Gujarat ಏಷ್ಯಾದ ಶ್ರೀಮಂತ ಹಳ್ಳಿ: ಠೇವಣಿಯೇ 7 ಸಾವಿರ ಕೋಟಿ ರೂ.!
ಅನಿವಾಸಿ ಭಾರತೀಯರ ಹಣದಿಂದ ತುಂಬಿಕೊಂಡಿವೆ ಬ್ಯಾಂಕ್ಗಳು
Team Udayavani, Aug 23, 2024, 7:11 AM IST
ಅಹ್ಮದಾಬಾದ್: ಶ್ರೀಮಂತಿಕೆಗೆ ಹೆಸರು ವಾಸಿ ಯಾಗಿರುವ ಗುಜರಾತ್ ಈಗ ಏಷ್ಯಾದ ಅತೀ ಶ್ರೀಮಂತ ಹಳ್ಳಿ ಯನ್ನೂ ಹೊಂದಿದೆ. ಕಛ್ ನಲ್ಲಿರುವ ಮಾಧಾಪರ್ ಗ್ರಾಮವು ಏಷ್ಯಾದ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭುಜ್ನ ಹೊರ ವಲಯ ದಲ್ಲಿರುವ ಈ ಗ್ರಾಮದ ಜನರು 7 ಸಾವಿರ ಕೋಟಿ ರೂ. ನಿರಖು ಠೇವಣಿ (ಎಫ್.ಡಿ.) ಇರಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯೂ ಸರಿ ಸುಮಾರು 15-20 ಲಕ್ಷ ರೂ. ಠೇವಣಿ ಹೊಂದಿದ್ದಾನೆ.
ವಿದೇಶದಲ್ಲೇ ಹೆಚ್ಚು ನೆಲೆಸಿರುವ ಗ್ರಾಮಸ್ಥರು
ಪಟೇಲ್ ಸಮುದಾಯದವರೇ ಹೆಚ್ಚಾಗಿ ರುವ ಈ ಗ್ರಾಮದಲ್ಲಿ ಸುಮಾರು 32 ಸಾವಿರದಷ್ಟು ಜನಸಂಖ್ಯೆಯಿದೆ. ಇಲ್ಲಿಯ ಗ್ರಾಮಸ್ಥರು ಸಾಮಾನ್ಯ ವಾಗಿ ವ್ಯಾಪಾರವನ್ನೇ ಅವಲಂಬಿ ಸಿದ್ದು, ಬಹುತೇಕರು ವಿದೇಶ ದಲ್ಲಿ ನೆಲೆಸಿದ್ದಾರೆ. ವಿದೇಶ ದಲ್ಲಿದ್ದರೂ ತಮ್ಮ ತವರು ಮರೆಯದ ಇಲ್ಲಿನ ಜನ ಗ್ರಾಮದಲ್ಲಿರುವ ಬ್ಯಾಂಕ್ಗಳಲ್ಲೇ ತಮ್ಮ ಹಣವನ್ನು ಠೇವಣಿ ಇರಿಸುತ್ತಾರೆ. 20 ಸಾವಿರದಷ್ಟು ಮನೆಗಳಿರುವ ಈ ಗ್ರಾಮದ 1,200 ಕುಟುಂಬಗಳು ವಿದೇಶದಲ್ಲಿದ್ದು, ಹೆಚ್ಚಾಗಿ ಮಧ್ಯ ಆಫ್ರಿಕಾದ ದೇಶಗಳಲ್ಲಿ ನೆಲೆಸಿ ದ್ದಾರೆ. ಗುಜರಾತಿ ಉದ್ಯಮಿಗಳು ಸಾಮಾನ್ಯ ವಾಗಿ ಆಫ್ರಿಕಾದ ಕಟ್ಟಡ ನಿರ್ಮಾಣದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಇದಲ್ಲದೆ ಇಂಗ್ಲೆಂಡ್, ಆಸ್ಟ್ರೇಲಿಯಾ, ಅಮೆರಿಕ ಹಾಗೂ ನ್ಯೂಜಿಲೆಂಡ್ನಲ್ಲೂ ಅನೇಕರು ನೆಲೆಸಿದ್ದಾರೆ.
ಗ್ರಾಮವು ಮೂಲಸೌಕರ್ಯ ದಲ್ಲೂ ಉತ್ತಮ ವಾಗಿದ್ದು, ನೀರು, ನೈರ್ಮಲ್ಯ ಹಾಗೂ ಉತ್ತಮ ರಸ್ತೆ ಸಂಪರ್ಕವನ್ನೂ ಹೊಂದಿದೆ. ಗ್ರಾಮವು ಸುಸಜ್ಜಿತ ಬಂಗಲೆಗಳು, ಸರಕಾರಿ ಹಾಗೂ ಖಾಸಗಿ ಶಾಲೆಗಳು ಹಾಗೂ ದೇವಸ್ಥಾನವನ್ನು ಒಳಗೊಂಡಿದೆ.
ಗ್ರಾಮವೊಂದಕ್ಕೆ 17 ಬ್ಯಾಂಕ್ಗಳು
ಮಾಧಾಪರ್ನಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳಾದ ಎಚ್ಡಿಎಫ್ಸಿ, ಎಸ್ಬಿಐ, ಪಿಎನ್ಬಿ, ಆಕ್ಸಿಸ್, ಐಸಿಐಸಿಐ ಸಹಿತ 17 ಬ್ಯಾಂಕ್ಗಳ ಶಾಖೆಗಳು ಇವೆ. ಇನ್ನೂ ಪ್ರಮುಖ ಬ್ಯಾಂಕ್ಗಳು ಇಲ್ಲಿ ಶಾಖೆ ತೆರೆಯಲು ತಯಾರಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.