ಬೆಚ್ಚಗೆ ಕುಳಿತವರನ್ನು ಬೆಚ್ಚಿ ಬೀಳಿಸುವ ಗ್ರೂಫಿ

Team Udayavani, Aug 21, 2021, 11:37 AM IST

ಬೆಚ್ಚಗೆ ಕುಳಿತವರನ್ನು ಬೆಚ್ಚಿ ಬೀಳಿಸುವ ಗ್ರೂಫಿ

ನಾಯಕ ಕಾರ್ತಿಕ್‌ ರಾಜ್ಯದ ಪ್ರತಿಷ್ಟಿತ ಪತ್ರಿಕೆಯೊಂದರ ಪೋಟೋ ಜರ್ನಲಿಸ್ಟ್‌. ಜೀವವೈವಿದ್ಯತೆಗಳ ವಿಶೇಷ ವರದಿಯೊಂದಕ್ಕಾಗಿ ಪಶ್ಚಿಮ ಘಟ್ಟದ ದಟ್ಟ ಕಾನನದೊಳಗೆ ಪ್ರವೇಶಿಸುವ ನಾಯಕ, ಅಲ್ಲಿಯೇ ಇದ್ದ ಜಂಗಲ್‌ ಲಾಡ್ಜ್ ನಲ್ಲಿ ಉಳಿದುಕೊಂಡು ತನ್ನ ಕ್ಯಾಮೆರಾದಲ್ಲಿ ಪ್ರಕೃತಿ ಸೌಂದರ್ಯವನ್ನು ಸೆರೆ ಹಿಡಿಯುವ ಕೆಲಸದಲ್ಲಿ ನಿರತನಾಗುತ್ತಾನೆ.

ಹೀಗಿರುವಾಗ ಅದೇ ಕಾಡಿನಲ್ಲಿ ನಾಯಕನಿಗೆ ವಿಭಿನ್ನ ಸ್ವಭಾವದ ಐವರು ಅಪರಿಚಿತರು ಪರಿಚಯವಾಗುತ್ತಾರೆ. ನಂತರ ಈ ಪರಿಚಯ ನಿಧಾನವಾಗಿ ಸ್ನೇಹಕ್ಕೆ ತಿರುಗುತ್ತದೆ.ಈಐವರ ಜೊತೆ ಖುಷಿಯಿಂದ ದಿನ ಕಳೆಯುವುದರೊಳಗೆ, ಸಲೀಸಾಗಿ ಸಾಗುತ್ತಿದ್ದ ಚಿತ್ರದ ಕಥೆಗೆ ಅಲ್ಲೊಂದು ಅನಿರೀಕ್ಷಿತ ತಿರುವು ಸಿಗುತ್ತದೆ. ಇಂಟರ್ವಲ್‌ ವೇಳೆಗೆ ಆ ಐವರ ಜೊತೆಗಿದ್ದ ಹೀರೋ ಅವರ ನಿಜ ಮುಖವನ್ನು ನೋಡಿ ಬೆಚ್ಚಿ ಬೀಳುತ್ತಾನೆ! ಫ್ರೆಂಡ್‌ ಶಿಪ್‌, ಲವ್‌ ಟ್ರ್ಯಾಕ್‌ನಲ್ಲಿ ಸಾಗುತ್ತಿದ್ದ ಸಿನಿಮಾ ಹಾರರ್‌ ಟಚ್‌
ತೆಗೆದುಕೊಳ್ಳುತ್ತದೆ. ಅದು ಯಾಕೆ? ಹೇಗೆ? ಅನ್ನೋದಕ್ಕೆ ಮಧ್ಯಂತರದ ನಂತರ ಉತ್ತರ ಸಿಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಗ್ರೂಫಿ’ ಚಿತ್ರದ ಕಥೆಯ ಸಣ್ಣ ವಿವರಣೆ. ಕಥೆ ಮುಂದೇನಾಗುತ್ತದೆ ಅನ್ನೋ ಕುತೂಹಲವಿದ್ದರೆ, ಅದನ್ನ ನೀವು ತೆರೆಮೇಲೆ ನೋಡುವುದೇ ಒಳಿತು.

ಇದನ್ನೂ ಓದಿ :ಸರಕಾರಿ ಜಾಗ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ : ಅಧಿಕಾರಿಗಳಿಂದ ಕಾಮಗಾರಿಗೆ ತಡೆ

ಇಷ್ಟೆಲ್ಲ ಹೇಳಿದ ಮೇಲೆ “ಗ್ರೂಫಿ’ ಹಾರರ್‌ ಕಂ ಸಸ್ಪೆನ್ಸ್‌-ಥ್ರಿಲ್ಲರ್‌ ಸಿನಿಮಾ ಅನ್ನೋದು ನಿಮಗೆ ಗೊತ್ತಾಗಿರಬಹುದು. ಇಂದಿನ ಯುವ ಜನತೆಯ ಜೀವಕ್ಕೆ ಮಾರಕವಾಗುತ್ತಿರುವ ಸೆಲ್ಫಿ ಗೀಳಿನ ಎಳೆಯನ್ನ ಇಟ್ಟುಕೊಂಡು ಅದಕ್ಕೆ ಒಂದಿಷ್ಟು ‌ಸಿನಿಮ್ಯಾಟಿಕ್‌ ಅಂಶಗಳನ್ನು ಸೇರಿಸಿ ನಿರ್ದೇಶಕ ಡಿ. ರವಿ ಅರ್ಜುನ್‌ “ಗ್ರೂಫಿ’ಯನ್ನು ತೆರೆಗೆ ತಂದಿದ್ದಾರೆ. ಚಿತ್ರದ ‌ಮೊದಲಾರ್ಧ ಸ್ವಲ್ಪ
ನಿಧಾನವಾಗಿ ‌ ಸಾಗಿದರೂ, ಮಧ್ಯಂತರದಲ್ಲಿ ಕಥೆಗೆ ಸಿಗುವ ಅನಿರೀಕ್ಷಿತ ತಿರುವು ಪ್ರೇಕ್ಷಕರನ್ನ ಚಿತ್ರದ ದ್ವಿತಿಯಾರ್ಧವನ್ನು ನೋಡುವಂತೆ ಮಾಡುತ್ತದೆ.

ಚಿತ್ರಕಥೆ, ಸಂಭಾಷಣೆ ಮತ್ತು ನಿರೂಪಣೆ ಕೊಂಚ ಬಿಗಿಯಾಗಿದ್ದರೆ, “ಗ್ರೂಫಿ’ ಪ್ರೇಕ್ಷಕರಿಗೆ ಇನ್ನಷ್ಟು ‌ಪರಿಣಾಮಕಾರಿಯಾಗಿ ಮುಟ್ಟುವ ಸಾಧ್ಯತೆಗಳಿದ್ದವು.

ಇನ್ನು ಚಿತ್ರದ ಬಹುತೇಕ ಕಲಾವಿದರು‌ ಹೊಸಬರಾದರೂ, ಬಹುತೇಕ ಎಲ್ಲರದ್ದೂ ಅಚ್ಚುಕಟು ‌ r ಅಭಿನಯ. ಪೋಟೋ ಜರ್ನಲಿಸ್ಟ್‌ ಪಾತ್ರದಲ್ಲಿ ನಾಯಕ ಆರ್ಯನ್‌, ನಾಯಕಿ ಪದ್ಮಶ್ರೀ ಜೈನ್‌ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ನವಪ್ರತಿಭೆಗಳಾದ ಗಗನ್‌, ಉಮಾ ಮಯೂರಿ, ಸಂಧ್ಯಾ, ಪ್ರಜ್ವಲ್‌ ತಮ್ಮ ಪಾತ್ರಗಳನ್ನು ಚೆನ್ನಾಗಿ
ಅಭಿನಯಿಸಿದ್ದಾರೆ. ತಾಂತ್ರಿಕವಾಗಿ ಚಿತ್ರದ ಎರಡು ಹೈಲೈಟ್ ಅಂಶಗಳೆಂದರೆ, ಚಿತ್ರದ ‌ಸಂಗೀತ ಮತ್ತು ಛಾಯಾಗ್ರಹಣ. ವಿಜೇತ್‌ ಕೃಷ್ಣ ಸಂಗೀತ ಕೇಳುಗರ ಕಿವಿಯಲ್ಲಿ ಗುನುಗುಡುವಂತಿದ್ದು, ಛಾಯಾಗ್ರಹಣ ಪ್ರಕೃತಿ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ ‌ ಕಟ್ಟಿಕೊಟ್ಟಿದೆ. ಸಂಕಲನ ಕಾರ್ಯ ಅಲ್ಲಲ್ಲಿ ಸ್ವಲ್ಪ ಮಂದವಾದಂತೆ ಕಾಣುತ್ತದೆ.

ಕೆಲವು ಸಣ್ಣಪುಟ್ಟಲೋಪಗಳನ್ನುಬದಿಗಿಟ್ಟು ನೋಡುವುದಾದರೆ, “ಗ್ರೂಫಿ’ ಒಂದು ಸಾಮಾಜಿಕ ಸಂದೇಶವನ್ನು ಇಟ್ಟುಕೊಂಡು, ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಮಾಡಿದ ಚಿತ್ರ ಎನ್ನಬಹುದು. ಬೆಚ್ಚಗೆಕೂತ ಪ್ರೇಕ್ಷಕರನ್ನು ಅಲ್ಲಲ್ಲಿ ಬೆಚ್ಚಿ ಬೀಳಿಸುವ “ಗ್ರೂಫಿ’ಯನ್ನ ಒಮ್ಮೆ ನೋಡಿಬರಲು ಅಡ್ಡಿಯಿಲ್ಲ.

– ಜಿ.ಎಸ್‌.ಕೆ ಸುಧನ್‌

ಟಾಪ್ ನ್ಯೂಸ್

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

shreyas manju’s Vishnupriya movie releasing on Feb 21

ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ

31 days kannada movie

Kannada Movie: ನಿರಂಜನ್‌ ಶೆಟ್ಟಿಯ ʼ31 ಡೇಸ್‌ʼ ಚಿತ್ರ

kuladalli keelyavudo movie

Sandalwood: ಫಸ್ಟ್‌ಲುಕ್‌ನಲ್ಲಿ”ಕುಲದಲ್ಲಿ ಕೀಳ್ಯಾವುದೋ’

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.