ಬಡಾಬೆಟ್ಟು ಮದಗಕ್ಕೆ ಮರುಜೀವ ನೀಡಲು ಮುಂದಾದ ಗ್ರಾ.ಪಂ.
Team Udayavani, May 26, 2020, 5:40 AM IST
ತೆಕ್ಕಟ್ಟೆ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನದಿಂದ ಅಂತರ್ಜಲ ಬತ್ತಿ ಹೋಗುತ್ತಿದೆ. ಕುಂದಾಪುರ ತಾಲೂಕಿನ ಬೇಳೂರು ಗ್ರಾ.ಪಂ. ವ್ಯಾಪ್ತಿಯ ಸುಮಾರು 8 ಎಕರೆ ಬಡಾಬೆಟ್ಟು ಮದಗ ಬರಿದಾಗುತ್ತಿರುವುದನ್ನು ಮನಗಂಡ ಬೇಳೂರು ಗ್ರಾ.ಪಂ. ಆಡಳಿತ ತೆಗೆದುಕೊಂಡ ಮಹತ್ವಪೂರ್ಣ ನಿರ್ಣಯದಿಂದಾಗಿ ಪ್ರಸ್ತುತ ಸುಮಾರು 8 ಎಕರೆ ವಿಸ್ತೀರ್ಣದ ಬಡಾಬೆಟ್ಟು ಮದಗದ ಹೂಳೆತ್ತುವ ಕಾರ್ಯ ಚುರುಕುಕೊಂಡಿದೆ. ಬತ್ತಿದ ಮದಗಕ್ಕೆ ಮರುಜೀವ ನೀಡಲು ಗ್ರಾ.ಪಂ. ಮುಂದಾಗಿದೆ.
ನೂರಾರು ಎಕರೆ ಕೃಷಿ ಭೂಮಿ ಹಾಗೂ ಕುಡಿಯುವ ನೀರಿಗೆ, ಜನ ಜಾನು ವಾರುಗಳಿಗೆ ನೀರೊದಗಿಸುತ್ತಿದ್ದ ಮದಗ ಪ್ರತಿ ವರ್ಷ ಮೇ ತಿಂಗಳಲ್ಲಿ ಬತ್ತುತ್ತಿತ್ತು. ಈಗ ಸ್ಥಳೀಯಾಡಳಿತವು ಮದಗದಲ್ಲಿ ಶೇಖರಣೆಯಾದ ಹೂಳನ್ನು ಉಚಿತವಾಗಿ ನೀಡುವುದಾಗಿ ನಿರ್ಣಯಿಸಿದೆ. ಪರಿಣಾಮ, ಸ್ಥಳೀಯ ರಾದ ಸತೀಶ್ ಶೆಟ್ಟಿ ಎನ್ನುವವರು ಗ್ರಾ.ಪಂ. ನಿರ್ಣಯದಂತೆ ಮದಗ ಹೂಳನ್ನು ಯಂತ್ರಗಳ ಸಹಾಯದಿಂದ ತೆಗೆದು ತಮ್ಮ ಖಾಸಗಿ ಜಾಗಗಳಿಗೆ ಬಳಸಿಕೊಳ್ಳುವ ಜತೆಗೆ ಬರಿದಾದ ಮದಗದಲ್ಲಿ ನೀರು ಜಿನುಗಲು ಜಲ ಸಂರಕ್ಷಣೆಗೆ ಸಾಥ್ ನೀಡಿದ್ದಾರೆ.
ಅಂತರ್ಜಲ ವೃದ್ಧಿ
ಮದಗದ ಹೂಳೆತ್ತುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿ ಗ್ರಾಮದ ನೂರಾರು ಎಕರೆ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಜಲ್‌ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಸುಮಾರು 200 ಎಕರೆ ಮೊಗೆಬೆಟ್ಟು ಮದಗದ ಹೂಳೆತ್ತುವ ಮಹತ್ವಾಕಾಂಕ್ಷಿ ಯೋಜನೆ ಕೂಡ ಇದೆ.
-ಕರುಣಾಕರ ಶೆಟ್ಟಿ,
ಅಧ್ಯಕ್ಷರು, ಗ್ರಾ.ಪಂ. ಬೇಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.