ಭೂಮಿಯ ಸವಳು-ಜವಳು ತಡೆಯಲು ರಾಮಬಾಣ ಹಸಿರೆಲೆ ಬೆಳೆ

ಅತೀಯಾದ ರಸಯನಿಕ ಮತ್ತು ನೀರು ಬಳಕೆ ಭೂಮಿಯ ಫಲವತ್ತತೆ ನಾಶ

Team Udayavani, Mar 2, 2022, 5:59 PM IST

ಭೂಮಿಯ ಸವಳು-ಜವಳು ತಡೆಯಲು ರಾಮಬಾಣ ಹಸಿರೆಲೆ ಬೆಳೆ

ಗಂಗಾವತಿ: ಭೂಮಿಯ ಫಲವತ್ತತೆ ಕಡಿಮೆಯಾಗುವ ಪರಿಣಾಮ ಸವಳು-ಜವಳು ಉಂಟಾಗುತ್ತದೆ.ಬೆಳೆಗಳು ಸರಿಯಾಗಿ ಇಳುವರಿ ಕೊಡುವುದಿಲ್ಲ. ಭೂಮಿಯಲ್ಲಿದ್ದ ಜೀವಕೋಶಗಳು ನಾಶವಾಗಿ ಕೃತಕ ಗೊಬ್ಬರದಿಂದ ಮಾತ್ರ ಬೆಳೆಯುವಂತಹ ಸ್ಥಿತಿಯುಂಟಾಗಿದೆ. ಇದನ್ನು ತಪ್ಪಿಸಲು ಕೃಷಿ ಇಲಾಖೆ ರೈತರಿಗೆ ಕಡಿಮೆ ದರದಲ್ಲಿ ಹಸಿರೆಲೆಗಿಬ್ಬರದ ಬೀಜ (ಪಿಳ್ಳಿಪಿಸಿರು) ವಿತರಣೆಗೆ ಮುಂದಾಗಿದೆ.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಪದೇ ಪದೇ ಭತ್ತವನ್ನು ಬೆಳೆಯಲು ಅತೀಯಾದ ರಸಾಯನಿಕ ಮತ್ತು ನೀರಿನ ಬಳಕೆಯಿಂದ ಒಂದು ಲಕ್ಷ ಹೆಕ್ಟೇರ್ ಭೂಮಿ ಸವಳು-ಜವಳು ಆಗಿದ್ದು ರೈತರು ರಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕವನ್ನು ಬಳಕೆ ಮಾಡುವುದರಿಂದ ಕೃಷಿಯ ಮೇಲೆ ಅಧಿಕ ಖರ್ಚು ಮಾಡುವುದು ಅನಿವಾರ್ಯವಾಗಿದೆ. ಮುಂಗಾರು ಮತ್ತು ಬೇಸಿಗೆ ಸಂದರ್ಭದಲ್ಲಿ ಭತ್ತ ಬೆಳೆಯುವ ಹವ್ಯಾಸವನ್ನು ಕಳೆದ ಮೂರು ದಶಕಗಳಿಂದ ಅಚ್ಚುಕಟ್ಟು ರೈತರು ಅಳವಡಿಸಿಕೊಂಡಿರುವುದರಿಂದ ಸೇಂಗಾ, ಕಬ್ಬು ಬಾಳೆ ಮತ್ತು ಹತ್ತಿ ಬೆಳೆ ಬೆಳೆಯುವುದನ್ನು ಸಂಪೂರ್ಣವಾಗಿ ಕೈ ಬಿಟ್ಟಿದ್ದರಿಂದ ಮರಳಿಯ ಸಕ್ಕರೆ ಕಾರ್ಖಾನೆ, ಆಯಿಲ್ ಮಿಲ್ ಮತ್ತು ಹತ್ತಿ ಮಿಲ್ ಮುಚ್ಚಿವೆ. ಬರೀ ಭತ್ತ ಬೆಳೆಯುವುದರಿಂದ ಭೂಮಿ ಸಂಪೂರ್ಣ ನಾಶವಾಗಿದೆ. ಕೃಷಿ ಇಲಾಖೆ ಕೃಷಿ ವಿವಿ ವಿಶೇಷ ಅಧ್ಯಾಯನ ಮೂಲಕ ಸರಕಾರ ವರದಿ ಸಲ್ಲಿಸಿದ ನಂತರ ರಸಾಯನಿಕ ಗೊಬ್ಬರಕ್ಕೆ ಹಂತ ಹಂತವಾಗಿ ಸಬ್ಸಿಡಿ ಕಡಿಮೆ ಮಾಡಲಾಗುತ್ತಿದೆ.

ಅನ್ಯ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ಜತೆಗೆ ಭೂಮಿಯ ಫಲವತ್ತತೆ ಹೆಚ್ಚು ಮಾಡಲು ಹಸಿರೆಲೆ ಗೊಬ್ಬರದ (ಪಿಳ್ಳಿಪಿಸರು)ಬೀಜವನ್ನು ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಅಚ್ಚುಕಟ್ಟು ಪ್ರದೇಶದ ಪ್ರಾಧಿಕಾರ(ಕಾಡಾ)ದಿಂದ ಸವಳು-ಜವಳು ಭೂಮಿ ಅಭಿವೃದ್ಧಿ ಮಾಡಲು ವಾರ್ಷಿಕ ಕೋಟ್ಯಾಂತರ ರೂ. ಖರ್ಚು ಮಾಡಲಾಗುತ್ತಿದೆ.

ಹಸಿರೆಲೆಗೊಬ್ಬರದ ಲಾಭಗಳು: ಬೇಸಿಗೆ ಹಂಗಾಮಿನಲ್ಲಿ ಭತ್ತದ ಕಟಾವು ನಂತರ ಒಂದು ಎಕರೆಗೆ 20-25 ಕೆ.ಜಿ. ಹಸಿರೆಲೆಗೊಬ್ಬರದ ಬೀಜ ಚೆಲ್ಲಬೇಕು. ಇದರಿಂದ ವಾತಾವರಣದಲ್ಲಿರುವ ಸಾರಜನಿಕವನ್ನು ಸಂಗ್ರಹಿಸಿ ಭೂಮಿಯ ಆಳಕ್ಕೆ ಬಿಡುತ್ತದೆ. ಭುಮಿಯಲ್ಲಿ ಸಾವಯವ ಅಂಶ ಹೆಚ್ಚಾಗಿ ತೇವಾಂಶ ಬಹಳ ದಿನ ಇರುತ್ತೆದೆ. ಮುಖ್ಯವಾಗಿ ಭೂಮಿಯಲ್ಲಿ ಸವಳು-ಜವಳು ಬೇಗನೆ ಕಡಿಮೆಯಾಗುತ್ತದೆ.

ಈ ಹಿಂದೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಜಂತ್ರೋಪಾ(ಕಾಣಿಗಿ ಗಿಡ) ಎಲೆ,ಲೆಕ್ಕಿ ಎಲೆ ಮತ್ತು ಸೆಣಬು ಸಸ್ಯವನ್ನು ಭೂಮಿಯಲ್ಲಿ ಬೆಳೆಸಿ ಅದನ್ನು ಕಡಿದು ಭೂಮಿಗೆ ನೀರು ಬಿಟ್ಟು ಕೊಳೆಸಲಾಗುತ್ತಿತ್ತು. ಕಳೆದ ಮೂರು ದಶಕಗಳಿಂದ ಭತ್ತ ಬೆಳೆಯುವ ದಾವಂತದಲ್ಲಿ ರೈತರು ತಿಪ್ಪೆ ಸಗಣಿ ಗೊಬ್ಬರದ ಬದಲಿಗೆ ಸರಕಾರಿ ಗೊಬ್ಬರ ಅತೀಯಾಗಿ ಬಳಕೆ ಮಾಡಿ ಭೂಮಿಯನ್ನು ಬಂಜರು ಮಾಡಿಕೊಂಡಿದ್ದಾರೆ. ಭೂಮಿ ಆರೋಗ್ಯವಾಗಿದ್ದರೆ ಬೆಳೆಯುವ ಅಧಿಕ ಇಳುವರಿ ಬರಲು ಸಾಧ್ಯವಾಗುತ್ತದೆ. ಫಲವತ್ತತೆ ಹೆಚ್ಚಲು ಇದೀಗ ಕೃಷಿ ಇಲಾಖೆ ಹಸಿರೆಲೆಗೊಬ್ಬರ(ಪಿಳ್ಳಿಪಿಸಿರು) ಬೀಜ ವಿತರಣೆಗೆ ಮುಂದಾಗಿದ್ದು ರೈತರು ಸದುಪಯೋಗಪಡಿಸಇಕೊಳ್ಳಬೇಕಿದೆ.

ಶಿಫಾರಸ್ಸಿಗಿಂತ ಹೆಚ್ಚು ರಸಾಯನಿಕ ಗೊಬ್ಬರ ಬಳಕೆ ಮಾಡಿದ್ದರಿಂದ ಭೂಮಿ ಬರಡಾಗಿದ್ದು ಪ್ರತಿ ಹಂಗಾಮಿನಲ್ಲಿ ಭತ್ತದ ಬೆಳೆ ಬೆಳೆಯಲು ರೈತರು ರಸಾಯನಿಕಗೊಬ್ಬರ ಮತ್ತು ಕ್ರಿಮಿನಾಶಕ ಸಿಂಪರಣೆಗೆ ಅಧಿಕ ಹಣ ಖರ್ಚು ಮಾಡಬೇಕಿದೆ. ಆದ್ದರಿಂದ ಭೂಮಿಯ ಫಲವತ್ತತೆ ಹೆಚ್ಚಾಗಲು ಹಸಿರೆಲೆ ಗೊಬ್ಬರ ಬೆಳೆಗಳಾದ ಡಯಾಂಚ, ಸೆಣಬು ಬೆಳೆಯುವುದರಿಂದ ಭೂಮಿಯಲ್ಲಿರುವ ರೈತ ಉಪಕಾರಿ ಸೂಕ್ಷಾö್ಮಣು ಜೀವಿಗಳು ಹೆಚ್ಚಾಗುವುದರಿಂದ ಬೆಳೆಗಳಿಗೆ ಕೀಟಬಾಧೆ ಕಡಿಮೆಯಾಗುತ್ತದೆ. ಸವಳು-ಜವಳು ನಿವಾರಣೆಯಾಗಿ ರೈತರು ಅಧಿಕ ಇಳುವರಿ ಪಡೆಯಲು ಅನುಕೂಲವಾಗುತ್ತದೆ. ಕೃಷಿ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಧನ ಯೋಜನೆಯಲ್ಲಿ ಹಸಿರೆಲೆಗೊಬ್ಬರದ (ಪಿಳ್ಳಿಪಿಸಿರು) ಬೀಜ ವಿತರಣೆ ಮಾಡಲಾಗುತ್ತದೆ.
-ಸಂತೋಷ ಪಟ್ಟದ ಕಲ್ಲು ಸಹಾಯಕ ತಾಲೂಕು ಕೃಷಿ ನಿರ್ದೇಶಕರು.

ಅತೀಯಾದ ರಸಗೊಬ್ಬರ ಕ್ರಿಮಿನಾಶಕ ಮತ್ತು ನೀರಿನ ಬಳಕೆಯಿಂದ ಮತ್ತು ಪದೇ ಪದೇ ಭತ್ತವನ್ನು ಬೆಳೆಯುವುದರಿಂದ ಸುಮಾರು ಒಂದು ಲಕ್ಷ ಹೆಕ್ಟೇರ್ ಭೂಮಿ ಬರಡಾಗಿದೆ.ಇದರಿಂದ ಮುಂದಿನ ದಿನಗಳಲ್ಲಿ ಪರಿಣಾಮ ಬೀರಲಿದ್ದು ರೈತರು ಮುಂಜಾಗೃತೆ ವಹಿಸದಿದ್ದರೆ ತೊಂದರೆಯಾಗುತ್ತದೆ. ಭತ್ತ ಕಟಾವಿನ ನಂತರ ಹಸಿರೆಲೆಗೊಬ್ಬರ ಸೃಷ್ಠಿ ಮಾಡುವ ಡಯಾಂಚ, ಸೆಣಬು ಸೇರಿ ವಿವಿಧ ಸಸ್ಯಗಳ ಎಲೆಗಳನ್ನು ಗದ್ದೆಯಲ್ಲಿ ಕೊಳೆಸಿ ಅದನ್ನು ಭೂಮಿಯಲ್ಲಿ ಸೇರಿಸಬೇಕು. ಕೃಷಿ ಇಲಾಖೆ ಮತ್ತು ಕೃಷಿ ವಿವಿ ಈಗಾಗಲೇ ಹಲವಾರು ಸೆಮಿನಾರ್‌ಗಳ ಮೂಲಕ ರೈತರಿಗೆ ಮನವರಿಕೆ ಮಾಡಲಾಗಿದೆ. ಮಣ್ಣಿನಲ್ಲಿ ಸಾರಜನಕ ಮತ್ತು ಬಯೀಪಾಸ್ ಹೆಚ್ಚು ಮಾಡಲು ತೇವಾಂಶ ಹೋಗದಂತೆ ತಡೆದು ಕೆಲ ಜೀವಕೋಶ ನಾಶವಾಗದಂತೆ ತಡೆಯಲು ರೈತರು ಹಸಿರೆಲೆ ಗೊಬ್ಬರದ ಬೀಜ ಚಲ್ಲಬೇಕು.
-ಡಾ|ಮಸ್ತಾನರಡ್ಡಿ ಬೇಸಾಯ ಶಾಸ್ತçಜ್ಞರು ಮತ್ತು ಮುಖ್ಯಸ್ಥರು ಕೃಷಿಮಹಾವಿದ್ಯಾಲಯ.

– ಕೆ.ನಿಂಗಜ್ಜ

ಟಾಪ್ ನ್ಯೂಸ್

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

1-kashmir-msulim-IAS

Kashmir; ಮೊದಲ ಮುಸ್ಲಿಂ ಐಎಎಸ್‌ ಅಧಿಕಾರಿ ನಿಧನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

1-tWWW

Tupperware ಲಂಚ್‌ ಬಾಕ್ಸ್‌ ದಿವಾಳಿ: ಅಮೆರಿಕದ ಕಂಪೆನಿ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.