ವರುಣನ ಕೃಪೆ: ಬಿಸಿಲ ನಾಡಲ್ಲಿ ಹಸಿರ ಹೊದಿಕೆ
Team Udayavani, Oct 1, 2020, 3:32 PM IST
ಕುಷ್ಟಗಿ: ವರುಣನ ಕೃಪೆಗೆ ತಾಲೂಕಿನ ಅರಣ್ಯ ಇಲಾಖೆ ವ್ಯಾಪ್ತಿಯ ಗುಡ್ಡಗಾಡು ಪ್ರದೇಶದಲ್ಲೀಗ ಹಸಿರು ಕಂಗೊಳಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಕಳೆದ ಜುಲೈ ತಿಂಗಳ ಕೊನೆಯ ವಾರದಿಂದ ಸೆಪ್ಟಂಬರ್ ತಿಂಗಳವರೆಗೂ ಕುಷ್ಟಗಿ ತಾಲೂಕಿನಲ್ಲಿ ಸಾಧರಣ ಮಳೆಯ ವಾತವರಣ ಬೆನ್ನಲ್ಲೆ ಇಲ್ಲಿನ ಅರಣ್ಯ ವ್ಯಾಪ್ತಿಯ ಗುಡ್ಡಗಾಡಿನ ಚಿತ್ರಣ ಬದಲಾಗಿದೆ. ಕುರುಚಲು ಗಿಡಗಳಿಂದ ಕೂಡಿದ ಗುಡ್ಡಗಾಡು ಪ್ರದೇಶದಲ್ಲೀಗ ಮಳೆಯಿಂದ ಹಸಿರು ಚಿಗುರೊಡೆದಿದೆ.
ಈ ಪ್ರದೇಶದಲ್ಲಿ ತುಗ್ಗಲಿ, ಹೊಂಗೆ, ತಪ್ಸಿ, ಬೆಟ್ಲ, ಕವಳಿ, ಕಾರಿ, ಮಾಶವಳ, ಬೇವು, ಅಂಟವಾಳ, ಗಣವಾರಿ, ತುಪ್ರಾ, ಗೇರು, ಉದಯ ಮೊದಲಾದ ಸಸ್ಯ ಪ್ರಭೇದಗಳಿವೆ. ನರಿ, ತೋಳ, ಕಾಡು ಹಂದಿ, ನವಿಲು ಮೊದಲಾದ ಪ್ರಾಣಿ ಪಕ್ಷಿಗಳ ಜೀವ ವೈವಿಧ್ಯತೆಯಿದೆ.
ಹನುಮಸಾಗರ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಪಲೆಪ್ಪ ಹಾಗೂ ಚಂದನ ಮಿನಿ ಜಲಪಾತಗಳು ಮಳೆಗಾಲದ
ಸಂದರ್ಭದಲ್ಲಿ ನಯನಮನೋಹರ ಎನಿಸಿವೆ.
ತಾಲೂಕಿನ ಅರಣ್ಯ ಕ್ಷೇತ್ರ: ತಾಲೂಕಿನಲ್ಲಿ ಒಟ್ಟಾರೆಯಾಗಿ 5,528 ಹೆಕ್ಟೇರ್ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದು, ಇದರಲ್ಲಿ 13,370 ಹೆಕ್ಟೇರ್ ಕಾಯ್ದಿಟ್ಟ ಅರಣ್ಯ ಪ್ರದೇಶ, 1,647.38 ಹೆಕ್ಟೇರ್ ರಕ್ಷಿತ ಅರಣ್ಯ ಪ್ರದೇಶವಿದೆ. ಇದರಲ್ಲಿ ಮಾಲಗಿತ್ತಿ ಕಾಯ್ದಿಟ್ಟ ಅರಣ್ಯ 349.0 ಹೆಕ್ಟೇರ್, ತುಗ್ಗಲದೋಣಿ 711.83 ಹೆಕ್ಟೇರ್, ವಕ್ಕನದುರ್ಗಾ 1,421.30
ಹೆಕ್ಟೇರ್, ತಾವರಗೇರಾ 3,71.60 ಹೆಕ್ಟೇರ್, ಕುಮಾರಖೇಡ್ 515.99 ಹೆಕ್ಟೇರ್ ಕಾದಿಟ್ಟ ಅರಣ್ಯ ಪ್ರದೇಶವಿದೆ.
ಹನುಮಸಾಗರ ರಕ್ಷಿತ ಅರಣ್ಯ 1,647.38 ಹೆಕ್ಟೇರ್ ವ್ಯಾಪ್ತಿ ಹೊಂದಿದ್ದು, ಹಂಚಿನಾಳ, ಹಿರೇಮನ್ನಾಪುರ, ಶಾಖಾಪುರ,
ಮೆಣಸಗೇರಾ, ಮುದ್ದಲಗುಂದಿ, ಅಡವಿಬಾವಿ ಸೇಬಿನಕಟ್ಟಿ, ಕಿಲ್ಲಾರಹಟ್ಟಿ, ಹುಲಿಯಾಪುರ ಸೇರಿದಂತೆ ಒಟ್ಟು 511.72 ಹೆಕ್ಟೇರ್ ಸೆಕ್ಷನ್-4 ಅಧೀನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.