಾ ನೌಕರರು-ಪೌರಕಾರ್ಮಿಕರು, ತಾಲೂಕು ಕಚೇರಿ ಸಿಬ್ಬಂದಿ, ಕ್ವಾರಂಟೈನ್‌ ಕೇಂದ್ರ ಮಾತ್ರವಲ್ಲದೇ ಆಹಾರದ ಅಗತ್ಯವುಳ್ಳ ನೂರಾರು ಮಂದಿಗೆ ಅವರ ಬಳಿ ತೆರಳಿ ಊಟ ಪೂರೈಸುವ ಮೂಲಕ ಪಡುತಿರುಪತಿ ಕ್ರಿಕೆಟರ್ñ ತಂಡ ಶ್ರೇಷ್ಠ ಕಾರ್ಯ ಮಾಡುತ್ತಿದ್ದು, ಈ ತಂಡದೊಂದಿಗೆ ಜೈ ಹಿಂದ್‌ ಕ್ಲಬ್‌ ಕೂಡ ಜೊತೆಗೂಡಿದೆ.

400 ಊಟ
ಹೊಟೇಲ್‌ ಇಲ್ಲದೇ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡ ಪಡುತಿರುಪತಿ ತಂಡದ ಸದಸ್ಯರು ಆಹಾರ ಸಾಮಗ್ರಿ ತರಿಸಿ, ಪತ್ರಿಕೆ ವಿತರಕ ಗೋವಿಂದರಾಯ ಪೈ ಅವರ ಮನೆಯಲ್ಲಿ ಅಡುಗೆ ತಯಾರಿಸಿ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಊಟ ಪೂರೈಸಿದರು. ಕೆಲದಿನಗಳಲ್ಲೇ ಆಹಾರ ಬೇಡಿಕೆ ಜಾಸ್ತಿಯಾಯಿತು. ಇದರೊಂದಿಗೆ ದಾನಿಗಳು ಸ್ವಇಚ್ಛೆಯೊಂದಿಗೆ ಸಹಕಾರ ನೀಡಲು ಮುಂದಾದರು. ಮಹಾವೀರ ಜಯಂತಿಯಂಗವಾಗಿ ಕಾರ್ಕಳ ಜೈನ್‌ ಮಿಲನ್‌ ವತಿಯಿಂದ ಒಂದು ದಿನದ ಖರ್ಚು ಭರಿಸಿದ್ದರು. ಪ್ರಸ್ತುತ ಪ್ರತಿದಿನ 400ಕ್ಕೂ ಅಧಿಕ ಮಂದಿಗೆ ಜಿಎಸ್‌ಬಿ ಶೈಲಿಯ ಸಸ್ಯಾಹಾರಿ ಊಟ ತಯಾರಿಸಲಾಗುತ್ತಿದೆ. ಇಷ್ಟೊಂದು ಮಂದಿಗೆ ಊಟ ತಯಾರಿಸುವುದು ಸುಲಭದ ಮಾತಲ್ಲ. ಮಾತ್ರವಲ್ಲದೇ ಆಯಾಯ ಕಚೇರಿ, ಮನೆಗಳಿಗೆ, ತಾಲೂಕಿನ ವಿವಿಧ ಚೆಕ್‌ಪೋಸ್ಟ್‌ಗೆ ಸುಡುಬಿಸಿಲು ಎನ್ನದೇ ಬೈಕ್‌ನಲ್ಲಿ ತೆರಳಿ ಊಟ ಪೂರೈಸುತ್ತಿರುವುದು ನಿಜಕ್ಕೂ ಮಹತ್ಕಾರ್ಯವೇ ಸರಿ.

ಮಧಾ°ಹ್ನ ಅನ್ನ, ಸಾಂಬಾರು, ಪಲ್ಯ, ಉಪ್ಪಿನಕಾಯಿ, ಮಜ್ಜಿಗೆಯಿದ್ದರೆ, ಉಪಾಹಾರಕ್ಕೆ ಇಡ್ಲಿ-ಚಟ್ನಿ, ಪುಳಿಯೊಗರೆ, ಬನ್ಸ್‌, ಸಜ್ಜಿಗೆ-ಅವಲಕ್ಕಿ ನೀಡಲಾಗುತ್ತಿದೆ. ಸರಕಾರಿ ಆಸ್ಪತ್ರೆ ರೋಗಿಗಳಿಗೆ ಅನ್ನದೊಂದಿಗೆ ಹಣ್ಣು ನೀಡಲಾಗುತ್ತಿದ್ದು, ವಿಶೇಷ ಸಂದರ್ಭ ಪಾಯಸವನ್ನೂ ಮಾಡಲಾಗುತ್ತಿದೆ.

ಅಚ್ಚುಕಟ್ಟುತನ
ಪಡುತಿರುಪತಿ ಕ್ರಿಕೆಟರ್ ತಂಡದ ಸದಸ್ಯರು ಬಹಳ ವ್ಯವಸ್ಥಿತವಾಗಿ, ಶುಚಿ-ರುಚಿಯಾಗಿ ಅಡುಗೆ ತಯಾರಿಸಿ, ಪ್ಯಾಕಿಂಗ್‌ ಮಾಡಿ, ಆಯಾಯ ಸ್ಥಳಗಳಿಗೆಂದು ನಿಗದಿಗೊಳಿಸಲಾಗಿರುವ ರಟ್ಟಿನ ಬಾಕ್ಸ್‌ಗೆ ಅನ್ನದ ಪೊಟ್ಟಣ ತುಂಬಿಸಲಾಗುತ್ತಿದೆ. ಬಳಿಕ 3 ಕಾರು, 15 ದ್ವಿಚಕ್ರ ವಾಹನದಲ್ಲಿ ಆಹಾರವನ್ನು ಆಯಾಯ ಸ್ಥಳಗಳಿಗೆ ಹೋಗಿ ವಿತರಣೆ ಮಾಡಲಾಗುತ್ತಿದೆ. ಇದೆಲ್ಲ ಕಾರ್ಯವೂ ಅತ್ಯಂತ ಅಚ್ಚುಕಟ್ಟುತನದಿಂದ ನಡೆಯುತ್ತಿದೆ.

ಮಾದರಿ
ದಾನಿಗಳ ಸಹಕಾರದೊಂದಿಗೆ ದಿನಂಪತ್ರಿ 400 ಕ್ಕೂ ಅಧಿಕ ಮಂದಿಗೆ ಊಟ ನೀಡಲು ಸಾಧ್ಯವಾಗುತ್ತಿದೆ. ಒಂದು ವೇಳೆ ಸರಕಾರದಿಂದ ಲಕ್ಷ-ಲಕ್ಷ ರೂ. ಅನುದಾನ ದೊರೆಯುತ್ತಿದ್ದರೂ ಇಷ್ಟೊಂದು ಸಮರ್ಪಕವಾಗಿ ಅಗತ್ಯವುಳ್ಳವರಿಗೆ ಆಹಾರ ವಿತರಣೆ ಖಂಡಿತ ಸಾಧ್ಯವಾಗುತ್ತಿರಲಿಲ್ಲ. ಜಾತಿ, ಧರ್ಮ ಅಂತ ಯಾವೊಂದು ತಾರತಮ್ಯವಿಲ್ಲದೇ ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಇಂತಹ ಮಾದರಿ ತಂಡ ಪ್ರತಿ ತಾಲೂಕಿನಲ್ಲೂ ಕಾರ್ಯನಿರ್ವಹಿಸುತ್ತಿದ್ದಲ್ಲಿ ತಾಲೂಕು ಆಡಳಿತಕ್ಕೆ ಬಹಳ ಅನುಕೂಲವಾಗಿರುತ್ತಿತ್ತು.

ಅಧಿಕಾರಿಗಳ ಭೇಟಿ
ಶಾಸಕ ವಿ. ಸುನಿಲ್‌ ಕುಮಾರ್‌, ತಹಶೀಲ್ದಾರ್‌ ಪುರಂದರ ಹೆಗ್ಡೆ, ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ, ಡಿವೈಎಸ್‌ಪಿ ಭರತ್‌ ರೆಡ್ಡಿ, ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ನಗರ ಠಾಣಾ ಎಸ್‌ಐ ಮಧು ಬಿ.ಇ., ಗ್ರಾಮಾಂತರ ಠಾಣಾ ಎಸ್‌ಐ ನಾಸಿರ್‌ ಹುಸೇನ್‌ ಭೇಟಿ ನೀಡಿ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದರು.

ಪ್ರಚಾರವಿಲ್ಲ
ಸಂಘ-ಸಂಸ್ಥೆಗಳು, ದಾನಿಗಳು ಅಗತ್ಯವುಳ್ಳವರಿಗೆ ಅಕ್ಕಿ, ಆಹಾರ ಸಾಮಗ್ರಿ ವಿತರಣೆ ಮಾಡಿ ಫೇಸ್‌ಬುಕ್‌, ವ್ಯಾಟ್ಸ್‌ಪ್‌ನಲ್ಲಿ ಹರಿಯಬಿಡುವುದನ್ನು ನಾವು ಕಾಣುತ್ತೇವೆ. ಆದರೆ, ಪಡುತಿರುಪತಿ ತಂಡದ ಯಾವೊಬ್ಬ ಸದಸ್ಯನೂ ತಮ್ಮ ಕಾರ್ಯದ ಕುರಿತು ಫೋಟೋ ತೆಗೆದು, ನಾಲ್ಕು ಪದ ಬರೆದಿರುವುದು ಕಂಡು ಬಂದಿಲ್ಲ. ಏನೇ ಇರಲಿ ಹಸಿದ ಹೊಟ್ಟೆಗೆ ಅನ್ನವಿಕ್ಕುವ ಮೂಲಕ ಪುಣ್ಯದ ಕಾರ್ಯದಲ್ಲಿ ತೊಡಗಿಸಿಕೊಂಡ ಸರ್ವರಿಗೂ ನಮ್ಮದೊಂದು ಸಲಾಂ..

– ರಾಮಚಂದ್ರ ಬರೆಪ್ಪಾಡಿ

ಟಾಪ್ ನ್ಯೂಸ್

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ

Shiradi

Road Project: ಶಿರಾಡಿ ಘಾಟ್‌ ಸುರಂಗ ಯೋಜನೆಗೆ ಡಿಪಿಆರ್‌ ರಚಿಸಿ: ಕೇಂದ್ರ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi: ಸಂತೆಕಟ್ಟೆಯಲ್ಲಿ ಲಾರಿ ಪಲ್ಟಿ: ಸಂಚಾರ ದಟ್ಟಣೆ

Udupi: ಸಂತೆಕಟ್ಟೆಯಲ್ಲಿ ಲಾರಿ ಪಲ್ಟಿ: ಸಂಚಾರ ದಟ್ಟಣೆ

u1

Udupi: ಮನೆಯೊಳಗೆ ಧರ್ಮಗ್ರಂಥ, ಹೊರಗೆ ಸಂವಿಧಾನ ಮುನ್ನೆಡೆಸಬೇಕು: ನ್ಯಾ| ಶ್ರೀಶಾನಂದ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.