GSB ಸಮಾಜ ಹಿತರಕ್ಷಣ ವೇದಿಕೆ: ಆ. 25: ಶೈಕ್ಷಣಿಕ ದತ್ತು ಸ್ವೀಕಾರ, ಪ್ರೇರಣ ಕಾರ್ಯಾಗಾರ
Team Udayavani, Aug 24, 2024, 12:25 AM IST
ಉಡುಪಿ: ಜಿಲ್ಲೆಯ ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆ ಹಾಗೂ ಸಮರ್ಪಣ ಚಾರಿಟೆಬಲ್ ಟ್ರಸ್ಟ್ ಮುದರಂಗಡಿ ಸಹಭಾಗಿತ್ವದಲ್ಲಿ ಜಿಎಸ್‌ಬಿ ವಿದ್ಯಾರ್ಥಿವೇತನ ವಿತರಣೆ, ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆ, ಶೈಕ್ಷಣಿಕ ಪ್ರೇರಣ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಸಮಾ ರಂಭವು ಆ. 25ರಂದು ಅಂಬಾಗಿಲು ಅಮೃತ್ ಗಾರ್ಡನ್ ಸಭಾಭವನದಲ್ಲಿ ಜರಗಲಿದೆ.
ವೇ|ಮೂ| ದಿ| ಪಡುಬಿದ್ರಿ ದೇವಿದಾಸ ಶರ್ಮರ ಮಕ್ಕಳು ಸ್ಥಾಪಿ ಸಿರುವ ದತ್ತಿನಿಧಿಯಿಂದ ಸಂಸ್ಕೃತ, ವೇದ, ತರ್ಕ, ಸುಧಾಪಾಠ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಗೌರವ ಪುರಸ್ಕಾರ ನೀಡಲಾಗುವುದು. ಕಾರ್ಕಳ ಭುವನೇಂದ್ರ ಪ್ರೌಢಶಾಲೆಯ 10ನೇ ಪರೀಕ್ಷೆಯಲ್ಲಿ ಸಂಸ್ಕೃತ ಭಾಷೆಯಲ್ಲಿ ಪೂರ್ಣ 125 ಅಂಕ ಗಳಿಸಿದ 10 ಮಂದಿಗೆ ತಲಾ 2 ಸಾ. ರೂ. ಪ್ರೋತ್ಸಾಹಧನ ನೀಡಿ ಗೌರವಿಸಲಾಗುವುದು. ದಾನಿಗಳಾದ ಕಾರ್ಕಳದ ಕೆ. ಕಮಲಾಕ್ಷ ಕಾಮತ್, ಬೈಲೂರು ಕಣಜಾರಿನಲ್ಲಿ ಅಶಕ್ತರಿಗೆ “ಹೊಸ ಬೆಳಕು’ ಆಶ್ರಮದ ಮೂಲಕ ಸೇವೆಗೈಯುತ್ತಿರುವ ಸಂಸ್ಥಾಪಕರಿಗೆ ವಿಶೇಷ ಗೌರವ ಪುರಸ್ಕಾರ ನೀಡಲಾಗುವುದು.
ಪ್ರತಿಭಾ ಪುರಸ್ಕಾರ
ಎಸೆಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯ ರ್‍ಯಾಂಕ್ ವಿಜೇತರು, ಸಿಇಟಿ, ಕಾಮೆಡ್‌ಕೆ, ಜಿಇಇ, ನೀಟ್‌ಗಳಲ್ಲಿ ನೂರರೊಳಗಿನ ರ್‍ಯಾಂಕ್ ಗಳಿಸಿದ ಪ್ರತಿಭಾನ್ವಿತರು, ಐಎಎಸ್, ಐಪಿಎಸ್, ಐಆರ್‌ಎಸ್, ಕೆಎಎಸ್ ಮೊದಲಾದ ಪರೀಕ್ಷೆಗಳಲ್ಲಿ ತೇರ್ಗಡೆಯಾದವರು, ಪಿಎಚ್.ಡಿ., ಸಿಎ ಪದವಿ ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ಸಂಕಷ್ಟದಲ್ಲಿರುವ ಜಿಎಸ್‌ಬಿ ಕುಟುಂಬಗಳ 1ನೇ ತರಗತಿಯಿಂದ ಸ್ನಾತಕೋತ್ತರ ಹಂತದವರೆಗಿನ 121 ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ಶುಲ್ಕದ ಖರ್ಚನ್ನು ಭರಿಸಲಾಗುವುದು. ಎಸೆಸೆಲ್ಸಿ ಮತ್ತು ಅನಂತರದ ತರಗತಿಗಳಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಜಿಎಸ್‌ಬಿ ಸಮುದಾಯದ ಅರ್ಹ 444 ಮಂದಿಗೆ ಶೈಕ್ಷಣಿಕ ಶುಲ್ಕ ಭರಿಸಲು ವಿದ್ಯಾರ್ಥಿವೇತನ ಒದಗಿಸಲಾಗುವುದು.
ಸಾಮಾಜಿಕ ಕಾಳಜಿ
ಸಾಣೂರು ಸ.ಪ.ಪೂ. ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಸರ್ವ ಜನಾಂಗದ 20 ಬಡ ಕೌಟುಂಬಿಕ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ತಲಾ 2 ಸಾ. ರೂ. ಪ್ರೋತ್ಸಾಹನಿಧಿ ನೀಡಲಾಗುವುದು. ಒಟ್ಟಾರೆ ಸೇವಾ ಚಟುವಟಿಕೆಗಳಿಗೆ ಈ ವರ್ಷ 1,01,81,000 ರೂ. ಮೀಸಲಿಡಲಾಗಿದೆ.
ಕುಟುಂಬ ಚೈತನ್ಯ ನಿಧಿ
ಜಿಎಸ್‌ಬಿ ಸಮಾಜದ 160 ತೀರಾ ದುರ್ಬಲ ಕುಟುಂಬಗಳ ಜೀವನೋಪಾಯಕ್ಕಾಗಿ ನಿರ್ದಿಷ್ಟ ಮೊತ್ತದ ಆರ್ಥಿಕ ನೆರವನ್ನು ಪ್ರತೀ ತಿಂಗಳು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಯೋಜನೆಗೆ 10 ವರ್ಷ ತುಂಬಿರುವ ನೆಲೆಯಲ್ಲಿ ಪ್ರತೀ ಕುಟುಂಬಕ್ಕೆ ತಲಾ 12 ಸಾ. ರೂ.ಗಳಂತೆ 19.50 ಲಕ್ಷ ರೂ. ನೆರವನ್ನು ಆಪದ್ಧನವಾಗಿ ನೀಡಲಾಗುವುದು. ಈ ಮೊತ್ತವನ್ನು ಡಾ| ಪಿ. ದಯಾನಂದ ಪೈ ನೀಡಿದ್ದಾರೆ. ಸಮಾಜ ಬಾಂಧವರ ನೆರವು ದೊರೆತಲ್ಲಿ 1 ಕುಟುಂಬದ ಎಲ್ಲ ಸದಸ್ಯರೂ ತೀವ್ರ ಅನಾರೋಗ್ಯ ಪೀಡಿತರಾಗಿರುವ ಸಾೖಬ್ರಕಟ್ಟೆಯ ಜಿಎಸ್‌ಬಿ ಕುಟುಂಬವೊಂದಕ್ಕೆ ಮನೆ ನಿರ್ಮಿಸಿಕೊಡುವ ಚಿಂತನೆಯಿದೆ ಎಂದು ವೇದಿಕೆಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.