ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ
Team Udayavani, Jan 16, 2022, 9:22 PM IST
ಕೋಟ: ಸಾಲಿಗ್ರಾಮ ಶ್ರೀಗುರುನರಸಿಂಹ ಹಾಗೂ ಆಂಜನೇಯ ದೇವಸ್ಥಾನದ ವಾರ್ಷಿಕ ಬ್ರಹ್ಮರಥೋತ್ಸವ ರವಿವಾರ ಸಂಪನ್ನಗೊಂಡಿತು.
ಈ ಪ್ರಯುಕ್ತ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ರಥಾರೋಹಣ ನಡೆಯಿತು. ಭಕ್ತಾಧಿಗಳು ಗುರುನರಸಿಂಹ, ಆಂಜನೇಯನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಸಂಜೆ ರಥಾವರೋಹಣ ನಡೆಯಿತು ಹಾಗೂ ಓಲಗಮಂಟಪದಲ್ಲಿ ವಿಶೇಷ ಪೂಜೆ ಪುನಸ್ಕಾರ, ಅಷ್ಟಾವಧನ, ಮಹಾಮಂಗಳಾರತಿ, ಶಯನೋತ್ಸವ ಕಾರ್ಯಕ್ರಮಗಳು ಕಟ್ಟುಕಟ್ಟಲೆಯಂತೆ ನಡೆಯಿತು.
ಸರಳ ರೀತಿಯಲ್ಲಿ ಆಚರಣೆ :
ವಾರಾಂತ್ಯ ಕರ್ಫ್ಯೂ ಹಿನ್ನಲೆಯಲ್ಲಿ ಎಲ್ಲಾ ಧಾರ್ಮಿಕ ಮುಂತಾದ ಕಾರ್ಯಕ್ರಮಗಳು ಸರಳ ರೀತಿಯಲ್ಲಿ ನಡೆಯಿತು. ಜಾತ್ರೆಯಲ್ಲಿ ಜನದಟ್ಟನೆ ಕೂಡ ಸಾಕಷ್ಟು ಕಡಿಮೆ ಇತ್ತು. ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ನಿರ್ಬಂಧಿಸಲಾಗಿತ್ತು ಹಾಗೂ ಬೀದಿ ವ್ಯಾಪಾರಿಗಳ ಸಂಖ್ಯೆ ವಿರಳವಾಗಿತ್ತು.
ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಡಾ| ಕೆ.ಎಸ್. ಕಾರಂತ್, ಉಪಾಧ್ಯಕ್ಷ ವೇ| ಮೂ| ಗಣೇಶ್ಮೂರ್ತಿ ನಾವಡ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ ಐರೋಡಿ, ಖಜಾಂಚಿ ಪರಶುರಾಮ್ ಭಟ್ ಎಡಬೆಟ್ಟು, ಸದಸ್ಯರಾದ, ವೇ|ಮೂ| ಜಿ.ಚಂದ್ರಶೇಖರ್ ಉಪಾಧ್ಯ ಗುಂಡ್ಮಿ, ಮಾಜಿ ಆಡಳಿತ ಮೊಕ್ತೇಸರ ಎ. ಜಗದೀಶ್ ಕಾರಂತ ಹಾಗೂ ಕೂಟ ಮಹಾಜಗತ್ತು ಸಂಘಟನೆಯ ಮುಖ್ಯಸ್ಥರು, ಗ್ರಾಮಮೊಕ್ತೇಸರರು, ಭಕ್ತಾಧಿಗಳು ಉಪಸ್ಥಿತರಿದ್ದರು.
ಸ್ಥಳೀಯಾಡಳಿತದಿಂದ ಕೋವಿಡ್ ಮುಂಜಾಗೃತೆ :-
ಸ್ಥಳೀಯ ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ, ಮುಖ್ಯಾಧಿಕಾರಿ ಶಿವ ನಾಯ್ಕ್, ಆರೋಗ್ಯಾಧಿಕಾರಿ ಮಮತಾ ಹಾಗೂ ಸಿಬಂದಿಗಳು ಜಾತ್ರೆಯ ಆರಂಭದಿಂದ ಕೊನೆ ತನಕ ಉಪಸ್ಥಿತರಿದ್ದು ಆಗಮಿಸಿದ ಭಕ್ತಾಧಿಗಳಲ್ಲಿ ಮಾಸ್ಕ್ ಧರಿಸುವಂತೆ ತಿಳಿಹೇಳಿದರು ಹಾಗೂ ಮಾಸ್ಕ್ ಧರಿಸದವರಿಗೆ ಪ.ಪಂ. ವತಿಯಿಂದ ಉಚಿತವಾಗಿ ಮಾಸ್ಕ್ ನೀಡಿದರು. ದೇಗುಲದ ಒಳ ಹೊರಗೆ ನೂಕುನುಗ್ಗಳಾಗದಂತೆ ಎಚ್ಚರಿಕೆ ವಹಿಸಿದ್ದು ಕಂಡು ಬಂತು. ಆರಕ್ಷಕ ಸಿಬಂದಿಗಳು, ಸ್ವಯಂ ಸೇವಕರು ಕೂಡ ಜಾತ್ರೆಯ ಯಶಸ್ವಿಗೆ ಶ್ರಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್ ಶೆಟ್ಟಿ
Ajekar Case: ನ್ಯಾಯಾಂಗ ಬಂಧನ ವಿಸ್ತರಣೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Udupi: “ವಕ್ಫ್ ‘ ಸಮಸ್ಯೆ ಶೀರ್ಘ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ
Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್; ತಪ್ಪಿದ ಅನಾಹುತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.