ದಿನಸಿ ಖರೀದಿ ನೆಪ; ಲಾಕ್‌ಡೌನ್‌ ನಡುವೆಯೂ ಬೇಕಾಬಿಟ್ಟಿ ಓಡಾಟ

ಮಂಗಳೂರು: ಕಾರು-ಬೈಕ್‌ಗಳ ಕಾರುಬಾರು

Team Udayavani, Apr 28, 2020, 5:05 AM IST

ದಿನಸಿ ಖರೀದಿ ನೆಪ; ಲಾಕ್‌ಡೌನ್‌ ನಡುವೆಯೂ ಬೇಕಾಬಿಟ್ಟಿ ಓಡಾಟ

ಮಂಗಳೂರು: ದಿನಸಿ ವಸ್ತುಗಳನ್ನು ಖರೀದಿಸಲು ದ.ಕ. ಜಿಲ್ಲಾ ಡಳಿತ ನೀಡಿದ ಸಮಯಾವಕಾಶವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಮಂಗಳೂರಿನಲ್ಲಿ ಹೆಚ್ಚುತ್ತಿದೆ.

ಸೋಮವಾರ ಮಧ್ಯಾಹ್ನ ದವರೆಗೆ ನಗರದ ರಸ್ತೆಗಳಲ್ಲಿ ಬೇಕಾಬಿಟ್ಟಿ ಕಾರು, ಬೈಕ್‌ಗಳ ಓಡಾಟ ನಡೆ ದಿದ್ದು, ಕೋವಿಡ್ 19 ಭೀತಿ ಇದ್ದರೂ ಜನ ನಿರ್ಲಕ್ಷé ವಹಿಸುತ್ತಿರುವುದು ಸ್ಪಷ್ಟವಾಗುತ್ತಿದೆ.

ಮಂಗಳೂರಿನಲ್ಲಿಯೂ ಜಿಲ್ಲಾಡಳಿತ ಲಾಕ್‌ಡೌನ್‌ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿದೆ. ದೈನಂದಿನ ಜೀವನಕ್ಕೆ ತೊಂದರೆಯಾಗದಿರಲಿ ಎಂಬುದಕ್ಕೆ ಪ್ರತಿದಿನ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ ವಸ್ತುಗಳ ಖರೀದಿಗೆ ನೀಡಿರುವ ಅವಕಾಶವನ್ನು ಬಹುತೇಕರು ದುರುಪಯೋಗ ಪಡಿಸಿ ಕೊಳ್ಳುತ್ತಿರುವುದು ಕಂಡು ಬಂದಿದೆ.

ಮಂಗಳೂರಿನ ಎಂಜಿ ರಸ್ತೆ, ಬಿಜೈ ಕಾಪಿಕಾಡ್‌ ರಸ್ತೆ, ಕೆಎಸ್ಸಾರ್ಟಿಸಿ ರಸ್ತೆ, ಲಾಲ್‌ಬಾಗ್‌, ಲೇಡಿಹಿಲ್‌, ಯೆಯ್ನಾಡಿ, ಉರ್ವಸ್ಟೋರ್‌ ಸಹಿತ ಬಹುತೇಕ ಕಡೆಗಳಲ್ಲಿ ಮಧ್ಯಾಹ್ನದವರೆಗೆ ಹಲವಾರು ವಾಹನಗಳು ರಸ್ತೆಗಿಳಿದಿದ್ದು, ಜಿಲ್ಲಾಡಳಿತದ ನಿಯಮಗಳ ಪಾಲನೆಯನ್ನು ಧಿಕ್ಕರಿಸಿವೆ. ವಾಹನಗಳಲ್ಲಿ ಓಡಾಡದೆ ಸನಿಹದ ಅಂಗಡಿಗಳಿಂದ ನಡೆದೆ ತೆರಳಿ ದಿನಸಿ ಖರೀದಿಸಿ ತರಬೇಕು ಎಂಬ ನಿಯಮವಿದ್ದರೂ, ದೂರದ ಅಂಗಡಿಗಳಿಗೂ ವಾಹನಗಳಲ್ಲಿ ತೆರಳಿ ದಿನಸಿ ಖರೀದಿಸುವ ಕೆಲಸ ನಡೆದಿದೆ. ಕೆಲವರು ಸುಮ್ಮನೆ ನಗರ ಪ್ರದಕ್ಷಿಣೆ ಹಾಕಿ ಬಂದಿರುವ ಬಗ್ಗೆಯೂ ಕೆಲವು ಸಾರ್ವಜನಿಕರು ದೂರಿದ್ದಾರೆ.

ಜಿಲ್ಲಾಡಳಿತ ಮಧ್ಯಾಹ್ನವರೆಗೆ ಸಮಯಾವಕಾಶ ನೀಡಿರುವುದರಿಂದ ಕೆಲವೊಂದು ಆಯಕಟ್ಟಿನ ಪ್ರದೇಶ ಹೊರತುಪಡಿಸಿ ಇತರೆಡೆಗಳಲ್ಲಿ ಪೊಲೀಸರೂ ಜನರನ್ನು ಪ್ರಶ್ನಿಸದಿರುವುದರಿಂದ ಜನರಿಗೆ ಹೆಚ್ಚು ಸಡಿಲಿಕೆ ಸಿಕ್ಕಂತಾಗಿದೆ.

ಸಾಮಾಜಿಕ ಅಂತರಕ್ಕೂ ನಿರ್ಲಕ್ಷ್ಯ
ಬಿಜೈ ಕಾಪಿಕಾಡ್‌, ಉರ್ವಸ್ಟೋರ್‌ ಮತ್ತು ಇತರ ಪ್ರದೇಶಗಳ ಕೆಲವು ಅಂಗಡಿಗಳಲ್ಲಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಕಾಬಿಟ್ಟಿ ನಿಂತು ದಿನಸಿ ಖರೀದಿಸಿರುವುದು ಸೋಮವಾರ ಕಂಡು ಬಂದಿದೆ. ಮಧ್ಯಾಹ್ನದವರೆಗೆ ನಿಯಮ ಸಡಿಲಿಕೆ ಯಿಂದಾಗಿ ಓಡಾಟ ನಡೆಸಿದರೆ, ಕೆಲವೆಡೆ ಮಧ್ಯಾಹ್ನ ಕಳೆದರೂ ಕಾರು, ಬೈಕ್‌ಗಳ ಓಡಾಟ ನಿರಂತರವಾಗಿತ್ತು. ಎಂ.ಜಿ. ರಸ್ತೆ, ಲಾಲ್‌ಬಾಗ್‌, ಲೇಡಿಹಿಲ್‌ ಮುಂತಾದೆಡೆ ಸೋಮವಾರ ಮಧ್ಯಾಹ್ನದ ಅನಂತರ ವಾಹನ ಸಂಚಾರ ನಡೆದಿತ್ತು. ಮಧ್ಯಾಹ್ನ 12 ಗಂಟೆ ಯವರೆಗೆ ದಿನಸಿ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದ್ದರೂ, ಕಳೆದ ಕೆಲ ದಿನಗಳಿಂದ ಕೆಲವು ಅಂಗಡಿಗಳಲ್ಲಿ 1 ಗಂಟೆಯವರೆಗೂ ಮಾರಾಟ ನಡೆಯುತ್ತಿದೆ.

ಜವಾಬ್ದಾರಿಯಿಂದ ಸಹಕರಿಸಿ
ಕೋವಿಡ್ 19 ಆತಂಕ ಜಿಲ್ಲೆಯಲ್ಲಿ ಹೆಚ್ಚುತ್ತಿರುವುದರಿಂದ ದಯವಿಟ್ಟು ಜನ ಈ ಬಗ್ಗೆ ನಿರ್ಲಕ್ಷé ವಹಿಸಬಾರದು. ಸ್ವಯಂ ಜವಾಬ್ದಾರಿಯಿಂದ ಮನೆಯೊಳಗೇ ಇದ್ದು ಸಹಕರಿಸಬೇಕು. ಅಗತ್ಯ ವಸ್ತುಗಳು ತೀರಾ ಅಗತ್ಯವಿದ್ದಲ್ಲಿ ಮಾತ್ರ ಜನ ಮನೆಯಿಂದ ಹೊರಬಂದು ಖರೀದಿಸಬೇಕು. ಜಾಗೃತಿಯೊಂದೇ ಪರಿಹಾರ.
 - ಸಿಂಧೂ ಬಿ. ರೂಪೇಶ್‌, ದ.ಕ. ಜಿಲ್ಲಾಧಿಕಾರಿ

ಟಾಪ್ ನ್ಯೂಸ್

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

10(1

Mannagudda: ಗುಜರಿ ಕಾರುಗಳ ಪಾರ್ಕಿಂಗ್‌; ಸಾರ್ವಜನಿಕರಿಗೆ ಸಮಸ್ಯೆ

9(1

Mangaluru: ರಸ್ತೆ, ಸರ್ಕಲ್‌ಗೆ ಸ್ಥಳೀಯ ನಾಮಕರಣ ಪ್ರಸ್ತಾವ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.