2 ರಾಜ್ಯಗಳಿಗೆ “ಎಲ್’ ನಂಟು : ಗುಜರಾತ್, ಮಧ್ಯಪ್ರದೇಶದಲ್ಲಿ ಸೋಂಕು
ಸಾವು ಹೆಚ್ಚಳಕ್ಕೆ ಇದೇ ಕಾರಣ
Team Udayavani, Apr 28, 2020, 12:29 PM IST
ಹೊಸದಿಲ್ಲಿ: ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ಕೋವಿಡ್ ಸಾವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಲು ಹಾಗೂ ಗುಣಮುಖರಾಗುತ್ತಿರುವ ರೋಗಿಗಳ ಪ್ರಮಾಣ ಕಡಿಮೆಯಾಗಲು ಕಾರಣವೇನಿರಬಹುದು? ಈ ಎರಡು ರಾಜ್ಯಗಳಲ್ಲಿ ಅಬ್ಬರಿಸುತ್ತಿರುವ ಕೋವಿಡ್ ವೈರಸ್ ನ ಕಣವು ಬೇರೆಡೆಗೆ ಹೋಲಿಸಿದರೆ ಭಿನ್ನವಾಗಿರುವುದೇ?
ಹೌದು ಎನ್ನುವ ಅನುಮಾನವನ್ನು ಅನೇಕ ತಜ್ಞರು ವ್ಯಕ್ತಪಡಿಸಿದ್ದಾರೆ. ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲು ವುಹಾನ್‌ನಲ್ಲಿ ಕಾಣಿಸಿಕೊಂಡ “ಎಲ್’ ವಿಧದ ವೈರಸ್ ನ ಕಣವೇ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ಈ ಕುರಿತು ಅಧ್ಯಯನಗಳು ಆರಂಭವಾಗಿದ್ದು, ಸದ್ಯದಲ್ಲೇ ಈ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದೂ ಹೇಳಿದ್ದಾರೆ.
ಕೋವಿಡ್ ವೈರಸ್‌ನಲ್ಲಿ ಎರಡು ರೀತಿಯ ಅಣುಗಳಿರುತ್ತವೆ. ಅವೆಂದರೆ, “ಎಸ್’ ಮತ್ತು “ಎಲ್’ ವಿಧದ ಅಣುಗಳು. ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ದಾಳಿ ಮಾಡಿರುವುದು “ಎಸ್’ ವಿಧದ ಕಣಗಳಾಗಿದ್ದರೆ, ಗುಜರಾತ್, ಮಧ್ಯಪ್ರದೇಶದಲ್ಲಿ (ವಿಶೇಷವಾಗಿ ಇಂದೋರ್‌ನಲ್ಲಿ) ಅಪಾಯಕಾರಿ “ಎಲ್’ ಕಣಗಳು ದಾಂಗುಡಿಯಿಟ್ಟಿವೆ. ಈ ಕಾರಣದಿಂದಾಗಿಯೇ ಈ ರಾಜ್ಯಗಳ ಮರಣ ಪ್ರಮಾಣ ಹೆಚ್ಚಿರುವುದು ಎಂದಿದ್ದಾರೆ ಆರೋಗ್ಯ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಜಯಂತಿ ರವಿ.
ಇಟಲಿ, ಸ್ಪೇನ್‌ನಲ್ಲೂ “ಎಲ್’ ದಾಳಿ: ಜಗತ್ತಿನ ಯಾವ ಪ್ರದೇಶಗಳಲ್ಲಿ ಸೋಂಕಿನಿಂದ ಹೆಚ್ಚಿನ ಸಾವು ನೋಟು ಉಂಟಾಗಿದೆಯೋ, ಅಲ್ಲೆಲ್ಲ “ಎಲ್’ ವಿಧದ ಕಣಗಳ ಕಾರುಬಾರು ಜೋರಾಗಿದೆ ಎಂದೇ ಅರ್ಥ. ಭಾರತದಲ್ಲಿ ಈ ರೀತಿಯ ಕಣವು ಗುಜರಾತ್, ಮಧ್ಯಪ್ರದೇಶದಲ್ಲಿ ಕಾಣಿಸಿಕೊಂಡರೆ, ವಿದೇಶಗಳಲ್ಲಿ ಚೀನಾದ ವುಹಾನ್, ಇಟಲಿ, ಸ್ಪೇನ್ ಮತ್ತು ನ್ಯೂಯಾರ್ಕ್ ನಲ್ಲಿ ಕಾಣಿಸಿಕೊಂಡಿವೆ. ಹೀಗಾಗಿಯೇ, ಈ ಎಲ್ಲ ಕಡೆಗಳಲ್ಲೂ ಸಾವಿನ ಸಂಖ್ಯೆ ಅಧಿಕವಾಗಿದೆ ಎಂದು ಸೋಂಕು ರೋಗಗಳ ತಜ್ಞ ಡಾ.ಅತುಲ್ ಪಟೇಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.