![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 20, 2020, 8:41 PM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ಕ್ಷೌರದಂಗಡಿಯಲ್ಲಿ ಸಿಬಂದಿ ಮತ್ತು ಗ್ರಾಹಕರಿಗೆ ಸೋಂಕು ಹರಡದಂತೆ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ನೀಡಿದೆ.
ಜ್ವರ, ಶೀತ, ಕೆಮ್ಮು ಸೋಂಕು ಲಕ್ಷಣವಿರುವರಿಗೆ ಪ್ರವೇಶ ನಿಷೇಧಿಸಬೇಕು. ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಇಟ್ಟಿರಬೇಕು. ಅಂಗಡಿಯ ಎಲ್ಲ ಸಿಬಂದಿ ಕಡ್ಡಾಯವಾಗಿ ಮಾಸ್ಕ್, ತಲೆಗವಸು ಮತ್ತು ಅಪ್ರಾನ್ ಧರಿಸಿರಬೇಕು.
ಒಬ್ಬರಿಗೆ ಬಳಸಿದ ಟವೆಲ್, ಪೇಪರ್ ಶೀಟ್ ಅನ್ನು ಬೇರೊಬ್ಬರಿಗೆ ಬಳಸುವಂತಿಲ್ಲ. ಕ್ಷೌರಕ್ಕೆ ಬಳಸುವ ಪ್ರತಿ ಸಾಧನವನ್ನೂ ಶೇ. 7ರಷ್ಟು ಲೈಸಾಲ್ ದ್ರಾವಣದಿಂದ ಅರ್ಧ ಗಂಟೆ ಸ್ಯಾನಿಟೈಸ್ ಮಾಡಬೇಕು. ಪ್ರತಿ ಗ್ರಾಹಕನಿಗೆ ಕ್ಷೌರ ಮಾಡಿದ ಬಳಿಕ ಸಿಬಂದಿ ಹ್ಯಾಂಡ್ ವಾಶ್ ಮಾಡಿಕೊಳ್ಳಬೇಕು. ಅಂಗಡಿಯ ನೆಲ, ಗೋಡೆ ಸೇರಿದಂತೆ ಎಲ್ಲ ಪ್ರದೇಶವನ್ನೂ ಶೇ. 1 ಹೈಡ್ರೋಕ್ಲೋರೈಟ್ ಮಿಶ್ರಣದ ನೀರಿನಿಂದ ನಿತ್ಯ ಎರಡು ಬಾರಿ ಶುಚಿಗೊಳಿಸಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತರು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.